Friday, October 4, 2024

ಫಿಫಾ ವಿಶ್ವಕಪ್‌ ಅರ್ಹತಾ ಪಂದ್ಯ: ಭಾರತಕ್ಕೆ ಜಯ

75ನೇ ನಿಮಿಷದಲ್ಲಿ ಮನ್ವೀರ್‌ ಸಿಂಗ್‌ ಗಳಿಸಿದ ಏಕೈಕ ಗೋಲಿನಿಂದ ಕುವೈತ್‌ ವಿರುದ್ಧ 1-0 ಜಯ ಗಳಿಸಿದ ಭಾರತ ತಂಡ ಫಿಫಾ ವಿಶ್ವಕಪ್‌ ಎಎಫ್‌ಸಿ ಅರ್ಹತಾ ಸುತ್ತಿನಲ್ಲಿ ಶುಭದ ಆರಂಭ ಕಂಡಿದೆ. FIFA World Cup qualifiers India beat Kuwait 1-0

ಮೋಹನ್‌ ಬಾಗನ್‌ ತಂಡದ ಫಾರ್ವರ್ಡ ಆಟಗಾರ ಮನ್ವಿಂದರ್‌ ಗಳಿಸಿದ ಏಕೈಕ ಗೋಲು ಭಾರತ ತಂಡಕ್ಕೆ 2026 ಫಿಪಾ ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ದಿಟ್ಟ ಹೆಜ್ಜೆ ಇಡುವಂತೆ ಮಾಡಿತು. 60,000 ಅಸನದ ಸಾಮರ್ಥ್ಯದ ಜಬರ್‌ ಅಲ್‌ ಅಹಮ್ಮದ್‌ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯಕ್ಕೆ ಕೊಲ್ಲಿ ರಾಷ್ಟ್ರದಲ್ಲಿ ನೆಲೆಸಿರುವ ಭಾರತದ ಫುಟ್ಬಾಲ್‌ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಭಾರತ ತಂಡಕ್ಕೆ ಪ್ರೋತ್ಸಾಹ ನೀಡಿರುವುದು ವಿಶೇಷವಾಗಿತ್ತು.

ಭಾರತ ಹಾಗೂ ಕುವೈತ್‌ ಅಂತಾರಾಷ್ಟ್ರೀಯ ಫುಟ್ಬಾಲ್‌ನಲ್ಲಿ ಮುಖಾಮುಖಿಯಾಗುತ್ತಿರುವುದು ಮೂರನೇ ಬಾರಿ. ಮೊದಲ ಪಂದ್ಯ ಗೋಲಿಲ್ಲದೆ ಡ್ರಾ ಗೊಂಡಿದ್ದರೆ, ಎರಡನೇ ಪಂದ್ಯ ಸ್ಯಾಫ್‌ ಗೇಮ್ಸ್‌ನಲ್ಲಿ ಭಾರತ ಪೆನಾಲ್ಟಿ ಶೂಟೌಟ್‌ ಮೂಲಕ ಜಯ ಗಳಿಸಿತ್ತು.

ಭಾನುವಾರ ರಾತ್ರಿ ನಡೆದ ಪಂದ್ಯದಲ್ಲಿ ಕುವೈತ್‌ ಹೆಚ್ಚಿನ ಕಾಲ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಗುರ್‌ಪ್ರೀತ್‌ ಸಿಂಗ್‌ ಸಂಧೂ ಭಾರತ ಪಾಲಿಗೆ ಗೋಡೆಯಾಗಿಯೇ ನಿಂತರು. ಪ್ರಥಮಾರ್ಧಲ್ಲಿ ಭಾರತಕ್ಕೆ ಅವಕಾಶ ವಿರಳವಾಗಿತ್ತು. ನಿಖಿಲ್‌ ಪೂಜಾರಿ ನೀಡಿದ ಪಾಸನ್ನು ಸುನಿಲ್‌ ಛೆಟ್ರಿ ಗೋಲಾಗಿಸುವಲ್ಲಿ ವಿಫಲರಾದರು. ಪ್ರಥಮಾರ್ಧ ಗೋಲಿಲ್ಲದೆ ಅಂತ್ಯಗೊಂಡಿತ್ತು,

ದ್ವಿತಿಯಾರ್ಧದಲ್ಲಿ ಕುವೈಟ್‌ ಇನ್ನೂ ಉತ್ತಮ ರೀತಿಯಲ್ಲಿ ದಾಳಿ ಆರಂಭಿಸಿತು. ಆದರೆ ಗೋಲಿನ ಅವಕಾಶ ಇರಲಿಲ್ಲ. 75ನೇ ನಿಮಿಷದಲ್ಲಿ ಮಿಜೋರಂನ ಆಟಗಾರ ಲಾಲ್ರಿಯಾಂಜುವಾಲ ಚಾಂಗ್ಟೆ ನೀಡಿದ ಪಾಸ್‌ಗೆ ಮನ್ವೀರ್‌ ಸಿಂಗ್‌ ಉತ್ತಮ ರೀತಿಯಲ್ಲಿ ಸ್ಪಂದಿಸಿ ಕುವೈತ್‌ನ ಗೋಲ್‌ಕೀಪರ್‌ನನ್ನು ವಂಚಿಸಿ ಗೋಲು ದಾಖಲಿಸುವಲ್ಲಿ ವಿಫಲರಾದರು. ಮುಂದಿನ ಪಂದ್ಯದಲ್ಲಿ ಭಾರತ ಭುವನೇಸ್ವರದಲ್ಲಿ ಹಾಲಿ ಚಾಂಪಿಯನ್‌ ಕತಾರ್‌ ವಿರುದ್ದ ಸೆಣಸಲಿದೆ.

Related Articles