ಮಳೆ: ಭಾರತ-ಆಸ್ಟ್ರೇಲಿಯಾ ಪಂದ್ಯ ರದ್ದು

0
209
ಮೆಲ್ಬೋರ್ನ್:

ಭಾರತ ಹಾಗೂ ಆಸ್ಟ್ರೇಲಿಯಾ ವಿರುದ್ಧದ ಎರಡನೇ ಟಿ-20 ಪಂದ್ಯ ಮಳೆಯಿಂದಾಗಿ ರದ್ದಾಯಿತು. ಮೊದಲನೇ ಪಂದ್ಯದ ಸೋಲಿನಿಂದಾಗಿ ಎರಡನೇ ಕಾದಾಟದಲ್ಲಿ ಗೆದ್ದು ಸೇಡು ತೀರಿಸಿಕೊಳ್ಳಬೇಕೆಂಬ ತುಡಿತದಲ್ಲಿದ್ದ ಭಾರತಕ್ಕೆೆ ಮಳೆರಾಯ ಅವಕಾಶ ನೀಡಲಿಲ್ಲ.

ಇಲ್ಲಿನ ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ಆರಂಭಿಕ ಆಘಾತ ಅನುಭವಿಸಿತು. ತಂಡದ ಮೊತ್ತ ಒಂದು ರನ್ ಇರುವಾಗ ನಾಯಕ ಆ್ಯರೊನ್ ಪಿಂಚ್ ಶೂನ್ಯಕ್ಕೆೆ  ಖಲೀಲ್ ಅಹಮದ್‌ಗೆ ಕ್ಲೀನ್ ಬೌಲ್ಡ್ ಮಾಡಿದರು. ಕ್ರಿಸ್ ಲೀನ್(13), ಆರ್ಸಿ ಶಾಟ್(14), ಗ್ಲೇನ್ ಮ್ಯಾಕ್ಸವೆಲ್(19) ಹಾಗೂ ನಥಾನ್ ಕೌಲ್ಟರ್ ನೈಲ್(18) ಇವರು ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲೇ ಇಲ್ಲ. ಆದರೆ. ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ ಬೆನ್ ಮೆಕ್‌ಡೆರ್ಮೊಟ್ 30 ಎಸೆತಗಳಲ್ಲಿ 32 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ವೇಳೆ ಮಳೆ ಬಂದ ಕಾರಣ ಪಂದ್ಯವನ್ನು ನಿಲ್ಲಿಸಲಾಯಿತು. ಈ ವೇಳೆಗೆ  ಆಸ್ಟ್ರೇಲಿಯಾ 19 ಓವರ್‌ಗಳಿಗೆ ಏಳು ವಿಕೆಟ್ ನಷ್ಟಕ್ಕೆೆ 132 ರನ್ ದಾಖಲಿಸಿತು. ನಂತರ ತೀರ್ಪುಗಾರರು ಭಾರತಕ್ಕೆೆ 11 ಓವರ್‌ಗಳಿಗೆ 91 ರನ್ ಗುರಿ ನೀಡಿದರು. ಆದರೆ, ಮಳೆ ಹೆಚ್ಚಾಗಿದ್ದರಿಂದ ಪಂದ್ಯ ಮುಂದುವರಿಸುವುದು ಅಸಾಧ್ಯವಾಯಿತು. ಅಂತಿಮವಾಗಿ ತೀರ್ಪುಗಾರರು ಪಂದ್ಯ ರದ್ದು ಮಾಡಿದರು. ಭುವನೇಶ್ವರ್ ಕುಮಾರ್ ಹಾಗೂ ಖಲೀಲ್ ಅಹಮದ್ ತಲಾ ಎರಡು ವಿಕೆಟ್ ಪಡೆದರು.