Thursday, December 12, 2024

ವಿಶ್ವಕಪ್‌ಗೆ ವಿಂಡೀಸ್‌ ತಂಡ: ರಸೆಲ್ ಇನ್, ಪೊಲಾರ್ಡ್‌ ಔಟ್‌

ನವದೆಹಲಿ:  ಇಂಗ್ಲೆಂಡ್‌ನಲ್ಲಿ ಮೇ 30 ರಂದು ಆರಂಭವಾಗಲಿರುವ ಐಸಿಸಿ ವಿಶ್ವಕಪ್‌ಗೆ 15 ಆಟಗಾರರ ವೆಸ್ಟ್‌ ಇಂಡೀಸ್‌ ತಂಡವನ್ನು ಇಂದು ಪ್ರಕಟಿಸಲಾಗಿದ್ದು, ಆಲ್‌ರೌಂಡರ್‌ ಆ್ಯಂಡ್ರೆ ರಸೆಲ್‌ಗೆ ಸ್ಥಾನ ಕಲ್ಪಿಸಲಾಗಿದೆ. ಆದರೆ, ಅನುಭವಿ ಆಟಗಾರರಾದ ಕಿರೋನ್‌ ಪೊಲಾರ್ಡ್‌ ಹಾಗೂ ಸುನೀಲ್‌ ನರೇನ್‌ ಅವರನ್ನು ಕೈ ಬಿಡಲಾಗಿದೆ.

ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಕ್ರಿಕೆಟ್‌ ವೆಸ್ಟ್‌ ಇಂಡೀಸ್‌ ಆಯ್ಕೆ ಸಮಿತಿಯ ಮಧ್ಯಂತರ ಅಧ್ಯಕ್ಷ ರಾಬರ್ಟ್ ಹೇಯ್ನ್ಸ್ತಂಡವನ್ನು ಪ್ರಕಟಿಸಿದ್ದು, ಜೇಸನ್‌ ಹೋಲ್ಡರ್‌ ತಂಡವನ್ನು ಮುನ್ನಡೆಸಲಿದ್ದಾರೆ. ಅನುಭವಿ ಆರಂಭಿಕ ಬ್ಯಾಟ್ಸ್‌ಮನ್‌ ಕ್ರಿಸ್‌ ಗೇಲ್‌ ಅವರಿಗೂ ವಿಶ್ವಕಪ್‌ ತಂಡದಲ್ಲಿ ಸ್ಥಾನ ಕಲ್ಪಿಸಲಾಗಿದೆ. 39ರ ಪ್ರಾಯದ ಆಟಗಾರ 289 ಏಕದಿನ ಪಂದ್ಯಗಳಿಂದ 25 ಶತಕ ಹಾಗೂ 51 ಅರ್ಧ ಶತಕದೊಂದಿಗೆ ಒಟ್ಟು 10,151 ರನ್‌ ದಾಖಲಿಸಿದ್ದಾರೆ.


ದೇವೇಂದ್ರ ಬಿಶೋ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. ಫ್ಯಾಭಿಯಾನ್‌ ಅಲ್ಲೆನ್‌ ಹಾಗೂ ಆ್ಯಶ್ಲೆ ನರ್ಸ್‌ ತಂಡದ ಸ್ಪಿನ್‌ ವಿಭಾಗದ ಜವಾಭ್ದಾರಿ ನಿರ್ವಹಿಸಲಿದ್ದಾರೆ. ಐಪಿಎಲ್‌ನಲ್ಲಿ ಮಿಂಚುತ್ತಿರುವ ಕಿಮೋ ಪಾಲ್‌ ಹಾಗೂ ಗಾಯಗೊಂಡಿರುವ ಅಲ್ಜಾರಿ ಜೋಸೆಫ್‌ ಅವರಿಗೂ ತಂಡದಲ್ಲಿ ಅವಕಾಶ ನೀಡಿಲ್ಲ.
” ಕಳೆದ ಕೆಲವು ವರ್ಷಗಳಲ್ಲಿ ಇಂಗ್ಲೆಂಡ್‌ ಹಾಗೂ ವೇಲ್ಸ್‌ನ ಪಿಚ್‌ಗಳನ್ನು ಗಮನಿಸಲಾಗಿದ್ದು, ಇಲ್ಲಿನ ಅಂಗಳಗಳಲ್ಲಿ ಹೆಚ್ಚು ಮೊತ್ತ ಕಲೆಹಾಕಬಹುದು. ಹಾಗಾಗಿ, ತಂಡ ಬೃಹತ್‌ ಮೊತ್ತ ದಾಖಲಿಸಬಹುದಾದ ಅಥವಾ ಗುರಿ ಮುಟ್ಟಲು ಸೂಕ್ತವಾದ ಬಲಿಷ್ಟ ಬ್ಯಾಟಿಂಗ್‌ ಲೈನ್‌ ಅಪ್ ಆಯ್ಕೆ ಮಾಡಲಾಗಿದೆ” ಎಂದು ಹೇಳಿಕೆಯಲ್ಲಿ ರಾಬರ್ಟ್ ಹೇಯ್ನ್ಸ್ ಸಮರ್ಥಿಸಿಕೊಂಡಿದ್ದಾರೆ.
15 ಮಂದಿ ಆಟಗಾರರಲ್ಲಿ ಒಂಬತ್ತು ಆಟಗಾರರ ಪಾಲಿಗೆ ಚೊಚ್ಚಲ ವಿಶ್ವಕಪ್‌ ಟೂರ್ನಿ ಇದಾಗಿದೆ.
ವೆಸ್ಟ್‌ ಇಂಡೀಸ್‌: ಜೇಸನ್‌ ಹೋಲ್ಡರ್‌ (ನಾಯಕ), ಕ್ರಿಸ್‌ ಗೇಲ್‌, ಆ್ಯಂಡ್ರೆ ರಸೆಲ್‌, ಶೆಲ್ಡೋನ್‌ ಕೊಟ್ರಿಲ್‌, ಶನ್ನೋನ್‌ ಗ್ಯಾಬ್ರಿಯಲ್‌, ಕೇಮರ್‌ ರೋಚ್‌, ನಿಕೋಲಾಸ್‌ ಪೂರನ್‌ (ವಿ.ಕೀ), ಆಶ್ಲೆ ನರ್ಸ್, ಫ್ಯಾಬಿಯಾನ್‌ ಅಲ್ಲೇನ್‌, ಶಿಮ್ರೋನ್‌ ಹೆಟ್ಮೇರ್, ಶಾಯ್‌ ಹೋಪ್‌ (ವಿ.ಕೀ),

Related Articles