ಐಎಸ್‌ಎಲ್ 5 : ಫ್ಯಾನ್ ಬನ್ನಾ ಪಡೇಗಾ!

0
300
ಸ್ಪೋರ್ಟ್ಸ್ ಮೇಲ್ ವರದಿ 

ಅಭಿಮಾನಿಗಳಿಲ್ಲದೆ ಯಾವುದೇ ಆಟ ನಡೆಯದು. ಫುಟ್ಬಾಲ್ ಕೂಡ ಇದರಿಂದ ಹೊರತಾಗಿಲ್ಲ. ಇದಕ್ಕಾಗಿಯೇ ಹೀರೋ ಇಂಡಿಯನ್ ಸೂಪರ್ ಲೀಗ್ (ಎಚ್‌ಐಎಸ್‌ಎಲ್) ಐದನೇ ಆವೃತ್ತಿಯಲ್ಲಿ ಫುಟ್ಬಾಲ್‌ನ ಅಭಿಮಾನಿಯಾಗಲೇಬೇಕು. ಅಂದರೆ ಫ್ಯಾನ್ ಬನ್ನಾ ಪಡೇಗಾ…#FanBannaPadega ಎಂದು ಹೊಸ ಅಭಿಯಾನಕ್ಕೆ ಚಾಲನೆ ನೀಡಿದೆ.

ಭಾರತ ಒಂದು ಫುಟ್ಬಾಲ್ ರಾಷ್ಟ್ರವಾಗಿ ಬೆಳೆಯಬೇಕಾದರೆ  ಈ ಕ್ರೀಡೆಗೆ ಹೆಚ್ಚಿನ ಅಭಿಮಾನಿಗಳ ಅಗತ್ಯವಿದೆ. ಈ ಕಾರಣಕ್ಕಾಗಿಯೇ ಫ್ಯಾನ್  ಬನ್ನಾ ಪಡೇಗ ಅಭಿಮಾನ ಆರಂಭಗೊಂಡಿದೆ. ಐದನೇ ಆವೃತ್ತಿಯ ಹಿರೋ ಇಂಡಿಯನ್ ಸೂಪರ್ ಲೀಗ್‌ಗೆ ಸೆಪ್ಟಂಬರ್ ೨೯ರಂದು  ಕೋಲ್ಕೊತಾದಲ್ಲಿ ಚಾಲನೆ ಸಿಗಲಿದೆ. ಪ್ರತಿಯೊಂದು ಪಂದ್ಯಕ್ಕೂ ಫುಟ್ಬಾಲ್ ಅಭಿಮಾನಿಗಳ ಪ್ರೋತ್ಸಾಹ ಅಗತ್ಯವಿದೆ.
ಜಗತ್ತಿನ ಫುಟ್ಬಾಲ್ ಕ್ರೀಡೆಯನ್ನು ಗಮನಿಸಿದಾಗ ಅಲ್ಲಿ ಯಾರು ಗೆಲ್ಲುತ್ತಾರೆ, ಯಾರು ಸೋಲುತ್ತಾರೆ ಎಂಬುದಕ್ಕಿಂತ ಆ ಆಟವನ್ನು ಮೆಚ್ಚುವವರೇ ಹೆಚ್ಚು. ಯಾವುದೋ ದೇಶ, ಯಾರದ್ದೋ ಆಟ, ಇನ್ನೆಲ್ಲಿಯದೋ ಅಭಿಮಾನಿಯ ಪ್ರೀತಿಗೆ ಆಟಗಾರ ಅಥವಾ ಆಟ ಪಾತ್ರವಾಗಿರುತ್ತದೆ. ಭಾರತದಲ್ಲಿ ಆರಂಭಗೊಂಡಿರುವ ಹೀರೋ ಇಂಡಿಯನ್ ಸೂಪರ್ ಲೀಗ್ ಕೂಡ ಈಗ ಜನಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಭಾರತದ ಫುಟ್ಬಾಲ್ ಕ್ರಾಂತಿಯಲ್ಲಿ ಪ್ರೇಕ್ಷಕ ಪ್ರಮುಖ ಪಾತ್ರವಹಿಸುತ್ತಾನೆ. ದೇಶದಲ್ಲಿ ಫುಟ್ಬಾಲ್ ಕ್ರೀಡೆ ಮತ್ತಷ್ಟು ಜನಪ್ರಿಯಗೊಳ್ಳಬೇಕೆಂಬ ಉದ್ದೇಶದಿಂದಲೇ ಹುಟ್ಟಿಕೊಂಡ ಅಭಿಯಾನ ಫ್ಯಾನ್ ಬನ್ನಾ ಪಡೇಗಾ…
ಲೆಟ್ಸ್ ಫುಟ್ಬಾಲ್ ಎಂದು ೨೦೧೪ರಲ್ಲಿ ಆರಂಭಗೊಂಡ ಭಾರತದ ಫುಟ್ಬಾಲ್ ಇತಿಹಾಸದ ಹೊಸ ಪ್ರಯಾಣ, ಈಗ ಸಂಭ್ರಮದೊಂದಿಗೆ ಮುಂದೆ ಸಾಗಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಭಾರತ ಫುಟ್ಬಾಲ್ ತಂಡ ಫಿಫಾ  ರಾಂಕಿಂಗ್‌ನಲ್ಲಿ ಟಾಪ್ ೧೦೦ರಲ್ಲಿ ಸ್ಥಾನ ಗಳಿಸಿರುವುದು ಮಾತ್ರವಲ್ಲ, ಫಿಫಾ  ಕಿರಿಯರ ವಿಶ್ವಕಪ್ ಆತಿಥ್ಯವನ್ನೂ ವಹಿಸಿತು. ಭಾರತ ಫುಟ್ಬಾಲ್ ತಂಡ ೨೦೧೯ರ ಎಎಫ್ ಸಿ  ಏಷ್ಯನ್ ಕಪ್ ಫುಟ್ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಆಡುವ ಅರ್ಹತೆಯನ್ನೂ ಗಳಿಸಿತು.  ೧೬ ಹಾಗೂ ೨೦ ವರ್ಷ ವಯೋಮಿತಿಯ ಭಾರತ ತಂಡ ಯೂರೋಪ್ ಪ್ರವಾಸದಲ್ಲಿ ಉತ್ತಮ ಪ್ರದರ್ಶನ ತೋರಿ ತಾನೊಂದು ಬಲಿಷ್ಠ ತಂಡವೆಂಬುದನ್ನು ಸಾಬೀತುಪಡಿಸಿತ್ತು.
ಈ ಬಾರಿ ಐಎಸ್‌ಎಲ್ ಪ್ರಸಾರವಾಗುವ ಚಾನೆಲ್‌ಗಳು
ಕನ್ನಡ- ಕಲರ್ಸ್ ಕನ್ನಡ ಸಿನೆಮಾ
ಇಂಗ್ಲಿಷ್- ಸ್ಟಾರ್ ಸ್ಪೋರ್ಟ್ಸ್ 1, ಸ್ಟಾರ್‌ಸ್ಪೋರ್ಟ್ಸ್ 1 ಎಚ್‌ಡಿ
ಹಿಂದಿ- ಸ್ಟಾರ್ ಸ್ಪೋರ್ಟ್ಸ್ 3.
ತಮಿಳು- ಸ್ಟಾರ್ ಸ್ಪೋರ್ಟ್ಸ್ 1, ತಮಿಳ್
ಮಲಯಾಳಂ- ಏಷ್ಯಾನೆಟ್.
ಬಂಗಾಳಿ- ಜಲ್ಷಾ ಮೂವೀಸ್.