Friday, December 13, 2024

ಕೆಎಸ್‌ಸಿಎ ಲೀಗ್ : ಟಾರ್ಪೆಡೋಸ್ ತಂಡಕ್ಕೆ ಜಯ

ಸ್ಪೋರ್ಟ್ಸ್ ಮೇಲ್ ವರದಿ

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ, ಮಂಗಳೂರು ವಲಯ ಮೂರನೇ ಡಿವಿಜನ್ ಕ್ರಿಕೆಟ್ ಲೀಗ್‌ನಲ್ಲಿ  ಕರಾವಳಿಯ ಬಲಿಷ್ಠ ತಂಡ ಟಾರ್ಪೆಡೋಸ್ ಕ್ರಿಕೆಟ್ ಕ್ಲಬ್ ವೈಆರ್‌ಸಿ ತಂಡದ ವಿರುದ್ಧ 7 ವಿಕೆಟ್ ಜಯಗಳಿಸಿ ದಿಟ್ಟ ಹೆಜ್ಜೆಯೊಂದಿಗೆ ಮುನ್ನಡೆದಿದೆ.

ಸುರತ್ಕಲ್‌ನ ಎನ್‌ಐಟಿಕೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ವೈಆರ್‌ಸಿ ತಂಡ 31.4 ಓವರ್‌ಗಳಲ್ಲಿ 134 ರನ್‌ಗೆ ಸರ್ವ ಪತನ ಕಂಡಿತು.  ಸುರೇಶ್ ಶೆಟ್ಟಿ 74 ಎಸೆತಗಳಲ್ಲಿ 53 ರನ್ ಗಳಿಸಿ ತಂಡದ ಸಾಧಾರಣ ಮೊತ್ತದಲ್ಲಿ ಪ್ರಮುಖ ಪಾತ್ರವಹಿಸಿದರು. ಟಾರ್ಪೆಡೋಸ್ ಪರ ರಜೀನ್ ಹುಸೇನ್  9.1 ಓವರ್‌ಗಳಲ್ಲಿ  40 ರನ್‌ಗೆ 3 ವಿಕೆಟ್ ಗಳಿಸಿ ವೈಆರ್‌ಸಿ ರನ್ ಗಳಿಕೆಗೆ ನಿಯಂತ್ರಣ ಹೇರಿದರು.
ಸಾ‘ಾರಣ ಮೊತ್ತವನ್ನು ಬೆಂಬತ್ತಿದ ಟಾರ್ಪೆಡೋಸ್ ತಂಡ  ಆಶೀಶ್ ಶೆಟ್ಟಿ (62 ನಾಟೌಟ್) ಹಾಗೂ ವಿಜೀಶ್ ಕೋಟ್ಯಾನ್ (38 ನಾಟೌಟ್) ಅವರ ಸ್ಫೋಟಕ ಬ್ಯಾಟಿಂಗ್ ನೆರರವಿನಿಂದ  ಕೇವಲ 21.3 ಓವರ್‌ಗಳಲ್ಲಿ ಜಯದ ಗುರಿ ತಲುಪಿತು. ಆಶೀಶ್ ಶೆಟ್ಟಿ 62 ಎಸೆತಗಳಲ್ಲಿ ಅಜೇಯ 62 ರನ್ ಗಳಿಸಿದರೆ, ವಿಜೀಶ್ ಕೋಟ್ಯಾನ್ 42 ಎಸೆತಗಳಲ್ಲಿ 38 ರನ್ ಗಳಿಸಿ ಜಯದ ರೂವಾರಿ ಎನಿಸಿದರು.

Related Articles