Sunday, September 8, 2024

ಹಾಸನ ತಂಡಕ್ಕೆ ಚಾಂಪಿಯನ್ ಪಟ್ಟ

ಸ್ಪೋರ್ಟ್ಸ್ ಮೇಲ್ ವರದಿ

ಬೆಂಗಳೂರು ಹಾಕಿ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯ ಮಟ್ಟದ ಅಂತರ್ ಶಾಲಾ ಬಾಲಕಿಯರ ಹಾಕಿ ಚಾಂಪಿಯನ್‌ಷಿಪ್‌ನ ಫೈನಲ್ ಪಂದ್ಯದಲ್ಲಿ ಕೂಡಿಗೆ ಕ್ರೀಡಾ ಶಾಲಾ ತಂಡವನ್ನು ೨-೦ ಗೋಲುಗಳಿಂದ ಮಣಿಸಿ ಹಾಸನ ಕ್ರೀಡಾ ಶಾಲಾ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

೨೦ ಮತ್ತು ೪೮ನೇ ನಿಮಿಷದಲ್ಲಿ ಸುಮಿತಾ ಗಳಿಸಿದ ಎರಡು ಗೋಲುಗಳ ನೆರವಿನಿಂದ ಹಾಸನ ತಂಡ ಪ್ರಸಸ್ತಿ ಗೆದ್ದುಕೊಂಡಿತು. ಖ್ಯಾತ ಸಂಗೀತ ನಿರ್ದೇಶಕ ಹಾಗೂ ಗಾಯಕ ಗುರುಕಿರಣ್ ಅವರು ವಿಜೇತ ತಂಡಕ್ಕೆ ಬಹುಮಾನ ವಿತರಿಸಿದರು.
ಮೂರು ಮತ್ತು ನಾಲ್ಕನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಪೊನ್ನಂಪೇಟೆ ಕ್ರೀಡಾ ಶಾಲಾ ತಂಡ ಚಿನ್ಮಯ ವಿದ್ಯಾಲಯ  ಎ ತಂಡದ ವಿರುದ್ಧ ೬-೦ ಗೋಲುಗಳಿಂದ ಜಯ ಗಳಿಸಿ ಮೂರನೇ ಸ್ಥಾನ ತನ್ನದಾಗಿಸಿಕೊಂಡಿತು. ವಿಜೇತ ತಂಡದ ಪರ ಜಾಹ್ನವಿ (೩ ಮತ್ತು ೩೩ನೇ ನಿಮಿಷ), ತುಷಾರ (೭ನೇ ನಿಮಿಷ) ಆದಿರಾ (೧೦ನೇ ನಿಮಿಷ) ಹಾಗೂ ನಿಸರ್ಗ (೨೧ ಹಾಗೂ ೩೧ನೇ ನಿಮಿಷ) ಗೋಲು ಗಳಿಸಿದರು.

Related Articles