Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಿಶ್ವಕಪ್‌ ಒಟ್ಟು ಬಹುಮಾನದ ಮೊತ್ತ 83,26,00,500 ರೂ.

ಅಹಮದಾಬಾದ್‌: ಕ್ರಿಕೆಟ್‌ ಅಭಿಮಾನಿಗಳ ಚಿತ್ತ ಈಗ ವಿಶ್ವಕಪ್‌ ಫೈನಲ್‌ನತ್ತ. ಭಾರತೀಯರಿಗೆ ಟೀಮ್‌ ಇಂಡಿಯಾ ಗೆಲ್ಲಬೇಕೇ ಹೊರತು ಅವರು ಗೆದ್ದರೆ ಎಷ್ಟು ಬಹುಮಾನ ಸಿಗುತ್ತದೆ ಎಂಬುದು ಮುಖ್ಯವಲ್ಲ. ಆದರೆ ಈ ಬಾರಿಯ ವಿಶ್ವಕಪ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಒಟ್ಟು 83.26 ಕೋಟಿ ರೂ.ಗಳ ಬಹುಮಾನ ಘೋಷಿಸಿದೆ. World Cup total cash prize Rs 83,26,00,500

ಚಾಂಪಿಯನ್‌ ತಂಡವು 33, 30,44,200 ರೂ.ಗಳನ್ನು ತನ್ನದಾಗಿಸಿಕೊಳ್ಳಲಿದೆ. ರನ್ನರ್‌ ಅಪ್‌ ತಂಡವು 16,65,22,100 ರೂ,ಗಳ ಒಡೆಯನಾಗಲಿದೆ. ಸೆಮಿಫೈನಲ್‌ನಲ್ಲಿ ಸೋತಿರುವ ನ್ಯೂಜಿಲೆಂಡ್‌ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ತಲಾ 6,66,11,760 ರೂ.ಗಳನ್ನು ಪಡೆದು ಮನೆ ಸೇರಿವೆ.

ಲೀಗ್‌ನಲ್ಲಿ ಸೋತ ಆರು ತಂಡಗಳು ತಲಾ 83,26,650 ರೂ. ಪಡೆದಿರುತ್ತವೆ. ಗ್ರೂಪ್‌ ಹಂತದಲ್ಲಿ ಗೆಲ್ಲುವ ತಂಡಗಳಿಗೆ ಪ್ರತಿಯೊಂದು ಜಯಕ್ಕೂ 33.30 ಲಕ್ಷ ರೂ,ಗಳನ್ನು ನೀಡಲಾಗಿದೆ. ಭಾರತೀಯ ಆಟಗಾರರಿಗೆ ಪಂದ್ಯದ ಶುಲ್ಕವೆಂದು ಪ್ರತಿ ಪಂದ್ಯಕ್ಕೂ 15 ಲಕ್ಷ ರೂ. ಸಿಗುತ್ತದೆ.

1983ರ ವಿಶ್ವಕಪ್‌ ಗೆದ್ದ ತಂಡಕ್ಕೆ ಫೈನಲ್‌ ಪಂದ್ಯದಲ್ಲಿ ಸಿಕ್ಕಿದ್ದು 2500 ರೂ. ಉಳಿದ ಪಂದ್ಯಗಳಿಗೆ ಪಂದ್ಯ ಶುಲ್ಕ 1500 ಹಾಗೂ ದಿನದ ಭತ್ಯೆ 600 ರೂ. ಇದರಿಂದ ಬೇಸರಗೊಂಡ ಲತಾ ಮಂಗೇಶ್ಕರ್‌ ದೆಹಲಿಯಲ್ಲಿ ಒಂದು ಸಂಗೀತ ಗೋಷ್ಠಿಯನ್ನು ಆಯೋಜಿಸಿ ಬಂದ ಹಣವನ್ನು ಆಟಗಾರರಿಗೆ ಹಂಚಿದ್ದಾರೆಂದು ವರದಿಗಳು ಹೇಳುತ್ತಿವೆ. ಬಿಸಿಸಿಐ ಆಟಗಾರರಿಗೆ ತಲಾ 25,000 ರೂ. ನೀಡಿತ್ತು.


administrator