ಆಸೀಸ್ ವೇಗಿಗಳ ಸವಾಲು ಸ್ವೀಕರಿಸಲು ಸಿದ್ಧ

0
186
ಬ್ರಿಸ್ಬೇನ್: 

ಆಸ್ಟ್ರೇಲಿಯಾ ವೇಗಿಗಳು ಸಾಮಾನ್ಯವಾಗಿ ಎತ್ತರವಾಗಿರುತ್ತಾರೆ. ಅವರು ಬ್ಯಾಟ್ಸ್ ಮನ್‌ಗಳ ಮೇಲೆ ಒತ್ತಡ ಹಾಕಲು ಅನುಕೂಲವಾಗಬಹುದು. ಆದರೆ, ಆಸೀಸ್ ಪರಿಣಾಮಕಾರಿ ಎಸೆತಗಳನ್ನು ಎದುರಿಸಲು ಭಾರತ ತಂಡ ಸಿದ್ಧವಾಗಿದೆ ಎಂದು ಪ್ರವಾಸಿ ತಂಡದ ಉಪ ನಾಯಕ ರೋಹಿತ್ ಶರ್ಮಾ ತಿಳಿಸಿದರು.

 ಇದೇ 21ರಿಂದ ಆಸ್ಟ್ರೇಲಿಯಾ ವಿರುದ್ಧ ಚುಟುಕು ಸರಣಿ ಆರಂಭವಾಗಲಿದ್ದು, ಅಂದಿನಿಂದ ಭಾರತ  ಬ್ಯಾಟ್ಸ್ ಮನ್ ಗಳಿಗೆ  ವೇಗಿ ಪಿಚ್‌ಗಳಲ್ಲಿ ಅಗ್ನಿ ಪರೀಕ್ಷೆೆ ಎದುರಾಗಲಿದೆ. ಪರ್ತ್ ಹಾಗೂ ಬ್ರಿಸ್ಬೇನ್ ಮೈದಾನಗಳಲ್ಲಿ ಭಾರತ ಈಗಾಗಲೇ ಆಡಿದೆ . ಈ ಪಿಚ್‌ಗಳು ಆಸೀಸ್ ಬೌಲರ್‌ಗಳಿಗೆ ತುಂಬಾ ಅನುಕೂಲ. ಭಾರತ ಬ್ಯಾಟ್ಸ್  ಮನ್‌ಗಳು ಎತ್ತರ ಇಲ್ಲದೇ ಇರಬಹುದು. ಆದರೆ, ನಮ್ಮವರು ಎಂತಹ ಸವಾಲನ್ನು ಸ್ವೀಕರಿಸುವ ಮನೋಭಾವದವರಾಗಿದ್ದಾರೆ ಎಂದರು