Saturday, February 24, 2024

ಸ್ಪೇನ್‌ ವಿರುದ್ಧ ಸೇಡು ತೀರಿಸಿಕೊಂಡ ಭಾರತಕ್ಕೆ ನೇಷನ್ಸ್‌ ಕಪ್‌

ವೆಲೆನ್ಸಿಯಾ:

ಸ್ಪೇನ್‌ ವಿರುದ್ಧದ ಫೈನಲ್‌ ಪಂದ್ಯದಲ್ಲಿ 1-0 ಗೋಲಿನ ಅಂತರದಲ್ಲಿ ಜಯ ಗಳಿಸಿದ ಭಾರತ ಮಹಿಳಾ ಹಾಕಿ ತಂಡ ಎಫ್‌ಐಎಚ್‌ ನೇಷನ್ಸ್‌ ಕಪ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿದೆ. ಇದರೊಂದಿಗೆ ಮುಂದಿನ ವರ್ಷದ ಪ್ರೋ ಲೀಗ್‌ಗೆ ಅರ್ಹತೆ ಪಡೆಇದಿದೆ.

ಗುರ್ಜಿತ್‌ ಕೌರ್‌ 5ನೇ ನಿಮಿಷದಲ್ಲಿ ಗಳಿಸಿದ ಏಕೈಕ ಗೋಲಿನಿಂದ ಚಾಂಪಿಯನ್‌ ಪಟ್ಟ ಗೆದ್ದ ಭಾರತ ವಿಶ್ವಕಪ್‌ನಲ್ಲಿ ಅನುಭವಿಸಿದ ಸೋಲಿನ ಸೇಡು ತೀರಿಸಿಕೊಂಡಿತು.  ನಾಯಕಿ ಹಾಗೂ ಗೋಲ್‌ಕೀಪರ್‌ ಸವಿತಾ ಪೂನಿಯಾ ಅದ್ಭುತ ಪ್ರದರ್ಶನ ತೋರುವ ಮೂಲಕ ಸ್ಪೇನ್‌ಗೆ ಗೋಲು ಗಳಿಸಲು ಯಾವುದೇ ಅವಕಾಶ ಸಿಗಲಿಲ್ಲ.  ಈ ಜಯದೊಂದಿಗೆ ಭಾರತ ಟೂರ್ನಿಯಲ್ಲಿ ಆಡಿದ ಐದು ಪಂದ್ಯಗಳಲ್ಲಿ ಐದು ಜಯ ಗಳಿಸಿ ಹೊಸ ಇತಿಹಾದ ಬರೆಯಿತು.

ಚಿಲಿ ವಿರುದ್ಧದ ಪಂದ್ಯದಲ್ಲಿ 3-1,  ಜಪಾನ್‌ ವಿರುದ್ಧ 2-1, ದಕ್ಷಿಣ ಆಫ್ರಿಕಾ ವಿರುದ್ಧ 2-0, ಹಾಗೂ ಐರ್ಲೆಂಡ್‌ ವಿರುದ್ಧ ಪೆನಾಲ್ಟಿ ಶೂಟೌಟ್‌ನಲ್ಲಿ 2-1 ಗೋಲಿನಿಂದ ಜಯ ಗಳಿಸಿತ್ತು.

Related Articles