ರಾಷ್ಟ್ರೀಯ ಕ್ರೀಡಾಕೂಟ: ರಾಫ್ಟಿಂಗ್‌ನಲ್ಲಿ ರಾಜ್ಯ ಸಮಗ್ರ ಚಾಂಪಿಯನ್
ತನಕ್ಪುರ: ಉತ್ತರಾಖಂಡ್‌ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ರಿವರ್ ರಾಫ್ಟಿಂಗ್ ವಿಭಾಗದಲ್ಲಿ ಕರ್ನಾಟಕ ಪುರುಷ ಹಾಗೂ ಮಹಿಳೆಯರ ತಂಡ 6 ಚಿನ್ನ ಹಾಗೂ 1 ಕಂಚಿನ ಪದಕ ಗೆದ್ದು ಸಮಗ್ರ ಚಾಂಪಿಯನ್ ಆಗಿ ರಾಜ್ಯಕ್ಕೆ ಕೀರ್ತಿ ತಂದಿದೆ. National Games Uttarakhand Karnataka won 6 Gold and emerged as overall champion in Rafting.
ಡೌನ್ ರಿವರ್ ರಾಫ್ಟಿಂಗ್‌ನಲ್ಲಿ ಪುರುಷರ ವಿಭಾಗದಲ್ಲಿ ಚಿನ್ನ, ವನಿತೆಯರ ವಿಭಾಗದಲ್ಲಿ ಚಿನ್ನ ಹಾಗೂ ಮಿಶ್ರ ವಿಭಾಗದಲ್ಲೂ ಚಿನ್ನದ ಪದಕ ಗೆದ್ದು ಕರ್ನಾಟಕ ತಂಡ ಅದ್ಭುತ ಸಾಧನೆ ಮಾಡಿದೆ. ರಿವರ್ ರಾಫ್ಟಿಂಗ್ ಸ್ಲಾಲೋಮ್ ವಿಭಾಗದಲ್ಲಿ ಕರ್ನಾಟಕದ ಮಹಿಳೆಯರ ವಿಭಾಗದಲ್ಲಿ ಚಿನ್ನ, ಮಿಶ್ರ ವಿಭಾಗದಲ್ಲಿ ಚಿನ್ನ ಹಾಗೂ ಪುರುಷರ ವಿಭಾಗದಲ್ಲಿ ಕಂಚಿನ ಪದಕ ಗೆದ್ದಿದೆ. ಆರ್‌ಎಕ್ಸ್ ವಿಭಾಗದಲ್ಲಿ ಮಹಿಳೆಯರ ವಿಭಾಗದಲ್ಲಿ ಚಿನ್ನ ಹಾಗೂ ಮಿಶ್ರ ವಿಭಾಗದಲ್ಲೂ ಚಿನ್ನ ಗೆದ್ದಿದೆ. ಒಟ್ಟು ಆರು ಚಿನ್ನ ಹಾಗೂ ಒಂದು ಕಂಚಿನ ಪದಕ ಕರ್ನಾಟಕದ ಪಾಲಾಗಿದೆ. ಎಂಟು ಸ್ಪರ್ಧೆಗಳಲ್ಲಿ ಕರ್ನಾಟಕ ಎಲ್ಲ ವಿಭಾಗಗಳಲ್ಲೂ ಪ್ರಭುತ್ವ ಸಾಧಿಸಿರುವುದು ಹೆಮ್ಮೆಯ ಸಂಗತಿ.
ಕರ್ನಾಟಕ ಮಹಿಳೆಯರ ತಂಡದಲ್ಲಿ ಪ್ರಾಂಜಲ, ಐಶ್ವರ್ಯ, ಧನಲಕ್ಷ್ಮೀ ಎ, ಬಿಂದು ಹಾಗೂ ಪುಷ್ಪ ಎಸ್ ಎಂ. ಸೇರಿದ್ದು, ಪುರುಷರ ವಿಭಾಗದಲ್ಲಿ ದಾದಾಪೀರ್ ಎಂ, ಆರುಲ್ ಕುಮಾರ್ ಜಿ, ರವಿ ಡಿ.ಆರ್, ಸಾಮಿ ಮುರುಗನ್ ಹಾಗೂ ಪೊಚಣ್ಣ ಜೇಡ್ಲಾ ಸೇರಿದ್ದಾರೆ.