Sunday, May 26, 2024

ಮೌಂಟ್ ಕಾರ್ಮೆಲ್ ಕಾಲೇಜು ಚಾಂಪಿಯನ್

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಸೇಂಟ್ ಕಾರ್ಲೆಟ್ ಪಿಯು ಕಾಲೇಜು ಆಶ್ರಯದಲ್ಲಿ ನಡೆದ ಅಖಿಲ ಭಾರತ ಬಾಲಕಿಯರ ಬಾಸ್ಕೆಟ್ ಬಾಲ್ ಚಾಂಪಿಯನ್‌ಷಿಪ್‌ನಲ್ಲಿ  ಬೆಂಗಳೂರಿನ ಮೌಂಟ್ ಕಾರ್ಮೆಲ್ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

ಫೈನಲ್ ಪಂದ್ಯದಲ್ಲಿ ಕಾರ್ಮೆಲ್ ತಂಡ ಮಲ್ಲೇಶ್ವರಂನ ಕ್ಲೂನಿ ಸೀನಿಯರ್ ಸ್ಕೂಲ್ ತಂಡವನ್ನು 27-09 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
ತಂಡದ ವಿವರ
ರಿಯಾ ಹ್ರುತೀಸ್, ಐಶ್ವರ್ಯ ರಾಜ, ಹೈಕಾ ಶೇಖ್, ಮೇಘಾ ರಾಮಪ್ರಿಯಾ, ಲಿಂಡಾ ಶಿಬು, ಸಂಚಿತಾ ಡಿ ನೊರೋನ್ಹಾ, ಆರ್. ಕೌಶಿಕ್, ರುಚಿತಾ ಸಿ ಶೇಖರ್, ಅಬಿಗೈಲ್ ದೀಪಾ (ನಾಯಕಿ), ರಿತಿಕಾ ಅನಾಸಾನೆ, ದಿಯಾ ನೆಟ್ಲಾ, ಅನನ್ಯಾ ಮೇಲ್ಕೋಟೆ.
ತಂಡದ ಯಶಸ್ಸಿನಲ್ಲಿ ದೈಹಿಕ ಶಿಕ್ಷಣ ನಿರ್ದೇಶಕರಾದ ಹರೀಶ್ ಕುಮಾರ್ ಬಿ.ವಿ, ಪಿಯು ಆಡಳಿತಾಧಿಕಾರಿ ಡಾ.ಎಂ. ಗೆನೆವೈವ್, ಕೋಚ್ ಜಯಂತಿ ಶ್ಯಾಮ್, ಹಾಗೂ ಪ್ರಿನ್ಸಿಪಾಲ್ ಬಬಿತಾ ಸಲ್ದಾನಾ ಪ್ರಮುಖ ಪಾತ್ರವಹಿಸಿರುತ್ತಾರೆ.

Related Articles