Friday, October 4, 2024

ಹಾಕಿ: ಜಪಾನ್‌ ವಿರುದ್ಧ 35 ಗೋಲು ದಾಖಲಿಸಿದ ಭಾರತ!

ಒಮನ್‌: ಕನ್ನಡಿಗ ಮೊಹಮ್ಮದ್‌ ರಾಹೀಲ್‌ 7 ಗೋಲುಗಳನ್ನು ದಾಖಲಿಸುವುದರೊಂದಿಗೆ ಪುರುಷರ ಏಷ್ಯನ್‌ ಹಾಕಿ 5s ವಿಶ್ವಕಪ್‌ ಅರ್ಹತಾ ಸುತ್ತಿನ ಪಂದ್ಯದಲ್ಲಿ Men’s Asian Hockey 5s World Cup Qualifier ಭಾರತ ತಂಡ ಜಪಾನ್‌ ವಿರುದ್ಧ 35-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ.

ಭಾರತದ ಪರ ಮಣಿಂದರ್‌ ಸಿಂಗ್‌ 10, ಬೆಂಗಳೂರಿನ ಮೊಹಮ್ಮದರ್‌ ರಾಹೀಲ್‌ 7, ಪವನ್‌ ರಾಜ್‌ಬೀರ್‌ 5, ಗುರ್‌ಜೊತ್‌ ಸಿಂಗ್‌ 5, ಸಖ್ವಿಂದರ್‌ 4, ನಾಯಕ ಮನ್‌ದೀಪ್‌ ಮೋರ್‌ 3, ಮತ್ತು ಜುಗ್‌ರಾಜ್‌ ಸಿಂಗ್‌ 1 ಜಯದ ರೂವಾರಿ ಎನಿಸಿದರು.

ಇದಕ್ಕೂ ಮುನ್ನ ಭಾರತ ತಂಡ ಮಲೇಷ್ಯಾ ವಿರುದ್ಧದ ಪಂದ್ಯದಲ್ಲಿ 7-5 ಅಂತರದಲ್ಲಿ ಜಯ ಗಳಿಸಿತ್ತು. ಈ ಜಯದೊಂದಿಗೆ ಒಟ್ಟು 12 ಅಂಕ ಗಳಿಸಿದರ ಭಾರತ ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನ ತಲುಪಿತು. ಈ ಜಯದೊಂದಿಗೆ ಭಾರತ ಸೆಮಿಫೈನಲ್‌ ತಲುಪಿದ್ದು, ಶನಿವಾರ ಎರಡನೇ ಸೆಮಿಫೈನಲ್‌ ಪಂದ್ಯವನ್ನಾಡಲಿದೆ.

Related Articles