ಹಾಕಿ : ಭಾರತ ಹಾಗೂ ಮಲೇಷ್ಯಾ ಪಂದ್ಯ ಡ್ರಾ

0
204

ಕೌಲಾಲಂಪುರ : ಮೂರನೇ ಕ್ವಾರ್ಟರ್‌ನಲ್ಲಿ 2-4 ಗೋಲುಗಳ ಅಂತರದಲ್ಲಿ  ಹಿನ್ನಡೆ ಕಂಡಿದ್ದರೂ ಭಾರತ ಮಹಿಳಾ ಹಾಕಿ ತಂಡ ಮಲೇಷ್ಯಾ ವಿರುದ್ಧದ ಹಾಕಿ ಸರಣಿಯ ಮೂರನೇ ಪಂದ್ಯದಲ್ಲಿ 4-4 ಗೋಲುಗಳಿಂದ ಡ್ರಾ ಸಾಧಿಸಿದೆ.

ಹಲವಾರು ಪ್ರಮಾದಗಳ ನಡುವೆಯೂ ‘ಭಾರತ ತಂಡ ಆರಂಭದಲ್ಲೇ 2-0 ಗೋಲುಗಳ ಅಂತರದಲ್ಲಿ ಮುನ್ನಡೆ ಕಂಡಿತ್ತು. ಈ ಎರಡು ಗೋಲುಗಳು ಪೆನಾಲ್ಟಿ ಕಾರ್ನರ್ ಮೂಲಕ ದಕ್ಕಿತ್ತು.  ನವಜೋತ್ ಕೌರ್ (13ನೇ ನಿಮಿಷ) ಹಾಗೂ ನವನೀತ್ ಕೌರ್ (22 ಹಾಗೂ 45ನೇ ನಿಮಿಷ) ಮತ್ತು ಲಾಲ್‌ರೆಮ್ಸಿಯಾಮಿ (54ನೇ ನಿಮಿಷ) ‘ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿದರು.
ಮಲೇಷ್ಯಾದ ಪರ ಗುರ್‌ದೀಪ್ ಕಿರಣ್‌ದೀಪ್ 26ನೇ ನಿಮಿಷದಲ್ಲಿ ಗೋಲು ಗಳಿಸಿದರು. ಹಿಂದಿನ ಎರಡೂ ಪಂದ್ಯಗಳಲ್ಲೂ 0-3 ಮತ್ತು 0-5 ಅಂತರದಲ್ಲಿ ಸೋತಿರುವ ಮಲೇಷ್ಯಾ ಪರ ಗುರ್‌ದೀಪ್ ಗಳಿಸಿದ ಗೋಲು ಸರಣಿಯ ಮೊದಲ ಗೋಲಾಗಿತ್ತು.  ನಂತರ ನುರೈನಿ ರಶೀದ್ ಪೆನಾಲ್ಟಿ ಕಾರ್ನರ್ ಮೂಲಕ ಗಳಿಸಿದ ಗೋಲು ಪಂದ್ಯವನ್ನು ಸಮಬಲಗೊಳಿಸಿತು. ನಂತರ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಮಲೇಷ್ಯಾದ ಪರ ನುರಾಮಿಹ್ರಾ ಜುಲ್ಕಿಫ್ಲಿ ಹಾಗೂ ನುರಾನಿ ರಶೀದ್ ಗಳಿಸಿದ ಗೋಲಿನಿಂದ ಮಲೇಷ್ಯಾ 4-2ರಲ್ಲಿ ಮುನ್ನಡೆ ಕಂಡಿತು. ಆದರೆ ನವನೀತ್ ಕೌರ್ ಹಾಗೂ ಲಾಲ್‌ರೆಮ್ಸಿಯಾಮಿ ಅಂತಿಮ ಕ್ಪಣದಲ್ಲಿ ಗಳಿಸಿದ ಗೋಲು ಭಾರತ ತಂಡವನ್ನು ಸೋಲಿನಿಂದ ಪಾರು ಮಾಡಿತು. ಬುಧವಾರ ಇತ್ತಂಡಗಳ ನಡುವೆ ನಾಲ್ಕನೇ ಪಂದ್ಯ ನಡೆಯಲಿದೆ.