Saturday, July 20, 2024

ಜ್ವರೆವ್ ಮುಡಿಗೆ ಎಟಿಪಿ ಫೈನಲ್ ಗರಿ

ಲಂಡನ್: 

ವಿಶ್ವ ಅಗ್ರ ಕ್ರಮಾಂಕದ ಆಟಗಾರ ನೊವಾಕ್ ಜೊಕೊವಿಚ್ ಎಟಿಪಿ ಫೈನಲ್‌ ನಲ್ಲಿ  ಅಲೆಗ್ಸಾಂಡರ್ ಜ್ವರೆವ್   ವಿರುದ್ಧ ನೇರ ಸೆಟ್‌ಗಳಿಂದ ಸೋಲುವ ಮೂಲಕ ರನ್ನರ್ ಅಪ್‌ಗೆ ತೃಪ್ತರಾದರು. ಇದರೊಂದಿಗೆ, ಎಟಿಪಿ ಫೈನಲ್‌ ನಲ್ಲಿ  ಗೆದ್ದು  ರ್ಯಾಂಕಿಂಗ್ ನಲ್ಲಿ   ಅಗ್ರ ಸ್ಥಾನವನ್ನು ಇನ್ನಷ್ಟು ಭದ್ರಪಡಿಸಿಕೊಳ್ಳುವ ಯೋಜನೆಯಲ್ಲಿದ್ದ ಸರ್ಬಿಯಾ ಆಟಗಾರನಿಗೆ ಜರ್ಮನಿ ಆಟಗಾರ ಆಘಾತ ನೀಡಿದರು.

ಇತ್ತೀಚೆಯಷ್ಟೆೆ  ಜೊಕೊವಿಚ್ ಅವರು ರಾಫೆಲ್ ನಡಾಲ್ ಅವರನ್ನು ಹಿಂದಿಕ್ಕಿ ವಿಶ್ವದ ಅಗ್ರ ಕ್ರಮಾಂಕಕ್ಕೆೆ ಲಗ್ಗೆೆ ಇಟ್ಟಿದ್ದರು. ಈ ಸಾಧನೆ ಬಳಿಕ ಮೊದಲ ಟೂರ್ನಿ ಆಡಿದ ಜೊಕೊವಿಚ್ ಅವರು, ಜರ್ಮನಿ ಆಟಗಾರನ ಎದುರು ಫೈನಲ್‌ನಲ್ಲಿ 4-6, 3-6 ನೇರ ಸೆಟ್‌ಗಳಿಂದ ಸೋಲು ಒಪ್ಪಿಕೊಂಡರು. ವೃತ್ತಿ ಜೀವನದಲ್ಲೇ ಮೊಟ್ಟಮೊದಲ ಬಾರಿಗೆ ಅತ್ಯಂತ ಶ್ರೇಷ್ಠ ಪ್ರಶಸ್ತಿ ಪಡೆದ ಸಾಧನೆಗೆ ಮೂರನೇ ಶ್ರೇಯಾಂಕದ ಅಲೆಗ್ಸಾಂಡರ್  ಜ್ವೆೆರೆವ್ ಪಾತ್ರರಾದರು. ಅಲ್ಲದೇ, 1995 ರಲ್ಲಿ ಬೊರಿಸ್ ಬೆಕ್ಕರ್ ಬಳಿಕ ಎಟಿಪಿ ಸಿಂಗಲ್ಸ್  ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಜರ್ಮನ್ ಎಂಬ ಸಾಧನೆ ಗೆ ಭಾಜನರಾದರು. ಟೂರ್ನಿಯ ಎಲ್ಲ ಪಂದ್ಯಗಳಲ್ಲಿ ಗೆಲುವು ಪಡೆದು ಫೈನಲ್‌ಗೆ ಬಂದಿದ್ದ ಜೊಕೊವಿಚ್ ಫೈನಲ್ ನಲ್ಲಿ ಜ್ವೆೆರೆವ್ ವಿರುದ್ಧ ಗೆದ್ದೆೆ ಗೆಲ್ಲುತ್ತಾರೆಂದೆ ಎಲ್ಲರು ಭಾವಿಸಿದ್ದರು.
ಆದರೆ, ಜರ್ಮನಿ ಆಟಗಾರ ಎಲ್ಲ ನಿರೀಕ್ಷೆೆಗಳನ್ನು ಉಲ್ಟಾ ಮಾಡಿದರು. ಪಂದ್ಯದ ಆರಂಭದಿಂದಲೂ ಇಬ್ಬರೂ ಆಟಗಾರರು ಸಮಬಲದ ಪ್ರದರ್ಶನ ತೋರಿದರು. ಆದರೆ, ಅಂತಿಮ ಕ್ಷಣದಲ್ಲಿ ಜ್ವೆೆರೆವ್ ಅವರು ಜೊಕೊವಿಚ್ ಅವರನ್ನು ಮೊದಲ ಸೆಟ್‌ನಲ್ಲಿ 6-4 ಅಂತರದಲ್ಲಿ ಸೋಲುಣಿಸಿದರು.
ನಂತರ, ಎರಡನೇ ಸೆಟ್‌ನಲ್ಲಿ ಯೋಜನೆಯೊಂದಿಗೆ ಅಂಗಳಕ್ಕೆೆ ಆಗಮಿಸಿದ ಜೊಕೊವಿಚ್ ಅವರ ಆಟ ಜರ್ಮನಿ ಆಟಗಾರನ ಎದುರು ನಡೆಯಲಿಲ್ಲ. ಆರಂಭದಿಂದಲೇ ಚುರುಕಾದ ಆಟವಾಡಿದ ಅಲೆಗ್ಸಾಂಡರ್ ಜ್ವರೆವ್ , ಎರಡು ಅಂಕಗಳ ಮುನ್ನಡೆಯೊಂದಿಗೆ ಆಡುತ್ತಿದ್ದರು. ಆದರೆ, ಜೊಕೊವಿಚ್ ಜರ್ಮನಿ ಆಟಗಾರನ ವಿರುದ್ಧ ತಿರುಗೇಟು ನೀಡಲೇ ಇಲ್ಲ. ಅಂತಿಮವಾಗಿ ಜ್ವೆೆರೆವ್ 6-3 ಅಂತರದಲ್ಲಿ ದ್ವಿತೀಯ ಸೆಟ್ ಗೆದ್ದರು. ಆ ಮೂಲಕ ನೇರ ಸೆಟ್‌ಗಳಿಂದ ವಿಶ್ವ ಅಗ್ರ ಕ್ರಮಾಂಕದ ಆಟಗಾರನ ಎದುರು ಪಾರಮ್ಯ ಮೆರೆದರು.

Related Articles