ಸೋತರೂ ಸೆಮಿ ತಲುಪಿದ ಇಂಗ್ಲೆಂಡ್
ಗಯಾನ:
ದಿಯೇಂದ್ರ ಡೊಟ್ಟಿನ್(46) ಹಾಗೂ ಶೆಮೈನಿ ಕ್ಯಾಂಪೆಬೆಲ್ಲೆೆ(45) ಅವರ ಜವಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ವೆಸ್ಟ್ ಇಂಡೀಸ್ ತಂಡ ಐಸಿಸಿ ಮಹಿಳೆಯರ ಟಿ-20 ವಿಶ್ವಕಪ್ ಟೂರ್ನಿಯ 19ನೇ ಪಂದ್ಯದಲ್ಲಿ ಇಂಗ್ಲೆೆಂಡ್ ವಿರುದ್ಧ ನಾಲ್ಕು ವಿಕೆಟ್‌ಗಳಿಂದ ಜಯ ಸಾಧಿಸಿತು.
ಇಲ್ಲಿನ ಪ್ರೊವಿಡೆನ್ಸ್ ಕ್ರೀಡಾಂಗಣದಲ್ಲಿ ಟಾಸ್ ಸೋತು ಮೊದಲು ಬ್ಯಾಾಟಿಂಗ್ ಮಾಡಿದ ಇಂಗ್ಲೆೆಂಡ್, ನಿಗದಿತ 20 ಓವರ್‌ಗಳಿಗೆ ಎಂಟು ವಿಕೆಟ್ ಕಳೆದುಕೊಂಡು 115 ರನ್ ಗಳಿಸಿತು. ವೆಸ್ಟ್ ಇಂಡೀಸ್ ಬೌಲರ್‌ಗಳ ಶಿಸ್ತುಬದ್ಧ ಬೌಲಿಂಗ್ ಗೆ ನಲುಗಿದ ಇಂಗ್ಲೆೆಂಡ್ ಬ್ಯಾಟ್ಸ್ ವುಮೆನ್‌ಗಳು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನೆಲೆಯೂರಲಿಲ್ಲ. ಆರಂಭಿಕ ಆಟಗಾರ್ತಿ ಟಮ್ಮಿ ಬಿಮೌಂಟ್ 23 ರನ್ ಗಳಿಸಿದ್ದು, ಬಿಟ್ಟರೆ ಇನ್ನುಳಿದ ಅಗ್ರ ಕ್ರಮಾಂಕ ಹಾಗೂ ಮಧ್ಯಕ್ರಮಾಂಕ ಆಟಗಾರ್ತಿಯರು ಎರಡಂಕಿ ವೈಯಕ್ತಿಕ ರನ್ ಗಳಿಸಿಲು ಸಾಧ್ಯವಾಗಲಿಲ್ಲ. ಇಂಗ್ಲೆೆಂಡ್ ಪರ ಏಳನೇ ವಿಕೆಟ್‌ಗೆ ಉತ್ತಮ ಬ್ಯಾಟಿಂಗ್ ಮಾಡಿದ ಸೋಫಿಯಾ ಬ್ರೌನ್ ಮತ್ತು ಅನ್ಯ ಶ್ರುಬ್ಸಲೆ ಜೋಡಿ 58 ರನ್ ಗಳ ಜತೆಯಾಟವಾಡುವ ಮೂಲಕ ತಂಡದ ಮೊತ್ತ 100 ಗಡಿ ದಾಟಿಸಿ ಇಂಗ್ಲೆೆಂಡ್ ಮಾನ ಕಾಪಾಡಿತು. ಸೋಫಿಯಾ 35 ರನ್ ಗಳಿಸಿದರೆ, ಅನ್ಯ 29 ರನ್ ದಾಖಲಿಸಿದರು. ಇದರೊಂದಿಗೆ ಇಂಗ್ಲೆೆಂಡ್ ವಿಂಡೀಸ್‌ಗೆ ಗೌರವ ಮೊತ್ತದ ಗುರಿ ನೀಡಿತು. ವೆಸ್ಟ್ ಇಂಡೀಸ್ ಪರ ಶಕೆರಾ ಸೆಲ್ಮಾನ್ ಮತ್ತು ದಿಯೇಂದ್ರ ಡೊಟ್ಟಿನ್ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ವೆಸ್ಟ್ ಇಂಡೀಸ್‌ಗೆ ಆರಂಭಿಕ ಆಘಾತವಾಯಿತು. ಇಂಗ್ಲೆೆಂಡ್ ಆರಂಭಿಕ ವೇಗಿ ಅನ್ಯ ಶುಬ್ಸೊಲೆ ವಿಂಡೀಸ್‌ನ ಆರಂಭಿಕ ಆಟಗಾರ್ತಿ ಹೆಯ್ಲಿ ಮ್ಯಾಥ್ಯೂಸ್(1) ಹಾಗೂ ಸ್ಟಾಫಾನಿಯಾ(0) ಅವರ ವಿಕೆಟ್ ಅನ್ನು ಆರಂಭದಲ್ಲಿ ಉರುಳಿಸಿದರು. ತಂಡದ ಮೊತ್ತ 3 ರನ್ ಗೆ ಎರಡು ವಿಕೆಟ್ ಕಳೆದುಕೊಂಡು ತೀವ್ರ ಸಂಕಷ್ಟದಲ್ಲಿ ಸಿಲುಕಿದ ವೆಸ್‌ಟ್ ಇಂಡೀಸ್‌ಗೆ ದಿಯೇಂದ್ರ ಡೊಟ್ಟಿನ್ ಹಾಗೂ ಶೆಮೈನೆ ಕ್ಯಾಂಪೆಬೆಲ್ಲೆೆ ಜೋಡಿ ಆಸರೆಯಾಯಿತು. ಈ ಜೋಡಿ 68 ರನ್ ಗಳ ಅಮೋಘ ಜತೆಯಾಟವಾಡುವ ಮೂಲಕ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿತು. ಅರ್ಧ ಶತಕದಂಚಿನಲ್ಲಿ ಬ್ಯಾಟಿಂಗ್ ಮಾಡುತಿದ್ದ ಡೊಟ್ಟಿನ್(46) ಹಾಗೂ ಶೆಮೈನಿ(45) ಅವರ ವಿಕೆಟ್ ಉರುಳಿತು. ಅಂತಿಮವಾಗಿ ವೆಸ್ಟ್ ಇಂಡೀಸ್ 19.3 ಓವರ್‌ಗಳಿಗೆ ಆರು ವಿಕೆಟ್ ನಷ್ಟಕ್ಕೆೆ 117 ರನ್ ಗಳಿಸಿ ಗೆಲುವಿನ ನಗೆ ಬೀರಿತು.