Saturday, July 27, 2024

ಪಾಕ್‌ ಪರ ಕ್ರಿಕೆಟ್‌ ಆಡಿದ ಮೊದಲ ಹಿಂದೂ ಆಟಗಾರ ಅನಿಲ್‌

ಜಗತ್ತಿನ ಅನೇಕ ಕ್ರಿಕೆಟ್‌ ತಂಡಗಳನ್ನು ಗಮನಿಸಿದಾಗ ನಮಗೆ ಬೇರೆ ಬೇರೆ ಧರ್ಮದ ಆಟಗಾರರು ಸಿಗುತ್ತಾರೆ. ಆದರೆ ಪಾಕಿಸ್ತಾನ ತಂಡವನ್ನು ಗಮನಿಸಿದಾಗ ಆ ವೈವಿಧ್ಯತೆ ಕಾಣಸಿಗುವುದಿಲ್ಲ. ದಿನೇಶ್‌ ಕನೇರಿಯಾ ನಂತರ ಇತರ ಧರ್ಮದ ಆಟಗಾರರು ಕಾಣಸಿಗುವುದಿಲ್ಲ. ಕ್ರೀಡೆಯಲ್ಲಿ ಈ ರೀತಿಯ ಹುಡುಕಾಟ ಒಳ್ಳೆಯದಲ್ಲ. ಆದರೆ ಕುತೂಹಲಕ್ಕಾಗಿ ಮಾತ್ರ. ಪಾಕಿಸ್ತಾನ ತಂಡದಲ್ಲಿ ಹಿಂದೂ ಕ್ರಿಕೆಟಿಗರನ್ನು ಊಹಿಸಿಕೊಳ್ಳಲು ಸಾಧ್ಯವೇ? ಎಂಬಂತ ಸ್ಥಿತಿಗೆ ನಾವು ತಲುಪಿದ್ದೇವೆ. ಆದರೆ ಅನಿಲ್‌ ದಲಪತ್‌ ಎಂಬ ಆಟಗಾರರನ್ನು ನಾವು ಮರೆಯುವಂತಿಲ್ಲ. ಏಕೆಂದರೆ ಪಾಕಿಸ್ತಾನ ತಂಡದ ಪರ ಆಡಿದ ಮೊದಲ ಹಿಂದೂ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. Anil Dalpat is the first Hindu player who played for Pakistan.

ಅನಿಲ್‌ ಪಾಕಿಸ್ತಾನದ ಪರ ಕ್ರಿಕೆಟ್‌ಗೆ ವಿದಾಯ ಹೇಳಿ ಶುಕ್ರವಾರಕ್ಕೆ (ಅಕ್ಟೋಬರ್‌ 27) 38 ವರ್ಷ ಪೂರ್ಣಗೊಳ್ಳುತ್ತದೆ. ಕೆನಡಾ ತಂಡದ ಕೋಚ್‌ ಆಗಿ ಕಾರ್ಯನಿರ್ವಹಿಸಿದ್ದ ಅನಿಲ್‌ ಈಗ ಉದ್ಯಮದಲ್ಲಿ ತಮ್ಮನ್ನು ತೊಡಗಿಸಿಕೊಂಡು ಕ್ರಿಕೆಟ್‌ನಿಂದ ದೂರ ಉಳಿದಿದ್ದಾರೆ. ನಂತರ ಅವರ ಸಹೋದರ ಸಂಬಂಧಿ ದಾನಿಶ್‌ ಕನೇರಿಯಾ ಪಾಕಿಸ್ತಾನದ ಪರ ಆಡಿದ ಕೊನೆಯ ಹಿಂದೂ ಆಟಗಾರ ಎನಿಸಿದರು.

ಪಾಕಿಸ್ತಾನದ ವಾಸಿಂ ಬಾರಿ ಅವರ ನಿವೃತ್ತಿಯ ನಂತರ ಇಂಗ್ಲೆಂಡ್‌ ವಿರುದ್ಧ 1983-84ರಲ್ಲಿ ಟೆಸ್ಟ್‌  ಕ್ರಿಕೆಟ್‌ಗೆ ಕಾಲಿಟ್ಟ ಅನಿಲ್‌ 9 ಟೆಸ್ಟ್‌ ಪಂದ್ಯಗಳನ್ನಾಡಿದ್ದರು. 1985ರಲ್ಲಿ ನ್ಯೂಜಿಲೆಂಡ್‌ ವಿರುದ್ಧ ಕೊನೆಯ ಟೆಸ್ಟ್‌ ಪಂದ್ಯವನ್ನಾಡಿದರು. ಮೂರು ವರ್ಷಗಳ ಅಂತಾರಾಷ್ಟ್ರೀಯ ಕ್ರಿಕೆಟ್‌ ಬದುಕಿನಲ್ಲಿ 9 ಟೆಸ್ಟ್‌ ಹಾಗೂ 15 ಏಕದಿನ ಪಂದ್ಯಗಳನ್ನು ಆಡಿದ್ದರು. ಉತ್ತಮ ವಿಕೆಟ್‌ಕೀಪರ್‌ ಆಗಿದ್ದ ಅನಿಲ್‌  25 ವಿಕೆಟ್‌ ಉರುಳಿಸುವಲ್ಲಿ ನೆರವಾಗಿದ್ದರು. 52 ಅವರ ಗರಿಷ್ಠ ರನ್‌ ಗಳಿಕೆಯಾಗಿತ್ತು.1983-84ರಲ್ಲಿ ಪಾಕಿಸ್ತಾನದ ದೇಶೀಯ ಕ್ರಿಕೆಟ್‌ನಲ್ಲಿ 67 ವಿಕೆಟ್‌ ಉರುಳಿಸುವಲ್ಲಿ ನೆರವಾದದ್ದು ಅನಿಲ್‌ ಅವರ ಹೆಸರಲ್ಲಿ ದಾಖಲೆಯಾಗಿ ಉಳಿದಿದೆ.

ಅನಿಲ್‌ ಅವರ ತಂದೆ ದಲಪತ್‌ ಸೋನವಾರಿಯಾ ಸೂರತ್‌ ಮೂಲದವರು. 1959ರಲ್ಲಿ ಆಸ್ಟ್ರೇಲಿಯಾ ತಂಡದ ಆಟಗಾರ ನಾರ್ಮನ್‌ ಒʼನೈಲ್‌ ಲಾಹೋರ್‌ನಲ್ಲಿ ನಡೆದ ಟೆಸ್ಟ್‌ ಪಂದ್ಯವೊಂದರಲ್ಲಿ 134 ರನ್‌ ಸಿಡಿಸಿದ್ದು ದಲಪತ್‌ ಅವರಿಗೆ ಖುಷಿ ಕೊಟ್ಟಿತು. ಇದರಿಂದ ಸ್ಫೂರ್ತಿ ಪಡೆದ ಅವರು ತಮ್ಮ ಮಗನಿಗೆ ಅನಿಲ್‌ ಎಂದು ಹೆಸರಿಟ್ಟರು.

Related Articles