Saturday, July 27, 2024

India vs Australia : ಕುಲದೀಪ್‌ ಯಾದವ್‌, ಹಾರ್ದಿಕ್‌ ಪಾಂಡ್ಯ ಭರ್ಜರಿ ದಾಳಿ: ಆಸ್ಟ್ರೇಲಿಯಾ ವಿರುದ್ದ ಭಾರತಕ್ಕೆ 270 ರನ್‌ ಸವಾಲು

ಚೆನ್ನೈ : ಭಾರತ ಹಾಗೂ ಆಸ್ಟ್ರೇಲಿಯಾ ನಡುವಿನ (India vs Australia) ಮೂರನೇ ಏಕದಿನ ಪಂದ್ಯದಲ್ಲಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಹಾಗೂ ಕುಲದೀಪ್‌ ಯಾದವ್‌ ಭರ್ಜರಿ ಬೌಲಿಂಗ್‌ ನಡೆಸಿದ್ದಾರೆ. ಬ್ಯಾಟಿಂಗ್‌ ಗೆ ಯೋಗ್ಯವಾಗಿರುವ ಮೈದಾನದಲ್ಲಿಯೂ ಆಸ್ಟ್ರೇಲಿಯಾ ತಂಡ 269 ರನ್‌ ಗಳಿಗೆ ಸರ್ವಪತನ ಕಂಡಿದೆ. ಈ ಮೂಲಕ ಭಾರತಕ್ಕೆ 270 ರನ್‌ಗಳ ಸವಾಲು ನೀಡಿದೆ.

ಚೆನ್ನೈನ ಎಂ.ಎ.ಚಿದಂಬರ ಸ್ಟೇಡಿಯಂನಲ್ಲಿ ಟಾಸ್‌ ಗೆದ್ದ ಬ್ಯಾಟಿಂಗ್‌ ಆಯ್ದುಕೊಂಡ ಆಸ್ಟ್ರೇಲಿಯಾ ತಂಡಕ್ಕೆ ಟ್ರಾವೆಡ್‌ ಹೆಡ್‌ ಹಾಗೂ ಮಿಚಲ್‌ ಮಾರ್ಚ್‌ ಉತ್ತಮ ಆರಂಭವೊದಗಿಸಿದ್ರು. ೬೮ರನ್‌ ಜೊತೆಯಾಟವಾಡಿದ್ದ ಆಸ್ಟ್ರೇಲಿಯಾಕ್ಕೆ ಹಾರ್ದಿಕ್‌ ಪಾಂಡ್ಯ ಆರಂಭಿಕ ಆಘಾತ ನೀಡಿದ್ರು. ನಂತರ ಕ್ರೀಸ್‌ಗೆ ಬಂದ ನಾಯಕ ಸ್ವೀವನ್‌ ಸ್ಮಿತ್‌ ಶೂನ್ಯಕ್ಕೆ ವಿಕೆಟ್‌ ಒಪ್ಪಿಸಿದ್ರು. ಇನ್ನೊಂದೆಡೆಯಲ್ಲಿ 47ರನ್‌ ಗಳಿಸಿ ಭರ್ಜರಿ ಬ್ಯಾಟಿಂಗ್‌ ನಡೆಸುತ್ತಿದ್ದ ಮಿಚಲ್‌ ಮಾರ್ಶ್‌ ಅವರನ್ನು ಕೂಡ ಹಾರ್ದಿಕ್‌ ಪಾಂಡ್ಯ ಬಲಿ ಪಡೆಯುವ ಮೂಲಕ ಆಸ್ಟ್ರೇಲಿಯಾಕ್ಕೆ ಆಘಾತ ನೀಡಿದ್ರು.

ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ದಾಳಿಯ ಬೆನ್ನಲ್ಲೇ ದಾಳಿಗೆ ಇಳಿದ ಕುಲದೀಪ್‌ ಯಾದವ್‌ ಆಸ್ಟ್ರೇಲಿಯಾ ಆಟಗಾರರನ್ನು ಕಟ್ಟಿಹಾಕುವ ಕಾರ್ಯಕ್ಕೆ ಮುಂದಾದ್ರು. ಡೇವಿಡ್‌ ವಾರ್ನರ್‌ 23 ರನ್‌ ಗಳಿಸಿದ್ರೆ, ಲಭುಶಾಘ್ನೆ 28 ರನ್‌ ಗಳಿಸಿದ್ದಾಗಲೇ ಕುಲದೀಪ್‌ ಯಾದವ್‌ ಇಬ್ಬರಿಗೂ ಫೆವಿಲಿಯನ್‌ ಹಾದಿ ಹಿಡಿಸಿದ್ರು. ನಂತರದಲ್ಲಿ ಅಲೆಕ್ಸ್‌ ಕ್ಯಾರಿ ಹಾಗೂ ಮಾರ್ಕಸ್‌ ಸ್ಟೊಯಿನಿಸ್‌ ಒಂದಿಷ್ಟು ಹೊತ್ತು ಕ್ರೀಸ್‌ ಕಚ್ಚಿಕೊಂಡು ಆಡಿದ್ರು. ಆದರೆ ತಂಡದ ಮೊತ್ತ ಇನ್ನೂರರ ಗಡಿ ದಾಟುತ್ತಿದ್ದಂತೆಯೇ ಸ್ಟೊಯಿನಿಸ್‌ ವಿಕೆಟ್‌ ಒಪ್ಪಿಸಿದ್ದಾರೆ. ಕುಲದೀಪ್‌ ಯಾದವ್‌ ಹಾಗೂ ಹಾರ್ದಿಕ್‌ ಪಾಂಡ್ಯ ಬೆನ್ನಲ್ಲೇ ಅಕ್ಷರ್‌ ಪಟೇಲ್‌ ಹಾಗೂ ಮೊಹಮದ್‌ ಸಿರಾಜ್‌ ಊತ್ತಮ ದಾಳಿ ಸಂಘಟಿಸಿ ತಲಾ ಎರಡು ವಿಕೆಟ್‌ ಪಡೆದುಕೊಂಡಿದ್ದಾರೆ. ಇದನ್ನೂ ಓದಿ : ICC ODI world cup 2023 ಏಕದಿನ ವಿಶ್ವಕಪ್‌ ಕ್ರಿಕೆಟ್‌: ಅಹಮದಾಬಾದ್‌ನಲ್ಲಿ ಫೈನಲ್‌

ಅಂತಿಮವಾಗಿ ಆಸ್ಟ್ರೇಲಿಯಾ ತಂಡ ಇನ್ನೂ ಒಂದು ಓವರ್‌ ಬಾಕಿ ಇರುವಾಗಲೇ 269 ರನ್‌ ಗಳಿಗೆ ಸರ್ವ ಪತನ ಕಂಡಿದೆ. ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ಹಾಗೂ ಆಸ್ಟ್ರೇಲಿಯಾ ತಲಾ ಒಂದೊಂದು ಪಂದ್ಯಗಳನ್ನು ಜಯಿಸಿದ್ದು, ಅಂತಿಮ ಪಂದ್ಯ ಜಯಿಸುವ ತಂಡ ಸರಣಿಯನ್ನು ತನ್ನದಾಗಿಸಿಕೊಳ್ಳಲಿದೆ. ಕಳೆದ ಎರಡೂ ಪಂದ್ಯಗಳು ಕನಿಷ್ಠ ಸ್ಕೋರ್‌ ಪಂದ್ಯವಾಗಿತ್ತು. ಆದ್ರೆ ಇಂದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ ಭಾರತಕ್ಕೆ ಸವಾಲಿನ ಮೊತ್ತವನ್ನೇ ನೀಡಿದೆ. ಇದನ್ನೂ ಓದಿ : The Sports School: ದಿ ಸ್ಪೋರ್ಟ್ಸ್  ಸ್ಕೂಲ್ ಗೆ ಬಿಟಿಆರ್ ಶೀಲ್ಡ್ ಚಾಂಪಿಯನ್ ಪಟ್ಟ

India vs Australia ಸಂಕ್ಷಿಪ್ತ ಸ್ಕೋರ್‌ :
ಆಸ್ಟ್ರೇಲಿಯಾ : ಮಿಚಲ್‌ ಮಾರ್ಷ್‌ (47), ಅಲೆಕ್ಸ್‌ ಕ್ಯಾರಿ (38), ಟ್ರಾವೆಸ್‌ ಹೆಡ್‌ (33), ಮಾರ್ನಸ್ ಲ್ಯಾಬುಸ್ಚಾಗ್ನೆ (28), ಸೇನ್‌ ಅಬೋಟ್‌ (26), ಮಾರ್ಕಸ್‌ ಸ್ಟೊಯಿನಿಸ್‌ (25 ), ಡೇವಿಡ್‌ ವಾರ್ನರ್‌ (23), ಆಸ್ಟೋನ್‌ ಆಗರ್‌ (21), ಹಾರ್ದಿಕ್‌ ಪಾಂಡ್ಯ 44/3, ಕುಲದೀಪ್‌ ಯಾದವ್‌ 56/3, ಮೊಹಮ್ಮದ್‌ ಸಿರಾಜ್‌ 37/2, ಅಕ್ಷರ್‌ ಪಟೇಲ್‌ 57/3

Related Articles