Tuesday, November 12, 2024

ಪಂದ್ಯ ಡ್ರಾ, ಎಟಿಕೆಗೆ ತೀವ್ರ ನಿರಾಸೆ

ಗುವಾಹಟಿ, ಡಿಸೆಂಬರ್ 8

ಪರಿಶ್ರಮ, ಪ್ರಯತ್ನ ಇವುಗಳ ನಡುವೆಯೂ ಕೆಲವೊಮ್ಮೆ ಫಲ ಸಿಗವುದಿಲ್ಲ ಎಂಬುದಕ್ಕೆ ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಎಟಿಕೆ ನಡುವಿನ ಪಂದ್ಯ ಗೋಳಿಲ್ಲದೆ ಅಂತ್ಯಗೊಂಡಿದೆ.

ದ್ವಿತೀಯಾರ್ಧದಲ್ಲೂ ಇತ್ತಂಡಗಳು ತೀವ್ರ ಪೈಪೋಟಿ ನೀಡಿದರೂ ಅಲ್ಲಿ ಗೋಲು ದಾಖಲಾಗಲಿಲ್ಲ. ಇದರಿಂದಾಗಿ ಇಂಡಿಯನ್ ಸೂಪರ್ ಲೀಗ್ ನಲ್ಲಿ ಮತ್ತೊಂದು ಪಂದ್ಯ ಡ್ರಾ ದಲ್ಲಿ ಅಂತ್ಯಗೊಂಡಿತು. ಇಲ್ಲಿ ಎಟಿಕೆ ತಂಡಕ್ಕೆ ನಿಜವಾಗಿಯೂ ಜಯದ ಅಗತ್ಯ ಇದ್ದಿತ್ತು.ಗೆಲ್ಲಬೇಕೆಂಬ ಛಲ ಎರಡೂ ತಂಡಗಳಲ್ಲಿರುವುದು ಸಹಜ.
ಎಟಿಕೆ ಹಾಗೂ ನಾರ್ತ್ ಈಸ್ಟ್ ತಂಡಗಳು ಉತ್ತಮ ರೀತಿಯಲ್ಲಿ ಪೈಪೋಟಿ ನೀಡಿದ ಕಾರಣ ಪ್ರಥಮ ಹಂತದ ಪಂದ್ಯ ಗೋಲಿಲ್ಲದೇ ಕೊನೆಗೊಂಡಿತು. ಎಟಿಕೆ ತಂಡದ ಬಲ್ವಂತ್ ಸಿಂಗ್ ಅವರಿಗೆ ಗೋಲು ಗಳಿಸಲು ಉತ್ತಮ ರೀತಿಯಲ್ಲಿ ಅವಕಾಶವಿದ್ದಿತ್ತು. ಆದರೆ ಸಿಂಗ್ ಅದನ್ನು ಗೋಲಾಗಿಸುವಲ್ಲಿ ವಿಫಲರಾದರು. ಎಟಿಕೆ ತಂಡ ಚೆಂಡಿನ ಮೇಲೆ ಹೆಚ್ಚಿನ ನಿಯಂತ್ರಣ ಸಾಧಿಸಿತ್ತು. ಸ್ನಾಯು ಸೆಳೆತಕ್ಕೆ ಒಳಗಾದ ಮಿಸ್ಲಾವ್ ಕೊರೊರ್ಸಿಕಿ ಅವರು ಅಂಗಣದಿಂದ ಹೊರ ನಡೆಯಬೇಕಾಯಿತು. ಇದರಿಂದ ಆತಿಥೇಯ ತಂಡದ ಡಿಫೆನ್ಸ್ ವಿಭಾಗದ ಶಕ್ತಿ ಕುಂದುವುದು ಸಹಜ. ಆದರೆ ತಂಡದಲ್ಲಿ ಅವರ ಸ್ಥಾನವನ್ನು ತುಂಬುವ ಆಟಗಾರರಿರುವುದರಿಂದ ನಾರ್ತ್ ಈಸ್ಟ್ ಆತ್ಮವಿಶ್ವಾಸದಲ್ಲೇ ದ್ವಿತೀಯ ಹಂತದ ಹೋರಾಟಕ್ಕೆ ಸಜ್ಜಾಯಿತು.
ಹೀರೋ ಇಂಡಿಯನ್ ಸೂಪರ್ ಲೀಗ್‌ನಲ್ಲಿ ಮತ್ತೊಂದು ಕುತೂಹಲದ ಪಂದ್ಯ. ಮೂರನೇ ಸ್ಥಾನದಲ್ಲಿರುವ ನಾರ್ತ್ ಈಸ್ಟ್ ಯುನೈಟೆಡ್ ಹಾಗೂ ಆರನೇ ಸ್ಥಾನದಲ್ಲಿರುವ ಎಟಿಕೆ ತಂಡಗಳು ಪ್ಲೆ‘ ಆಫ್  ಸ್ಥಾನ ತಲುಪಲು ಮತ್ತೊಮ್ಮೆ ಮುಖಾಮುಖಿಯಾದವು. ನಾರ್ತ್ ಈಸ್ಟ್‌ಗಿಂತ ಎಟಿಕೆ ಕೇವಲ ನಾಲ್ಕು ಅಂಕ ಹಿಂದೆ ಇದೆ. ಆದ್ದರಿಂದ ಇತ್ತಂಡಗಳಿಗೂ ಮೂರು ಅಂಕ ಎಷ್ಟು ಪ್ರಮುಖ ಎಂಬುದು ಸ್ಪಷ್ಟವಾಗುತ್ತದೆ. ನಾರ್ತ್ ಈಸ್ಟ್ ಯುನೈಟೆಡ್ ತಂಡ ಇಂದು ಜಯ ಗಳಿಸಿದರೆ ಐಎಸ್‌ಎಲ್ ಇತಿಹಾಸದಲ್ಲೇ ತನ್ನದೇ ಆದ ಇತಿಹಾಸ ಬರೆಯಲಿದೆ. 22 ಅಂಕಗಳೊಂದಿಗೆ ಕಳೆದ ಬಾರಿಗಿಂತ ದ್ವಿಗುಣದಲ್ಲಿ ಅಂಕಗಳನ್ನು ಗಳಿಸಿದಂತಾಗುತ್ತದೆ. ಅದು ಕೂಡ 11 ಪಂದ್ಯಗಳಿಂದ. ಫೆಡರಿಕೊ ಗಲ್ಲೆಗೋ ನಾರ್ತ್ ಈಸ್ಟ್ ತಂಡದ ಪ್ರಮುಖ ಅಸ್ತ್ರ. ಈಗಾಗಲೇ ಮೂರು ಗೋಲುಗಳನ್ನು ಗಳಿಸಿರುವ ಗಲ್ಲೆಗೋ ಐದು ಗೋಲು ಗಳಿಕೆಯಲ್ಲಿ ನೆರವಾಗಿದ್ದಾರೆ. ಅದೇ ರೀತಿ ಮಾನ್ವೆಲ್ ಲಾನ್ಜೆರೊಟ್ ಕೂಡ ಎಟಿಕೆ ತಂಡದ ಪ್ರಮುಖ ಅಸ್ತ್ರ. ಹಿಂದಿನ ಪಂದ್ಯದಲ್ಲಿ ಅವರು 2 ಗೋಲುಗಳನ್ನು ಗಳಿಸಿದ್ದರು. ಬರೇ ಗೋಲು ಗಳಿಸುವುದಲ್ಲ, ಪ್ರತಿಯೊಂದು ಕ್ಷೇತ್ರದಲ್ಲೂ ಲಾನ್ಜೆರೋಟ್ ತಂಡಕ್ಕೆ ಆಧಾರವೆನಿಸಿದ್ದಾರೆ.

Related Articles