Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಇಲ್ಲಿದೆ ಶಮಿ ಬೌಲಿಂಗ್‌ ಯಶಸ್ಸಿನ ಸಿಕ್ರೆಟ್‌!

ಹೊಸದಿಲ್ಲಿ: ನ್ಯೂಜಿಲೆಂಡ್‌ ವಿರುದ್ಧದ ವಿಶ್ವಕಪ್‌ ಪಂದ್ಯದಲ್ಲಿ 54 ರನ್‌ಗೆ 5 ವಿಕೆಟ್‌ ಗಳಿಸಿ ವಿಶ್ವಕಪ್‌ಗೆ ದಿಟ್ಟ ಎಂಟ್ರಿ ನೀಡಿದ ವೇಗದ ಬೌಲರ್‌ ಮೊಹಮ್ಮದ್‌ ಶಮಿಯ ಯಶಸ್ಸಿನ ಹಿಂದೆ ಎಷ್ಟೆಲ್ಲ ಶ್ರಮ ಇದೆ ನೋಡಿ. Secret behind Mohammed Shami’s bowling secret.

ಯಾವುದೋ ಒಂದು ಸರಣಿಗೆ ತನ್ನನ್ನು ಕೈಬಿಟ್ಟರೆಂದು ಮೊಹಮ್ಮದ್‌ ಶಮಿ ಸುಮ್ಮನೆ ಕುಳಿತಿಲ್ಲ. ಕ್ರಿಕೆಟ್‌ನಿಂದ ಗಳಿಸಿದ ಹಣದಲ್ಲಿ ಉತ್ತರಪ್ರದೇಶದಲ್ಲಿರುವ ತನ್ನ ಊರಾದ ಸಾಹಸಪುರ ಅಲಿನಗರ ಗ್ರಾಮದಲ್ಲಿ ಬೌಲಿಂಗ್‌ ತರಬೇತಿಗಾಗಿ ಪಿಚ್‌ ನಿರ್ಮಿಸಿದ್ದಾರೆ. ಇಲ್ಲಿ ಹೊನಲು ಬೆಳಕಿನ ವ್ಯವಸ್ಥೆ ಇದೆ. ತನ್ನ ಅಕಾಡೆಮಿಯಲ್ಲಿ ವಿಭಿನ್ನ ಗುಣಮಟ್ಟದ ಪಿಚ್‌ ಸ್ಥಾಪಿಸಿಕೊಂಡಿರುವ ಶಮಿ ಅಲ್ಲಿ ನಿತ್ಯವೂ ಅಭ್ಯಾಸ ಮಾಡುತ್ತಾರೆ. ಮ್ಯಾಚ್‌ ಇಲ್ಲದಿರುವಾಗ ನಿತ್ಯವೂ ಗುಡ್ಡಗಾಡು ಓಟದಲ್ಲಿ ತೊಡಗಿಸಿಕೊಳ್ಳುವ ಮೂಲಕ ನಿರಂತರ ಫಿಟ್ನೆಸ್‌ ಕಾಯ್ದುಕೊಂಡಿದ್ದಾಆರೆ.

ಸಾಹಸಪುರದಿಂದ ಉತ್ತಮ ಗುಣಮಟ್ಟದ ತರಬೇತಿ ಕೇಂದ್ರಗಳನ್ನು ಹುಡುಕಿಕೊಂಡು ಹೋಗಲು ಬಹಳ ಸಮಯ ತಗಲುತ್ತದೆ. ಈ ಕಾರಣಕ್ಕಾಗಿ ಕ್ರಿಕೆಟ್‌ನಿಂದ ತಾನು ಗಳಿಸಿದ ಹಣದ ಒಂದು ಭಾಗವನ್ನು ಕ್ರಿಕೆಟ್‌ಗಾಗಿಯೇ ಮೀಸಲಿಟ್ಟರು. ಆ ಮೂಲಕ ಕ್ರೀಡಾಂಗಣವನ್ನು ನಿರ್ಮಿಸಿ ಪಿಚ್‌ ಸ್ಥಾಪಿಸಿದರು.

ಶಮಿಯ ಬದುಕಿನಲ್ಲಿ ಕ್ರಿಕೆಟ್‌ ಹೊರತಾಗಿ ಬೇರೇನೂ ಇಲ್ಲ. ಕ್ರಿಕೆಟ್‌ ಪ್ರವಾಸ ಇಲ್ಲದಿರುವಾಗ ತನ್ನ ಕ್ರಿಕೆಟ್‌ ಕೌಶಲ್ಯವನ್ನು ಹೆಚ್ಚಿಸಿಕೊಳ್ಳುವ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಳ್ಳುತ್ತಿದ್ದರು. ವೆಸ್ಟ್‌ ಇಂಡೀಸ್‌ ಪ್ರವಾಸದಿಂದ ಹೊರಗುಳಿದಾಗಿನಿಂದ ವಿಶ್ವಕಪ್‌ಗಾಗಿ ಅಭ್ಯಾಸ ನಡೆಸುತ್ತಿದ್ದರು. ಎಂದು ಶಮಿ ಅವರ ಬಾಲ್ಯದ ಕೋಚ್‌ ಹಾಗೂ ಮೆಂಟರ್‌ ಮೊಹಮ್ಮದ್‌ ಬದ್ರುದ್ದೀನ್‌ ಹೇಳಿದ್ದಾರೆ.

2020 ರಿಂದ 2022 ರ ಅವಧಿಯಲ್ಲಿ ಶಮಿ ಸುಮಾರು 19 ತಿಂಗಳ ಕಾಲ ಭಾರತ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಒಂದು ದಿನವೂ ಅಭ್ಯಾಸದಿಂದ ದೂರ ಉಳಿದಿಲ್ಲ. ಜಸ್‌ಪ್ರೀತ್‌ ಬುಮ್ರಾ ಹಾಗೂ ಪ್ರಸಿದ್ಧ್‌ ಕೃಷ್ಣ ಅವರಲ್ಲಿ ಆಗ ಅನುಭವದ ಕೊರತೆ ಇದ್ದಿತ್ತು. ಭಾರತ ತಂಡಕ್ಕೆ ಅನುಭವಿ ಬೌಲರ್‌ ಬೇಕಾಗಿತ್ತು. ಆಗ ಆಯ್ಕೆ ಸಮಿತಿ ಬೇರೆ ಮಾರ್ಗವಿಲ್ಲದೆ “ಅಮ್ರೋಹ ಎಕ್ಸ್‌ಪ್ರೆಸ್‌” ಆಯ್ಕೆ ಮಾಡಬೇಕಾಯಿತು.

ತಮ್ಮದೇ ಕೃಷಿ ಭೂಮಿಯನ್ನು ಅಕಾಡೆಮಿಯಾಗಿ ಬದಲಾಯಿಸಿಕೊಂಡಿರುವ ಶಮಿ ಅಲ್ಲಿ ಮೂರು ವಿಧಧ ಪಿಚ್‌ ನಿರ್ಮಿಸಿದ್ದಾರೆ. ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿಯ ನಿಯಮದಂತೆ ಕ್ರೀಡಾಂಗಣವನ್ನು ನಿರ್ಮಿಸಿರುವುದರಿಂದ ಬಿಸಿಸಿಐ ಕಿರಿಯ ಆಟಗಾರರ ತರಬೇತಿಗೆ ಶಮಿ ಅವರ ಕ್ರೀಡಾಂಗಣವನ್ನು ಬಳಸುತ್ತಿರುವುದು ಗಮನಾರ್ಹ.

ಒದ್ದೆಯಾದ ಚೆಂಡನ್ನು ಹೊನಲು ಬೆಳಕಿನಲ್ಲಿ ಬಳಸುವುದು, ಬರಿಗಾಲಿನಲ್ಲಿ ಓಡುವುದು, ಫ್ಲ್ಯಾಟ್‌ ಪಿಚ್‌ನಲ್ಲಿ ಅಭ್ಯಾಸ ಮಾಡುವುದು ಇದರಿಂದಾಗಿ ಶಮಿ ಯಾರ ಪ್ರಭಾವವಿಲ್ಲದೆ ಕೇವಲ ಪ್ರತಿಭೆಯ ಆಧಾರದ ಮೇಲೆ ಮತ್ತೊಮ್ಮೆ ಕ್ರಿಕೆಟ್‌ ಅಂಗಣಕ್ಕೆ ಮರಳುವಂತಾಯಿತು.


administrator