ಮುಂಬೈ
ಎಡು ಬೇಡಿಯ (28ನೇ ನಿಮಿಷ) ಹಾಗೂ ಫರಾನ್ ಕೊರೊಮಿನಾಸ್ (79ನೇ ನಿಮಿಷ) ಅವರ ಪೆನಾಲ್ಟಿ ಗೋಲಿನ ನೆರವಿನಿಂದ ಗೋವಾ ತಂಡ ಮುಂಬೈ ಸಿಟಿ ಎಫ್ ಸಿ ವಿರುದ್ಧ 2-0 ಗೋಲಿನಿಂದ ಜಯ ಗಳಿಸಿ ಇಂಡಿಯನ್ ಸೂಪರ್ ಲೀಗ್ ನ ಪ್ಲೇ ಆಫ್ ಹಂತಕ್ಕೆ ಮತ್ತಷ್ಟು ಹತ್ತಿರವಾಯಿತು.
ಆರಂಭದಲ್ಲಿ ಗೋವಾ ವಿರುದ್ಧ ಅನುಭವಿಸಿದ ಹೀನಾಯ ಸೋಲಿನ ಸೇಡು ತೀರಿಸಿಕೊಳ್ಳುವ ಗುರಿಯೊಂದಿಗೆ ಅಂಗಣಕ್ಕಿಳಿದ ಮುಂಬೈ ತಂಡಕ್ಕೆ ಗೆಲುವು ಒತ್ತಟ್ಟಿಗಿರಲಿ, ಸೋಲಿನಿಂದಲೂ ಪಾರಾಗಲಾಗಲಿಲ್ಲ. ಸತತ ಒಂಬತ್ತು ಪಂದ್ಯಗಳಲ್ಲಿ ಸೋಲು ಕಾಣದ ಮುಂಬೈ ಗೆ ಗೋವಾ ತಂಡ ಮತ್ತೆ ಸೋಲಿನ ಹಾದಿ ಹಿಡಿಸಿತು.
ಗೋವಾಕ್ಕೆ ಮುನ್ನಡೆ
28ನೇ ನಿಮಿಷದಲ್ಲಿ ಎಡು ಬೇಡಿಯಾ ಗಳಿಸಿದ ಗೋಲಿನಿಂದ ಗೋವಾ ತಂಡ ಪಂದ್ದ ಮೇಲೆ ಮುನ್ನಡೆ ಕಂಡಿತು. ಇತ್ತಂಡಗಳು ಆರಂ‘ದಲ್ಲೇ ಆಕ್ರಮಣಕಾರಿ ಆಟ ಪ್ರದರ್ಶಿಸಿದವು. ಮುಂಬೈ ಪ್ರೇಕ್ಷಕರ ಬೆಂಬಲ ಆತಿಥೇಯ ತಂಡಕ್ಕಿದ್ದರೂ ಪ್ರವಾಸಿ ಗೋವಾ ಬೇಗನೇ ಪಂದ್ಯಕ್ಕೆ ಹೊಂದಿಕೊಂಡು ತನ್ನ ನೈಜ ಆಟ ಪ್ರದರ್ಶಿಸಲಾರಂಭಿಸಿತು. ಪ್ರತಿಯೊಂದು ಹಂತದಲ್ಲೂ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಗೋವಾಕ್ಕೆ 28ನೇ ನಿಮಿಷದಲ್ಲಿ ಎಡು ಬೇಡಿಯಾ ಮೂಲಕ ಯಶಸ್ಸು ದಕ್ಕಿತು. ಕೆಲ ನಿಮಿಷಗಳಲ್ಲೇ ಗೋವಾ ತಂಡಕ್ಕೆ ಗೋಲುಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಅವಕಾಶವಿದ್ದಿತ್ತು. ಆದರೆ ಮುಂಬೈ ಡಿಫೆನ್ಸ್ ವಿಭಾಗ ಅದಕ್ಕೆ ಅವಕಾಶ ಕಲ್ಪಿಸಲಿಲ್ಲ.
ಮುಂಬೈ ಹಾಗೂ ಗೋವಾ ನಡುವಿನ ಪಂದ್ಯವೆಂದರೆ ಅದು ಡಿಫೆನ್ಸ್ ಹಾಗೂ ಅಟ್ಯಾಕ್ ನಡುವಿನ ಪೈಪೋಟಿಯಾಗಿರುತ್ತದೆ. ಎರಡನೇ ಸ್ಥಾನದಲ್ಲಿರುವ ಮುಂಬೈ ಸಿಟಿ ಹಾಗೂ ನಾಲ್ಕನೇ ಸ್ಥಾನದಲ್ಲಿರುವ ಗೋವಾ ನಡುವಿನ ಪಂದ್ಯ ಒಂದು ರೀತಿಯಲ್ಲಿ ಸೇಡಿನ ಪಂದ್ಯವಾಗಿದೆ. ಬೆಂಗಳೂರು ತಂಡವನ್ನು ಹೊರತುಪಡಿಸಿದರೆ ಮುಂಬೈ ಎಫ್ ಸಿ ಈ ಬಾರಿಯ ಐಎಸ್‌ಎಲ್‌ನಲ್ಲಿ ಇದುವರೆಗೂ ಉತ್ತಮ ತಂಡವೆನಿಸಿದೆ. ಈ ಹಿಂದಿನ ಪಂದ್ಯದಲ್ಲಿ ಬೆಂಗಳೂರಿಗೆ ಸೋಲುಣಿಸುವ ಮೂಲಕ ಮುಂಬೈ ಅಗ್ರ ಸ್ಥಾನಕ್ಕೇರಿತು, ಆದರೆ ಬೆಂಗಳೂರು ತಂಡ ನಾರ್ತ್ ಈಸ್ಟ್ ವಿರುದ್ಧ ಜಯ ಗಳಿಸುವ ಮೂಲಕ ಮುಂಬೈ ಮತ್ತೆ ಎರಡನೇ ಸ್ಥಾನಕ್ಕೆ ಕುಸಿಯಿತು. 27 ಗೋಲುಗಳನ್ನು ಗಳಿಸಿರುವ ಗೋವಾ ತಂಡ ಅತ್ಯಂತ ಅಪಾಯಕಾರಿ ಎನಿಸಿದೆ.
ಗೋವಾ ತಂಡ ಜೆಮ್ಷೆಡ್ಪುರ ತಂಡದ ವಿರುದ್ಧ ಗೋಲು ಗಳಿಸುವಲ್ಲಿ ವಿಲವಾಗಿ ಡ್ರಾಗೆ ತೃಪ್ತಿಪಟ್ಟು ಮುಂಬೈಗೆ ಆಗಮಿಸಿತು. ಮುಂಬೈ ಸಿಟಿ ತಂಡದ ಗೋಲ್‌ಕೀಪರ್ ಅರ್ಮಿಂದರ್ ಸಿಂಗ್ ಈ ಬಾರಿ ಐಎಸ್‌ಎಲ್‌ನಲ್ಲಿ ಅತಿ ಹೆಚ್ಚು ಗೋಲುಗಳನ್ನು ರಕ್ಷಣೆ ಮಾಡಿದ ಗೋಲ್‌ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗೋವಾ ವಿರುದ್ಧ ಸೋಲನು‘ವಿಸಿದ ನಂತರ ಮುಂಬೈ ತಂಡ ಆಡಿದ ಒಂಬತ್ತು ಪಂದ್ಯಗಳಲ್ಲಿ ಸೋಲನು‘ವಿಸಿರಲಿಲ್ಲ, ಮುಂಬೈ ಹಾಗೂ ಗೋವಾ ನಡುವಿನ ಪಂದ್ಯ ಸೇಡಿನ ಪಂದ್ಯವೆಂದು ಕರೆಯಲು 5-0 ಗೋಲುಗಳ ಅಂತರದ ಸೋಲೇ ಕಾರಣ. ಫೆರಾನ್ ಕೊರೊಮಿನಾಸ್ ಹತ್ತು ಗೋಲುಗಳನ್ನು ಗಳಿಸಿ ಗೋಲ್ಡನ್ ಬೂಟ್ ಗೆಲ್ಲುವ ಫೇವರಿಟ್ ಎನಿಸಿದ್ದಾರೆ. ಆದರೆ ಕೊರೊಮಿನಾಸ್ ಅವರ ದಾಖಲೆಗಳ ಬಗ್ಗೆ ಹೆಚ್ಚು ಗಮನ ಹರಿಸದೆ ದಿನದ ಪಂದ್ಯದಲ್ಲಿ ಅವರನ್ನು ನಿಯಂತ್ರಿಸುವ ಯೋಜನೆಯನ್ನು ಮುಂಬೈ ತಂಡ ಹಾಕಿಕೊಂಡಿದೆ.