Monday, April 15, 2024

ಕಟಪಾಡಿ ಕೆಆರ್‌ಎಸ್‌ಗೆ ರಿಪಬ್ಲಿಕ್ ಟ್ರೋಫಿ

ಸ್ಪೋರ್ಟ್ಸ್ ಮೇಲ್ ವರದಿ

ಬೆಳ್ಳಿಪ್ಪಾಡಿ ಆಳ್ವಾ ಕ್ರಿಕೆಟ್ ಅಕಾಡೆಮಿಯು ಜನವರಿ 26ರಂದು ಆಯೋಜಿಸಿದ್ದ  13 ವರ್ಷ ವಯೋಮಿತಿಯ ರಿಪಬ್ಲಿಕ್ ಟ್ರೋಫಿ 2019ನ್ನು ಕಟಪಾಡಿಯ ಕೆಆರ್‌ಎಸ್ ತಂಡ ಗೆದ್ದುಕೊಂಡಿತು. ಬಿಎಸಿಎ ಹಾಗೂ ಕೆಆರ್‌ಎಸ್ ಕಟಪಾಡಿ ತಂಡಗಳ ನುಡುವೆ ನಾಲ್ಕು ಪಂದ್ಯಗಳ ಸರಣಿ ನಡೆದಿದ್ದು, ಕಟಪಾಡಿ 3-1 ಅಂತರದಲ್ಲಿ ಜಯ ಗಳಿಸಿತು.

ಹಲವಾರು ವರ್ಷಗಳಿಂದ ತಮ್ಮ ಆಳ್ವಾಸ್ ಅಕಾಡೆಮಿ ಮೂಲಕ ಯುವ ಪ್ರತಿಭೆಗಳಿಗೆ ಪ್ರೋತ್ಸಾಹ ನೀಡಿ ಅವರು ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಮಿಂಚುವಂತೆ ಮಾಡುತ್ತಿರುವ ಬ್ರಹ್ಮಾವರ ಎಸ್.ಎಂ.ಎಸ್ ಕಾಲೇಜಿನ ಉಪನ್ಯಾಸಕ ಹಾಗೂ ಬಿಎಸಿಎ ಅಕಾಡೆಮಿಯ  ನಿರ್ದೇಶಕ ವಿಜಯ್ ಆಳ್ವಾ ಈಗ ಹಂಗಾರಕಟ್ಟೆಯ ಚೇತನ ಪ್ರೌಢ ಶಾಲೆಯಲ್ಲಿ ತಮ್ಮ ಅಕಾಡೆಮಿಯನ್ನು ಸ್ಥಾಪಿಸಿದ್ದು, ಇದರಿಂದ ಸ್ಥಳೀಯ ಯುವ ಕ್ರಿಕೆಟಿಗರಿಗೆ ಅವಕಾಶ ಸಿಗುವಂತಾಗಿದೆ. ಗಣರಾಜ್ಯೋತ್ಸವ ದಿನದಂದು ನಡೆದ  13 ವರ್ಷ ವಯೋಮಿತಿಯ  ಕ್ರಿಕೆಟ್ ಸರಣಿಯ ಉದ್ಘಾಟನಾ ಸಮಾರಂ‘ದಲ್ಲಿ ಮುಖ್ಯಅತಿಥಿಗಳಾಗಿ ಕೊಕ್ಕರ್ಣೆಯ ಕುಮ್ದಾವತಿ ಡಿಎಡ್ ಕಾಲೇಜಿನ ಸುರೇಶ್ ಕೆ.ಆರ್. ಶೆಟ್ಟಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಅತಿಥಿಗಳಾಗಿ ಪ್ರೊೆಫೆಸರ್ ಬಾಲಕೃಷ್ಣ ಶೆಟ್ಟಿ ಮ್ಯಾನೇಜ್‌ಮೆಂಟ್ ಕಾಲೇಜಿನ ಪ್ರಾಂಶುಪಾಲರಾದ ಬಿ.ಡಿ. ಶೆಟ್ಟಿ, ಚೇತನ ಹೈಸ್ಕೂಲ್‌ನ ಕಾರ್ಯದರ್ಶಿ ಇಬ್ರಾಹಿಂ ಸಾಹೇಬ್, ಚೇತನ ಹೈಸ್ಕೂಲ್‌ನ ದೈಹಿಕ ಶಿಕ್ಷಕರಾದ ಹರ್ಷವರ್ದನ ಶೆಟ್ಟಿ, ಬಿಎಸಿಎಯ ಪ್ರಧಾನ ಕೋಚ್ ವಿಜಯ್ ಆಳ್ವಾ ಹಾಗೂ ಕೆಆರ್‌ಎಸ್ ಸಿಎಯ ಉದಯ್ ಕುಮಾರ್ ಹಾಜರಿದ್ದರು.
ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ  ಚೇತನಾ ಮ್ಯಾನೇಜ್‌ಮೆಂಟ್ ಕಾಲೇಜು ಮಾಬುಕಳ ಇದರರ ಅಧ್ಯಕ್ಷರಾದ ಭರತ್ ಕುಮಾರ್ ಶೆಟ್ಟಿ ಮಾತನಾಡಿ, ಟೂರ್ನಿಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಆಳ್ವಾ ಅವರ ಮುಂದಾಳತ್ವದಲ್ಲಿ  ಅಕಾಡೆಮಿಯಿಂದ ಉತ್ತಮ ಆಟಗಾರರು ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಮಿಂಚಲಿ ಎಂದು ಶುಭ  ಹಾರೈಸಿದರು. ಎಕ್ತಾ ಈವೆಂಟ್ ಮ್ಯಾನೇಜ್‌ಮೆಂಟ್‌ನ ಅಧ್ಯಕ್ಷ ಖಲೀಲ್ ಕಿರಾಡಿ ಅವರು ಮಾತನಾಡಿ, ಮಾಬುಕಳ ಪರಿಸರದಲ್ಲಿ ಚಿಕ್ಕ ಮಕ್ಕಳಿಗೆ ತರಬೇತಿಗೆ ಅವಕಾಶ ಸಿಕ್ಕಿರುವುದು ನಿಜಕ್ಕೂ ಗಮನಾರ್ಹ. ಈಗ ಕ್ರಿಕೆಟ್‌ನಲ್ಲಿ ಸಾಕಷ್ಟು ಅವಕಾಶಗಳಿವೆ. ಕೇವಲ ಭಾರತ ತಂಡವನ್ನು ಗುರಿಯಾಗಿಸಿಕೊಳ್ಳಬೇಕಾಗಿಲ್ಲ, ಐಪಿಎಲ್, ಕೆಪಿಎಲ್‌ನಂತ ಲೀಗ್‌ನಲ್ಲೂ ಮಿಂಚಬಹುದು ಎಂದರು.  ಚೇನತಾ ಕಾಲೇಜಿನ ಪ್ರಾಂಶಸುಪಾಲರಾದ ಗಣೇಶ್ ಜಿ, ಕಲ್ಯಾಣಿ ಸ್ಪೋರ್ಟ್ಸ್‌ನ ಸುನಿಲ್ ಕುಮಾರ್, ಎಕ್ತಾ ಈವೆಂಟ್ ಮ್ಯಾನೇಜ್‌ಮೆಂಟ್‌ನ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಕುಂದರ್ ಉಪಸ್ಥಿತರಿದ್ದರು.
ಫೈನಲ್ ಪಂದ್ಯದ ಮ್ಯಾನಆ್ ದಿ ಮ್ಯಾಚ್ ಗೌರವಕ್ಕೆ ಕೆಆರ್‌ಎಸ್‌ನ ವಿನೀತ್ ಪಾತ್ರರಾದರು.  ಬೆಸ್ಟ್ ಬೌಲರ್ ಆಗಿ ಬಿಎಸಿಎ ತಂಡದ ಶ್ರೀಹರಿ, ಬೆಸ್ಟ್ ಬ್ಯಾಟ್ಸ್‌ಮನ್ ಆಗಿ ಕೆಆರ್‌ಎಸ್‌ನ ಆದಿತ್ಯ ಶೆಟ್ಟಿ ಹಾಗೂ ಮ್ಯಾನ್ ಆ್ ದಿ ಸಿರೀಸ್ ಗೌರವಕ್ಕೆ ಆರ್ಯನ್ ಪಾತ್ರರಾದರು.
ಅಕಾಡೆಮಿಯ ಅಧ್ಯಕ್ಷ ವಿಜಯ ಆಳ್ವ ಕಾರ್ಯಕ್ರಮ ನಿರೂಪಿಸಿದರು, ಉದಯ ಕುಮಾರ್ ಧನ್ಯವಾದ ಸಲ್ಲಿಸಿದರು.

Related Articles