Thursday, September 12, 2024

ಕೊಹ್ಲಿ ನಿಯಂತ್ರಿಸಲು ವೇಗಿಗಳಿಂದ ಸಾಧ್ಯ

ಸಿಡ್ನಿ:

ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ನಿಯಂತ್ರಿಸಲು ಆಸ್ಟ್ರೇಲಿಯಾ ತಂಡದಲ್ಲಿ ವೇಗಿಗಳ ಮಾರಕ ದಾಳಿ ಸಾಕು ಎಂದು ಆಸೀಸ್ ನಾಯಕ ಟೀಮ್ ಪೈನೆ ತಿಳಿಸಿದರು.

ಇದೇ ಆರರಿಂದ ಆರಂಭವಾಗುವ  ನಾಲ್ಕು ಪಂದ್ಯಗಳ ಟೆಸ್‌ಟ್‌ ಸರಣಿಯಲ್ಲಿ ಹೆಚ್ಚು ಭಾವಾನಾತ್ಮಕರಾಗದಂತೆ ಆಸ್ಟ್ರೇಲಿಯಾ ಬೌಲರ್‌ಗಳಿಗೆ ಒತ್ತಾಯಿಸಿರುವ ನಾಯಕ, ಒಂದು ವೇಳೆ ಹೆಚ್ಚು ಭಾವನಾತ್ಮಕತೆಗೆ ಒಳಗಾದಲ್ಲಿ ನಾವು ಎಡವುವ ಸಾಧ್ಯತೆ ಇದೆ ಎಂದರು. ಸಾಮರ್ಥ್ಯಕ್ಕೆೆ ತಕ್ಕಂತೆ ನಮ್ಮಲ್ಲಿರುವ ಪ್ರತಿಭೆ ಅಳವಡಿಸಿಕೊಂಡು ಆಡುವ ಕಡೆ ಗಮನಹರಿಸುವ ಅಗತ್ಯವಿದೆ. ಆಸ್ಟ್ರೇಲಿಯಾ ವೇಗದ ಬೌಲಿಂಗ್ ವಿಭಾಗ ಅತ್ಯಂತ ಉತ್ತಮವಾಗಿದೆ. ಸ್ವಾಾಭಾವಿಕ ದಾಳಿ ನಡೆಸಿದ್ದೆೆ ಆದಲ್ಲಿ ಭಾರತ ಬ್ಯಾಟ್ಸ್  ಮನ್‌ಗಳನ್ನು ನಿಯಂತ್ರಿಸುವುದು ಸುಲಭ ಎಂದು ಹೇಳಿದರು.

Related Articles