Tuesday, September 10, 2024

ಪುಣೆ ಚಾಲೆಂಜರ್: ಫೈನಲ್ ತಲುಪಿದ ಪ್ರಜ್ಞೇಶ್

ಪುಣೆ:

ಬೆಂಗಳೂರು ಓಪನ್ ಚಾಂಪಿಯನ್ ಪ್ರಜ್ಞೇಶ್ ಗುಣೇಶ್ವರನ್ ಅವರು ಪುಣೆ ಚಾಲೆಂಜರ್ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದರು. ಇಲ್ಲಿ ನಡೆದ ಸಿಂಗಲ್ಸ್  ವಿಭಾಗದ ಸೆಮಿಫೈನಲ್‌ನಲ್ಲಿ ಗುಣೇಶ್ವರನ್, ಆಲ್ಬೊಟ್ ಅವರನ್ನು 1-6, 6-4, 6-4 ಅಂತರಗಳಿಂದ ಪರಾಭವಗೊಳಿಸುವಲ್ಲಿ ಯಶಸ್ವಿಯಾದರು.

ವಿಶ್ವಾಸದಿಂದಲೇ ಮೈದಾನಕ್ಕೆೆ ಆಗಮಿಸಿದ ಪ್ರಜ್ಞೇಶ್ ಮೊದಲ ಸೆಟ್‌ನಲ್ಲಿ ನೀರಸ ಪ್ರದರ್ಶನದೊಂದಿಗೆ ಐದು ಅಂಕ ಹಿನ್ನಡೆಯಾದರು. ಎರಡು ಹಾಗೂ ಮೂರನೇ ಸೆಟ್‌ಗಳಲ್ಲಿ ಎಚ್ಚೆೆತ್ತುಕೊಳ್ಳುವ ಮೂಲಕ ಎರಡೆರಡು  ಪಾಯಿಂಟ್ ಮುನ್ನಡೆ ಸಾಧಿಸಿ ಗೆಲುವಿನ ನಗೆ ಬೀರಿದರು. ಅಂತಿಮ ಸುತ್ತಿನಲ್ಲಿ ಅವರು ಸ್ವೀಡನ್‌ನ ಎಲಿಸ್ ಯಮೀರ್ ಅವರನ್ನು ಎದುರಿಸಲಿದ್ದಾರೆ. ಡಬಲ್ಸ್  ನ ಉಪಾಂತ್ಯದಲ್ಲಿ ರಾಮಕುಮಾರ್ ರಾಮನಾಥನ್ ಮತ್ತು ವಿಜಯ್ ಸುಂದರ್ ಪ್ರಶಾಂತ್ ಜೋಡಿ ಆ್ಯಂಡ್ರೆೆ ಮಾರ್ಟಿನ್ ಮತ್ತು ಹನ್ಸ್ ಕ್ಯಾಸ್ಟಿಲೊ ಅವರನ್ನು 7-6, 6-0 ನೇರಸೆಟ್‌ಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು. ಈ ಜೋಡಿ ಮುಂದಿನ ಸುತ್ತಿನಲ್ಲಿ ಚೆಂಗ್-ಪೆಂಗ್ ಮತ್ತು ಯಾಂಗ್ ಸುಂಗ್ ಜೋಡಿಯನ್ನು ಎದುರಿಸಲಿದೆ.

Related Articles