Saturday, October 12, 2024

ಮುಂಬೈಗೆ ತಲೆ‌ ಬಾಗಿದ ಬಾಗನ್

 sportsmail           

ಹಾಲಿ ಚಾಂಪಿಯನ್ನರಂತೆಯೇ ದಿಟ್ಟ ಆಟ ಪ್ರದರ್ಶಿಸಿದ ಮುಂಬೈ ಸಿಟಿ ಎಫ್‌ ಸಿ ತಂಡ ಹೀರೋ ಇಂಡಿಯನ್‌ ಸೂಪರ್‌ ಲೀಗ್‌ ಪಂದ್ಯದಲ್ಲಿ ಬಲಿಷ್ಠ ಮೋಹನ್‌ ಬಾಗನ್‌ ವಿರುದ್ಧ 5-1 ಗೋಲುಗಳ ಅಂತರದಲ್ಲಿ ಜಯ ಗಳಿಸಿದೆ.

ಇಂದಿನ ಪಂದ್ಯ ಕಳೆದ ಬಾರಿಯ ಫೈನಲ್‌ ಪಂದ್ಯದ ಮರು ಪ್ರದರ್ಶನದಂತಿತ್ತು. ಕಳೆದ ಬಾರಿಯ ಫೈನಲ್‌ ರೀತಿಯೇ ಮುಂಬೈ ಅದ್ಭುತ ಪ್ರದರ್ಶನ ತೋರಿ ಜಯ ತನ್ನದಾಗಿಸಿಕೊಂಡಿತು.

ವಿಕ್ರಂ ಪ್ರತಾಪ್‌ ಸಿಂಗ್‌ (4 ಮತ್ತು 25ನೇ ನಿಮಿಷ) ಪ್ರಥಮಾರ್ಧದ ಹೀರೋ ಎನಿಸಿದರು. ನಂತರ ದ್ವಿತಿಯಾರ್ಧದಲ್ಲಿ ಐಗರ್‌ ಆಂಗುಲೋ (38ನೇ ನಿಮಿಷ), ಮೌರ್ತದಾ ಫಾಲ್‌ (47ನೇ ನಿಮಿಷ) ಹಾಗೂ ಬಿಪಿನ್‌ ಸಿಂಗ್‌ (52 ನೇ ನಿಮಿಷ) ಗೋಲು ಗಳಿಸಿ ಜಯದ ರೂವಾರಿ ಎನಿಸಿದರು.

ಬದಲಿ ಆಟಗಾರ ಡೇವಿಡ್‌ ವಿಲಿಯಮ್ಸ್‌ 60ನೇ ನಿಮಿಷದಲ್ಲಿ ಗಳಿಸಿದ ಗೋಲು ಸೋಲಿನ ಅಂತರವನ್ನು ಕಡಿಮೆ ಮಾಡಿತು.

ಕೋಲ್ಕತಾ ಡರ್ಬಿಯಲ್ಲಿ ಜಯ ಕಂಡ ತಂಡವನ್ನೇ ಹಬ್ಬಾಸ್‌ ಅಂಗಕ್ಕಿಳಿಸಿದ್ದರು, ಮುಂಬೈ ಸಿಟಿ ತಂಡ ಕೂಡ ಹೈದರಾಬಾದ್‌ ವಿರುದ್ಧದ ಪಂದ್ಯದಲ್ಲಿ ಸೋಲನುಭವಿಸಿದ್ದರಿಂದ ಇಲ್ಲಿ ಎಚ್ಚರಿಕೆಯ ಆಟ ಪ್ರದರ್ಶಿಸಿತ್ತು.

Related Articles