Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ವಿಂಡೀಸ್ ಮಾರಕ ದಾಳಿಗೆ ಪಾಕ್ ತತ್ತರ

ನಾಟಿಂಗ್‌ಹ್ಯಾಮ್:

ಭರ್ಜರಿ ಲಯದಲ್ಲಿರುವ ವೆಸ್ಟ್‌ ಇಂಡೀಸ್ ಐಸಿಸಿ ವಿಶ್ವಕಪ್ ಟೂರ್ನಿಯ ತನ್ನ ಮೊದಲನೇ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ 7 ವಿಕೆಟ್‌ಗಳಿಂದ ಗೆದ್ದು ಭರ್ಜರಿ ಶುಭಾರಂಭ ಮಾಡಿದೆ. ಅಲ್ಲದೇ, ತಾವು ಕೂಡ ವಿಶ್ವಕಪ್ ಗೆಲ್ಲುವ ಫೇವರಿಟ್ ಎಂದು ಎಚ್ಚರಿಕೆ ಸಂದೇಶ ರವಾನಿಸಿತು.

ನೀರೀಕ್ಷೆೆಗೂ ಮೀರಿದ ಪ್ರದರ್ಶನ ತೋರಿದ ವೆಸ್ಟ್‌ ಇಂಡೀಸ್‌ಗೆ ಶುಕ್ರವಾರ ಪಾಕಿಸ್ತಾನ ತಂಡ ಹಸುಳೆಗಳಂತೆ ಕಂಡರು. ಟಾಸ್ ಗೆದ್ದು ಮೊದಲು ಫೀಲ್ಡಿಂಗ್  ಮಾಡುವ ನಿರ್ಧಾರ ಕೈಗೊಂಡ ನಾಯಕ ಜೇಸನ್ ಹೋಲ್ಡರ್ ಯೋಜನೆ ಸಕಾರಗೊಳಿಸುವಲ್ಲಿ  ವಿಂಡೀಸ್ ಬೌಲರ್‌ಗಳು ಯಶಸ್ವಿಯಾದರು. ವೆಸ್ಟ್‌ ಇಂಡೀಸ್‌ನ ಜೇಸನ್ ಹೋಲ್ಡರ್, ಓಶಾನ್ ಥಾಮಸ್ ಹಾಗೂ ಆ್ಯಂಡ್ರೆೆ ರಸೆಲ್ ಅವರ ದಾಳಿ ಎದುರಿಸುವಲ್ಲಿ ವಿಫಲರಾದ  ಪಾಕಿಸ್ತಾನ ತಂಡದ ಬ್ಯಾಟ್ಸ್‌‌ಮನ್‌ಗಳು ಬಾಲಂಗೋಚಿಗಳಂತೆ ಒಬ್ಬರ ಹಿಂದೆ ಮತ್ತೊಬ್ಬರು ಪೆವಿಲಿಯನ್‌ಗೆ ಪೆರೆಡ್ ನಡೆಸಿದರು.
ಫಖಾರ್ ಜಮಾನ್ ಹಾಗೂ ಬಾಬರ್ ಅಜಾಮ್ ತಲಾ 22 ರನ್ ಗಳಿಸಿದ್ದೇ ಪಾಕ್ ಪರ ವೈಯಕ್ತಿಕ ಗರಿಷ್ಠ ಮೊತ್ತ. ಇವರನ್ನು ಬಿಟ್ಟರೆ ಮಧ್ಯಮ ಕ್ರಮಾಂಕದಲ್ಲಿ ಮೊಹಮ್ಮದ್ ಹಫೀಜ್ 16 ರನ್ ಹಾಗೂ ವಹಾಬ್ ರಿಯಾಜ್ 18 ರನ್ ಇವರನ್ನು ಬಿಟ್ಟು ಇನ್ನುಳಿದವರು ಎರಡಂಕಿ ದಾಟಲೇ ಇಲ್ಲ. ಅಂತಿಮವಾಗಿ 21.4 ಓವರ್‌ಗಳಲ್ಲಿ ಪಾಕ್ 105 ರನ್‌ಗಳಿಗೆ ಆಲ್‌ಔಟ್ ಆಯಿತು.

ಓಶಾನ್ ಥಾಮಸ್ ಬೆಂಕಿ:
ವೆಸ್ಟ್‌ ಇಂಡೀಸ್ ಪರ ಅತ್ಯುತ್ತಮ ಬೌಲಿಂಗ್ ನಿರ್ವಹಣೆ ತೋರಿದ ಓಶಾನ್ ಥಾಮಸ್ ಪಾಕಿಸ್ತಾನ ಬ್ಯಾಟ್ಸ್‌‌ಮನ್‌ಗಳ ಪಾಲಿಗೆ ವಿಲನ್ ಆದರು. ಅವರು ಬೆಂಕಿ ಚೆಂಡುಗಳನ್ನು ಪಾಕ್ ದಾಂಡಿಗರು ಎದುರಿಸುವಲ್ಲಿ ವಿಫಲರಾದರು. 5.4 ಓವರ್ ಬೌಲಿಂಗ್ ಅವರು 27 ರನ್ ನೀಡಿ ನಾಲ್ಕು ವಿಕೆಟ್ ತೆಕ್ಕೆೆಗೆ ಹಾಕಿಕೊಂಡರು. ಇವರಿಗೆ ಸಾಥ್ ನೀಡಿದ ನಾಯಕ ಜೇಸನ್ ಹೋಲ್ಡರ್ 5 ಓವರ್‌ಗಳಲ್ಲಿ 42 ರನ್ ನೀಡಿ ಮೂರು ವಿಕೆಟ್ ಪಡೆದರು. ಇವರಿಬ್ಬರ ಬೌಲಿಂಗ್ ನೆರವಿನಿಂದ ಪಾಕ್ ಕಡಿಮೆ ಮೊತ್ತಕ್ಕೆೆ ನಿಯಂತ್ರಿಸಲು ಸಾಧ್ಯವಾಯಿತು.

106 ರನ್ ಕಡಿಮೆ ಮೊತ್ತದ ಗುರಿ ಬೆನ್ನತ್ತಿದ ವೆಸ್ಟ್‌ ಇಂಡೀಸ್ ಕೇವಲ 13.4 ಓವರ್‌ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆೆ 108 ರನ್‌ಗಳಿಸಿ ಗೆಲುವಿನ ದಡ ಸೇರಿತು. ವಿಂಡೀಸ್ ಪರ ನಿರೀಕ್ಷೆೆಯಂತೆ ಬ್ಯಾಟಿಂಗ್ ಮಾಡಿದ ಯುನಿವರ್ಸಲ್ ಬಾಸ್ ಕ್ರಿಸ್ ಗೇಲ್(50 ರನ್) ಆರಂಭದಿಂದಲೂ ಜವಾಭ್ದಾರಿಯುತ ಬ್ಯಾಟಿಂಗ್ ಮಾಡಿದರು. ಎದುರಿಸಿದ 34 ಎಸೆತಗಳಲ್ಲಿ ಮೂರು ಸಿಕ್ಸರ್ ಹಾಗೂ 6 ಬೌಂಡರಿಯೊಂದಿಗೆ ಟೂರ್ನಿಯ ಮೊದಲ ಅರ್ಧ ಶತಕ ಗಳಿಸಿದರು. ಇವರಿಗೆ ಹೆಚ್ಚು ಹೊತ್ತು ಸಾಥ್ ನೀಡಿದ ನಿಕೋಲಸ್ ಪೂರನ್ 19 ಎಸೆತಗಳಲ್ಲಿ ಎರಡು ಸಿಕ್ಸರ್ ಹಾಗೂ ನಾಲ್ಕು ಬೌಂಡರಿಯೊಂದಿಗೆ ಅಜೇಯ 34 ರನ್ ಗಳಿಸಿ ತಂಡವನ್ನು ಬಹುಬೇಗ ಗೆಲುವಿನ ಗೆರೆ ದಾಟಿಸಿದರು. ಪಂದ್ಯ ಶ್ರೇಷ್ಠ ಪ್ರಶಸ್ತಿಗೆ ಓಶಾನ್ ಥಾಮಸ್ ಭಾಜನರಾದರು.
ನಿರೀಕ್ಷೆೆ ಉಳಿಸಿಕೊಂಡ ಅಮೀರ್:
ಹಲವು ತಿಂಗಳುಗಳ ಕಾಲ ರಾಷ್ಟ್ರೀಯ ತಂಡಕ್ಕೆೆ ಮರಳಿದ ಮೊಹಮ್ಮದ್ ಅಮೀರ್ ತಂಡದ ನಾಯಕ ಇಟ್ಟಿದ್ದ ನಂಬಿಕೆಯನ್ನು ಉಳಿಸಿಕೊಂಡರು. ಆರು ಓವರ್ ಬೌಲಿಂಗ್ ಮಾಡಿದ ಅವರು 26 ರನ್ ನೀಡಿ ಪ್ರಮುಖ ಮೂರು ವಿಕೆಟ್ ಕಬಳಿಸಿದರು. ಆದರೆ, ಪಾಕಿಸ್ತಾನ ಕಡಿಮೆ ಮೊತ್ತ ಕಲೆಹಾಕಿದ್ದರಿಂದ ಅವರ ಮಾರಕ ಬೌಲಿಂಗ್ ದಾಳಿ ತಂಡದ ಪರ ಫಲಿತಾಶದ ಮೇಲೆ ಯಾವುದೇ ಪ್ರಭಾವ ಬೀರಲಿಲ್ಲ.

ಪಾಕಿಸ್ತಾನದ ಕಡಿಮೆ ಮೊತ್ತ:
1992ರ ಇಮ್ರಾನ್ ನಾಯಕತ್ವದ ಪಾಕಿಸ್ತಾಾನ ತಂಡ  ಇಂಗ್ಲೆೆಂಡ್ ವಿರುದ್ಧ ಅಡಿಲೇಡ್‌ನಲ್ಲಿ ಕೇವಲ 74 ರನ್‌ಗಳಿಗೆ ಆಲೌಟ್ ಆಗಿತ್ತು ಶುಕ್ರವಾರ ಪಾಕ್ 21.4 ಓವರ್‌ಗಳಲ್ಲಿ ಕೇವಲ 105 ರನ್‌ಗಳಿಗೆ ಕುಸಿಯುವ ಮೂಲಕ ವಿಶ್ವಕಪ್ ಇತಿಹಾಸದಲ್ಲಿ ಇದು ಎರಡನೇ ಬಾರಿ. ಆ ಮೂಲಕ ವಿಶ್ವಕಪ್ ಟೂರ್ನಿಯಲ್ಲಿ ಅತಿ ಕಡಿಮೆ ಮೊತ್ತಕ್ಕೆ ಆಲೌಟ್ ಆದ ಹಣೆಪಟ್ಟಿ ಪಡೆಯುವ ಮೂಲಕ ಸರ್ಫರಾಜ್ ಪಡೆ ದಾಖಲೆ ನಿರ್ಮಿಸಿತು.
==
ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ: 105 (21.4)
ಬಾಬರ್ ಅಜಾಮ್-22
ಫಖಾರ್ ಜಮಾನ್-22
ಬೌಲಿಂಗ್: ಓಶಾನ್ ಥಾಮಸ್ 5.4-0-27-4, ಜೇಸನ್ ಹೋಲ್ಡರ್ 5-0-42-3, ಆ್ಯಂಡ್ರೆ ರಸೆಲ್ 3-1-4-2.

ವೆಸ್ಟ್‌ ಇಂಡೀಸ್: 108/3(13.4)
ಕ್ರಿಸ್ ಗೇಲ್-50
ನಿಕೋಲಸ್ ಪೂರನ್-34*
ಬೌಲಿಂಗ್: ಮೊಹಮ್ಮದ್ ಅಮೀರ್ 6-0-26-3.


administrator