Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕ್ರೀಡೆಯ ಮೂಲಕ ಬದುಕಿಗೆ ಶಿಸ್ತು: ಅಜಿತ್‌ ಡಿಕೋಸ್ಟಾ

ಕುಂದಾಪುರ: ಯುವಕರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಬದುಕಿನಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುತ್ತಾರೆ. ಇದರಿಂದಾಗಿ ಅವರ ಬದುಕು ಯಶಸ್ಸಿನತ್ತ ಸಾಗುತ್ತದೆ ಎಂದು ಕುಂದಾಪುರದ ಜನಪ್ರಿಯ ಬಾಡ್ಮಿಂಟಕ್‌ ಕೇಂದ್ರ ಕೋಸ್ಟಾ ಬ್ಯಾಡ್ಮಿಂಟನ್‌ ಸೆಂಟರ್‌ನ ನಿರ್ದೇಶಕರಾದ ಅಜಿತ್‌ ಡಿಕೋಸ್ಟಾ ಅವರು ಅಭಿಪ್ರಾಯಪಟ್ಟರು. Ajith Dcosta, director of Costa Badminton Center, a popular badminton center in Kundapur, believes that youths adopt discipline in life by engaging in sports.

ಅವರು ಇಲ್ಲಿನ ಗಾಂಧೀ ಮೈದಾನದಲ್ಲಿ ICYM ಕುಂದಾಪುರ ಆತಿಥ್ಯದಲ್ಲಿ ನಡೆದ ಧರ್ಮಪ್ರಾಂತದ ಕ್ರೀಡಾಕೂಟ Yuvaura ಉದ್ಘಾಟಿಸಿ ಮಾತನಾಡಿದರು.

“ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇರುವುದು ಕ್ರೀಡೆಗೆ ಮಾತ್ರ. ಶಿಸ್ತು ಮತ್ತು ಬದ್ಧತೆ ಇಲ್ಲದೆ ಬದುಕಿನಲ್ಲಿ ಯಶಸ್ಸು ಕಾಣಲು ಸಾಧ್ಯವಿಲ್ಲ. ಕ್ರೀಡೆ ಶಿಸ್ತು ಮತ್ತು ಬದ್ಧತೆಯನ್ನು ನಮಗೆ ನೀಡುತ್ತದೆ. ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡವರಿಗೆ ಶಿಸ್ತು ಮತ್ತು ಬದ್ಧತೆಯ ಆರಿವಾಗುತ್ತದೆ. ಸಮಯ ಪ್ರಜ್ಞೆ ಇಲ್ಲದ ಕ್ರೀಡಾಪಟು ಯಶಸ್ಸುನ್ನು ಕಾಣಲು ಅಸಾಧ್ಯ. ಆದ್ದರಿಂದ ಕ್ರೀಡಾಪಟುಗಳಿಗೆ ಸಮಯ ಪ್ರಜ್ಞೆ ಮುಖ್ಯ. ಅದಕ್ಕೆ ಹಿರಿಯರು ಸಮಯ ಪ್ರಜ್ಞೆಯ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು ಎಂದು ಹೇಳಿದರು.

ಟ್ರ್ಯಾಕ್‌ ವಿಭಾಗದಲ್ಲಿ 100, 200, 400, 800 ಹಾಗೂ 1500 ಮೀ, ಓಟದ ಸ್ಪರ್ಧೆಗಳು ನಡೆದವು. ಶಾಟ್‌ಪಟ್‌, ಲಾಂಗ್‌ಜಂಪ್‌, ಹೈಜಂಪ್‌, ಡಿಸ್ಕಸ್‌ ಹಾಗೂ ಜಾವೆಲಿನ್‌ ಥ್ರೋ ಸ್ಪರ್ಧೆಗಳು ನಡೆದವು. ವಾಲಿಬಾಲ್‌, ಹಗ್ಗ ಜಗ್ಗಾಟ ಹಾಗೂ 4×100 ಮೀ ರಿಲೇ ಕ್ರೀಡಾಕೂಟಕ್ಕೆ ಹೆಚ್ಚು ಕುತೂಹಲ ತಂದಿತು.

ICYM ಉಡುಪಿ ವಿಭಾಗ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. ICYM ಶಿರ್ವ ವಿಭಾಗ ರನ್ನರ್ಸ್‌ಅಪ್‌ ಗೌರವಕ್ಕೆ ಪಾತ್ರವಾಯಿತು.


administrator