ದೆಹಲಿ:
ವಿಶ್ವ ಮಹಿಳೆಯರ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಸೋನಿಯಾ ಚಾಹಲ್ ಫೈನಲ್ ಪ್ರವೇಶಿಸಿದರೆ, ಸಿಮ್ರಾನ್‌ಜೀತ್ ಕೌರ್ ಕಂಚಿನ ಪದಕಕ್ಕೆೆ ತೃಪ್ತಿಪಟ್ಟುಕೊಂಡರು.
ಇಲ್ಲಿ ನಡೆದ 57 ಕೆ.ಜಿ ವಿಭಾಗದ ಸೆಮಿಫೈನಲ್‌ನಲ್ಲಿ ಸೋನಿಯಾ ದಕ್ಷಿಣ ಕೊರಿಯಾ ಬಾಕ್ಸರ್ ಎದುರು 5-0 ಬೌಟ್‌ಗಳಿಂದ ಭರ್ಜರಿ ಜಯ ದಾಖಲಿಸಿದರು. ಪಂದ್ಯ ಆರಂಭದಿಂದಲೂ ಅಮೋಘ ಪ್ರದರ್ಶನ ತೋರುವಲ್ಲಿ ಯಶಸ್ವಿಯಾದ ಸೋನಿಯಾ ಎಲ್ಲ ಸುತ್ತುಗಳ ಮುನ್ನಡೆಯಾದರು.‘ಸೆಮಿಫೈನಲ್‌ನಲ್ಲಿ ಉತ್ತಮ ಪ್ರದರ್ಶನ ನೀಡಿ ಫೈನಲ್ ಪ್ರವೇಶಿಸಿರುವುದಕ್ಕೆೆ ಖುಷಿಯಾಗಿದೆ. ಮುಂದಿನ ಘಟ್ಟದಲ್ಲಿ ಇನ್ನೂ ಹೆಚ್ಚಿನ ಪ್ರದರ್ಶನ ತೋರಿ ಸ್ವರ್ಣ ಗೆಲ್ಲುವುದು ಪ್ರಮುಖ ಗುರಿಯಾಗಿದೆ’ ಎಂದು ಸೋನಿಯಾ ಸಂತಸ ವ್ಯಕ್ತಪಡಿಸಿದರು.
ಎರಡನೇ ಸೆಮಿಫೈನಲ್‌ನಲ್ಲಿ ಸಿಮ್ರಾನ್‌ಜೀತ್ ಕೌರ್ ಅವರು 64 ಕೆ.ಜಿ ವಿಭಾಗದಲ್ಲಿ ಚೀನಾದ ದಾನ್ ದೋ ಎದುರು ನೀರಸ ಪ್ರದರ್ಶನ ತೋರುವ ಮೂಲಕ ಸೋಲಿಗೆ ಶರಣಾಗಿ ಕಂಚಿನ ಪದಕ ತಮ್ಮದಾಗಿಸಿಕೊಂಡರು. ಟೂರ್ನಿಯ ಆರಂಭಿಕ ಪಂದ್ಯದಿಂದಲೂ ಉತ್ತಮ ಆಟವಾಡುವಲ್ಲಿ ಯಶಸ್ವಿಯಾಗಿದ್ದ ಕೌರ್ ಉಪಾಂತ್ಯದಲ್ಲಿ ನೀರಸ ಆಟದೊಂದಿಗೆ ಪರಾಭವಗೊಂಡು ನಿರಾಸೆಗೊಳಗಾದರು.