Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕಾಮನ್‌ವೆಲ್ತ್‌ ಪ್ಯಾರಾ ಗೇಮ್ಸ್‌ಗೆ ಸಾಫ್ಟವೇರ್‌ ಬೆಳಗಾವಿಯ ಸ್ವಾತಿಕ್

ಬೆಂಗಳೂರು: ಚಿಕ್ಕಂದಿನಲ್ಲಿಯೇ ಪೊಲಿಯೋ ಪೀಡಿತರಾಗಿದ್ದರೂ ಈಜಿನಲ್ಲಿ ಪ್ರಭುತ್ವ ಸಾಧಿಸಿರುವ ಬೆಳಗಾವಿಯ ಪುಟ್ಟ ಗ್ರಾಮ ಮುತುಗದ ನಿವಾಸಿ ಸಾಫ್ಠ್‌ವೇರ್‌ ಡೆವಲಪರ್‌ ಸ್ವಾತಿಕ್‌ ಪಟೇಲ್‌ ಗ್ಲಾಸ್ಗೋ ಕಾಮನ್‌ವೆಲ್ತ್‌ ಪ್ಯಾರಾ ಗೇಮ್ಸ್‌ ಈಜಿನಲ್ಲಿ 100 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಭಾರತವನ್ನು ಪ್ರತಿನಿಧಸಿಲಿದ್ದಾರೆ. Despite being affected by polio in childhood, Swatik Patil, a software developer from the small village of Mutaga in Belagavi, has been selected to represent India in Glasgow Commonwealth Para Games.

ಬೆಳಗಾವಿಯ ಸ್ವಿಮರ್ಸ್ ಕ್ಲಬ್ ಬೆಳಗಾವಿಯ ಪ್ಯಾರಾ ಈಜುಪಟು ಸ್ವಾತಿಕ್ ಪಾಟೀಲ್ ಅವರು ಸ್ಕಾಟ್ಲೆಂಡ್‌ನ ಗ್ಲಾಸ್ಗೋದಲ್ಲಿ ಜುಲೈ 23ರಿಂದ ಆಗಸ್ಟ್ 2ರವರೆಗೆ ನಡೆಯಲಿರುವ 2026ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ಸ್ವಾತಿಕ್ ಅವರು ಜುಲೈ 21ರಂದು ನವದೆಹಲಿಯಿಂದ ಭಾರತೀಯ ತಂಡದೊಂದಿಗೆ ಗ್ಲಾಸ್ಗೋಗೆ ಪ್ರಯಾಣ ಬೆಳೆಸಲಿದ್ದು, ಜುಲೈ 27ರಂದು ನಡೆಯುವ ಪುರುಷರ 100 ಮೀಟರ್ ಬ್ರೆಸ್ಟ್‌ಸ್ಟ್ರೋಕ್ (SB9) ಸ್ಪರ್ಧೆಯಲ್ಲಿ ಭಾಗವಹಿಸಲಿದ್ದಾರೆ.

ಬೆಳಗಾವಿ ಜಿಲ್ಲೆಯ ಮುತಗಾ ಗ್ರಾಮದ ನಿವಾಸಿಯಾಗಿರುವ ಸ್ವಾತಿಕ್, ಬೆಳಗಾವಿಯ ಸುವರ್ಣ ಜೆಎನ್‌ಎಂಸಿ ಈಜುಕೊಳ ಹಾಗೂ ಬೆಂಗಳೂರಿನ ನೆಟ್ಟಕಲ್ಲಪ್ಪ ಸ್ವಿಮ್ಮಿಂಗ್ ಸೆಂಟರ್ನಲ್ಲಿ  ತರಬೇತಿ ಪಡೆದಿದ್ದಾರೆ. ತರಬೇತುದಾರ ಉಮೇಶ್ ಕಲಘಟಗಿ ಹಾಗೂ ಶರಚ್ಚಂದ್ರ ಅವರಲ್ಲಿ  ತರಬೇತಿ ಪಡೆದು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಈಜಿನಲ್ಲಿ ಯಶಸ್ಸು ಸಾಧಿಸಿದ್ದಾರೆ.

ಎನ್‌ಐಟಿ ಅಲಹಾಬಾದ್ ಪದವೀಧರರಾಗಿರುವ ಸ್ವಾತಿಕ್, ಪ್ರಸ್ತುತ ಝಾಪಿಂಗ್ (Zopping) ಸಂಸ್ಥೆಯಲ್ಲಿ ಸಾಫ್ಟ್‌ವೇರ್ ಡೆವಲಪರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವುದು ತಮ್ಮ ಜೀವನದ ಕನಸು ನನಸಾದ ಕ್ಷಣ ಎಂದು ಅವರು ಸಂತಸ ವ್ಯಕ್ತಪಡಿಸಿದ್ದು, ಮುಂದಿನ ಗುರಿ ಭಾರತವನ್ನು ಪ್ಯಾರಾಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಪ್ರತಿನಿಧಿಸುವುದಾಗಿದೆ ಎಂದು ಹೇಳಿದ್ದಾರೆ.

ತಂದೆಯಂತೆ ಸಾಹಸ ಪ್ರವೃತ್ತಿ: ಮಾಜಿ ಯೋಧ ನಾರಾಯಣ ಪಾಟೀಲ್‌ ಹಾಗೂ ಚಂಗುನಾ ಪಾಟೀಲ್‌ ಅವರ ಪುತ್ರ ಸ್ವಾತಿಕ್‌ ಅವರಲ್ಲಿ ತಂದೆಯಂತೆ ಸಾಹಸ ಪ್ರವೃತ್ತಿ ಮನೆ ಮಾಡಿದೆ. ಚಿಕ್ಕಂದಿನಲ್ಲಿಯೇ ಈಜಿನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದ ಸ್ವಾತಿಕ್‌ ಪಾಟೀನ್‌ಗೆ ಈ ರಾಜ್ಯ ಕಂಡ ಶ್ರೇಷ್ಠ ಈಜು ತರಬೇತುದಾರರು, ಹಲವಾರು ದಿವ್ಯಾಂಗ ಈಜುಗಾರರಿಗೆ ಬದುಕನ್ನು ಕಟ್ಟಿಕೊಟ್ಟ ಉಮೇಶ್‌ ಕಲಘಟಗಿ ಅವರು ಉತ್ತಮ ರೀತಿಯಲ್ಲಿ ತರಬೇತಿ ನೀಡಿ ಪ್ರಬುದ್ಧ ಈಜುಗಾರನನ್ನಾಗಿ ಮಾಡಿದರು. ರಾಷ್ಟ್ರ ಮಟ್ಟದಲ್ಲಿ 43 ಪದಕಗಳನ್ನು ಗೆದ್ದಿರುವ ಸ್ವಾತಿಕ್‌, ಅವರು ಚಿನ್ನದ ಪದಕಗಳಿಗೆ (33) ಮುತ್ತಿಟ್ಟಿದ್ದೇ ಹೆಚ್ಚು. 5 ರಾಷ್ಟ್ರೀಯ ದಾಖಲೆಗಳು ಕೂಡ ಸ್ವಾತಿಕ್‌ ಅವರ ಹೆಸರಿನಲ್ಲಿದೆ. ಆಸ್ಟ್ರೇಲಿಯಾದ ಗೋಲ್ಡ್‌ಕೋಸ್ಟ್‌ನಲ್ಲಿ ನಡೆದ ವಿಶ್ವ ಪ್ಯಾರಾ ಈಜು ಸರಣಿಯಲ್ಲಿ ಸ್ವಾತಿಕ್‌ ಬೆಳ್ಳಿ ಪದಕ ಗೆಲ್ಲುವ ಮೂಲಕ ಅಂತಾರಾಷ್ಟ್ರೀಯ ಈಜಿಗೆ ಯಶಸ್ವಿಯಾಗಿ ಪದಾರ್ಪಣೆ ಮಾಡಿದರು.

ಈಜು ಹೊಸ ಬದುಕು ನೀಡಿದೆ: “ಪೊಲಿಯೋ ಪೀಡಿತನಾದ ನನಗೆ ಚಿಕ್ಕಂದಿನಿಂದಲೂ ಬದುಕಿನಲ್ಲಿ ಏನಾದರೂ ವಿಶೇಷವಾದುದನ್ನು ಮಾಡಬೇಕೆಂಬ ಹಂಬಲ ಉತ್ಕಟವಾಗಿತ್ತು. ಬಹಳ ತುಂಟನಾಗಿದ್ದ ಕಾರಣ ಯಾವುದಾದರೂ ಚಟುವಟಿಕೆಗಳಲ್ಲಿ ತಲ್ಲೀನನಾಗಿರಲಿ ಎಂದು ಬೆಳಗಾವಿಯಲ್ಲಿ ಈಜಿಗೆ ಸೇರಿಸಿದರು. ನಾನು ಅದನ್ನು ಶಿಕ್ಷೆ ಎಂದು ತಿಳಿಯಲಿಲ್ಲ. ಈಜಿಗೆ ಸೇರಿದ್ದು ನನ್ನ ಬದುಕಿಗೇ ಆಧಾರವಾಗುತ್ತದೆ ಎಂದು ಊಹಿಸಿಯೂ ಇರಲಿಲ್ಲ. ಆದರೆ ಕಾಮನ್‌ವೆಲ್ತ್‌ನಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ನನಗೆ ತರಬೇತಿ ನೀಡಿದ ಗುರುಗಳಿಗೂ, ನನಗೆ ಸದಾ ಪ್ರೋತ್ಸಾಹ ನೀಡುತ್ತಿರುವ ನನ್ನ ಅನ್ನದಾತರಾದ ಝಾಪಿಂಗ್ (Zopping) ಸಂಸ್ಥೆಗೂ ಎಲ್ಲಕ್ಕಿಂತ ಮುಖ್ಯವಾಗಿ  ಕರ್ನಾಟಕ ರಾಜ್ಯ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಗೆ ನಾನು ಚಿರ ಋಣಿಯಾಗಿರುವೆ,” ಎಂದು ಸ್ವಾತಿಕ್‌ ಪಾಟೀಲ್‌ ಹೇಳಿದರು.


ಸೋಮಶೇಖರ್‌ ಪಡುಕರೆ, ಕರ್ನಾಟಕದ ಹಿರಿಯ ಕ್ರೀಡಾ ಪತ್ರಕರ್ತರು, ಕಳೆದ 32 ವರ್ಷಗಳಿಂದ ಕ್ರೀಡಾಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾಪ್ರತಿಭೆಗಳನ್ನು ಪ್ರೋತ್ಸಾಹಿಸುವುದು ಮಾತ್ರವಲ್ಲದೆ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳ ಸಾಧನೆಯನ್ನು ಕರ್ನಾಟಕದ ಓದುಗರಿಗೆ ಪರಿಚಯಿಸಿದ್ದಾರೆ. ಹಲವಾರು ದಿವ್ಯಾಂಗ ಕ್ರೀಡಾಪಟುಗಳನ್ನು ಗುರುತಿಸಿ ಅವರಿಗೆ ಸರಕಾರದ ನೆರವು ಸಿಗುವಂತೆ ಮಾಡಿದ್ದಾರೆ. ಕರ್ನಾಟಕದಲ್ಲಿರುವ ಕ್ರೀಡಾ ಸಾಧಕರಿಗೆ ನಗದು ಬಹುಮಾನ ಸಿಗುವಲ್ಲಿ ಇವರು ಬರೆದ ಲೇಖನಗಳು ಪ್ರಮುಖ ಪಾತ್ರವಹಿಸಿವೆ.