Friday, June 14, 2024

ವಿಶ್ವಕಪ್ ಮಧ್ಯದಲ್ಲೆ ಮನೆ ದಾರಿ ಹಿಡಿದ ವಿಶ್ವ ಚಾಂಪಿಯನ್ಸ್!

ಪ್ರದೀಪ್‌ ಪಡುಕರೆ, Pradeep Padukare

ಹಾಲಿ ಚಾಂಪಿಯನ್ ಇಂಗ್ಲೆಂಡ್ ಕಳೆದ ಬಾರಿಯ ವಿಶ್ವಕಪ್ ಗೆದ್ದಿದ್ದು ರನ್ನುಗಳಿಂದಲ್ಲ, ವಿಕೆಟ್‌ಗಳಿಂದಲ್ಲ ಬೌಂಡರಿ ಕೌಂಟ್ ಲೆಕ್ಕಚಾರದಲ್ಲಿ. England are won the world cup by barest of margin ..barest of all margin. ಅದನ್ನೆ ಕ್ರೀಡಾ ಭಾಷೆಯಲ್ಲಿ barest of margin ಅನ್ನುತ್ತಾರೆ. ಇರುವಂತ ಕ್ರಿಕೆಟ್ ಲೆಕ್ಕಚಾರದಲ್ಲಿ ಅತ್ಯಂತ ಸಣ್ಣ ಅಂತರದ ಗೆಲುವು‌.

ಅದು ಅದೃಷ್ಟದ ಗೆಲುವು. ಪೂರ್ತಿ ಪಂದ್ಯದಲ್ಲಿ ನ್ಯೂಜಿಲೆಂಡ್ ಇಂಗ್ಲೆಂಡ್‌‌ಗೆ ಸಮ ಸಮವಾಗಿಯೇ ಇತ್ತು. ಆದರೂ ಕೊನೆಗೆ ಅದೃಷ್ಟದಾಟದಲ್ಲಿ ಆಂಗ್ಲರ ಕೈ ಮೇಲಾಗಿದ್ದು ಇತಿಹಾಸ. 

ಹೊದ ಬಾರಿಯ ಕೂಟದಲ್ಲಿ ಲಕ್ಕಿಯಾಗಿ ಗೆದ್ದು ಬಂದ ಇಂಗ್ಲೆಂಡ್‌ ಈ ವಿಶ್ವಕಪ್‌‌ಗೆ ಭಾರತಕ್ಕೆ ಕಾಲಿಟ್ಟ ದಿನದಿಂದ ನಸೀಬು ಕೈ ಕೊಟ್ಟಿದೆ, ಜೊತೆಗೆ ಬಲಾಡ್ಯ ಬ್ಯಾಟಿಂಗ್ ಜಂಗಬಲ ಕುಸಿದು ಬಿದ್ದಿದೆ‌. ಬೌಲರ್‌ಗಳಂತು ಫುಲ್ ಫ್ಲಾಪ್ ಆಗಿದ್ದಾರೆ. ಇದರ ಪರಿಣಾಮ ಅಂಕಪಟ್ಟಿಯಲ್ಲಿ ಕೆಳಗಿನಿಂದ ಮೊದಲರೆಡು ಸ್ಥಾನದಲ್ಲೆ ಓಡಾಡುತ್ತಿದೆ‌ ಬಟ್ಲರ್ ಬಳಗ.

ಮೊದಲ ಪಂದ್ಯದಲ್ಲೆ ಸ್ಪರ್ಧಾತ್ಮಕ ಮೊತ್ತ ಪೇರಿಸಿದರು ಕೂಡ ರಾಚಿನ್ ರವೀಂದ್ರ ಮತ್ತು ಕಾನ್‌ವೇ ಅಬ್ಬರದ ಜೋಡಿ ಶತಕದೆದರು ಒಂಭತ್ತು ವಿಕೆಟ್‌ಗಳಿಂದ ಸೋತು ಸುಣ್ಣವಾಯಿತು ಇಂಗ್ಲೆಂಡ್.

ಮುಂದಿನ ಪಂದ್ಯದಲ್ಲಿ ತನ್ನ ನೈಜ ಬ್ಯಾಟಿಂಗ್ ಶಕ್ತಿ ಪ್ರದರ್ಶನ ಪಣಕ್ಕಿಟ್ಟು, ಅಗ್ರಕ್ರಮಾಂಕದ ಅಬ್ಬರದಿಂದ 360ರ ಮೊತ್ತ ಪೇರಿಸಿ ಬಾಂಗ್ಲಾವನ್ನ ಏಕಪಕ್ಷೀಯವಾಗಿ ಸೋಲಿಸಿ ಮರಳಿ ಲಯಕ್ಕೆ ಬಂತು. ಆದರೆ ನಂತರದ ಪಂದ್ಯದಲ್ಲಿ ಆಫ್ಘನ್‌ ತಂಡ ಇಂಗ್ಲಿಷರಿಗೆ ಸುಲಭ ತುತ್ತಾಗಬಹುದು ಎಂಬ ಕ್ರಿಕೆಟ್ ಎಕ್ಸ್‌ಪರ್ಟ್ ನಿರೀಕ್ಷೆ ಹುಸಿಯಾಯಿತು. ಸಾಧಾರಣ ತಂಡ ಅಫ್ಘಾನಿಸ್ತಾನ ಆಂಗ್ಲ ಬೌಲರ್‌ಗಳೆದುರು‌ ಮೂನ್ನುರರ ಹತ್ತಿರ ಹತ್ತಿರ ಬಂದು ನಿಂತಿತು. ಅದೇನು ದೊಡ್ಡ ಮೊತ್ತವಲ್ಲ ಇಂಗ್ಲೆಂಡ್ ಬ್ಯಾಟಿಂಗ್ ಸಾಲಿಗೆ. ರಶೀದ್ ಕಂಪೆನಿಯ ಸ್ಪಿನ್ ಜಾಲಕ್ಕೆ ಸಿಲುಕಿ ತನ್ನ ವಿಶ್ವಕಪ್ ಚರಿತ್ರೆಯ ಹೀನಾಯ ಸೋಲನುಭವಿಸಿತು ಇಂಗ್ಲೆಂಡ್.

ಮುಂದಿನದ್ದು ಮತ್ತೊಂದು ಘೋರ ಸೋಲು. ಎದುರಾಳಿ ದಕ್ಷಿಣ ಆಫ್ರಿಕಾ. ಮೊದಲು ಬ್ಯಾಟಿಂಗ್ ಇಳಿದ ಆಪ್ರೀಕಾದ ಅಷ್ಟೂ ಜನ ಸ್ಪೋಟಕ ಬ್ಯಾಟಿಂಗ್ ಮಾಡಿ ವಾಂಖೇಡೆಯಲ್ಲಿ ರನ್ ಮಳೆಗೆರೆದು ಇಂಗ್ಲೆಂಡ್ ಬೌಲರ್‌ಗಳನ್ನ ಹಣ್ಣುಗಾಯಿ ನೀರುಗಾಯಿ ಮಾಡಿ ಬಿಟ್ಟರು. ಬರಿ ಬೌಂಡರಿ ಸಿಕ್ಸರ್‌ಗಳ ಉಡಾವಣೆ ಮಾಡಿದ ಹರಿಣಗಳ ಒಟ್ಟು‌ ಮೊತ್ತ 399.!

ಟಾರ್ಗೆಟ್ ನೋಡಿ ಭಯ ಬಿದ್ದಂತೆ ಆಡಿದ ಡೆಂಜರಸ್ ಇಂಗ್ಲೆಂಡ್ ಬ್ಯಾಟಿಂಗ್ 100 ರನ್ನಿನೊಳಗೆ ಅಗ್ರ ಎಂಟು ವಿಕೆಟ್ ಕಳೆದುಕ್ಕೊಂಡು ಛಿದ್ರವಾಗಿ,

229 ರನ್ನುಗಳ ಮತ್ತೊಂದು ಅವಮಾನಕಾರಿ ಸೋಲನುಭವಿಸಿತು. ಅಲ್ಲಿಗೂ ಚೇತರಿಸಿಕೊಳ್ಳದ ಕ್ರಿಕೆಟ್ ಜನಕರು ಚಿನ್ನಸ್ವಾಮಿಯಲ್ಲಿ  do or die ಪಂದ್ಯದಲ್ಲಿ ಸಾಮಾನ್ಯ ಲಂಕಾ ಬೌಲಿಂಗ್ ಎದುರು ಕೇವಲ 156ಕ್ಕೆ ಗಂಟುಮೂಟೆ ಕಟ್ಟಿ ಮಗದೊಂದು ಹೀನಾಯ ಸೋಲನ್ನ ಮೈಮೇಲೆ ಎಳೆದುಕೊಂಡಂತಿದೆ.

ಇಲ್ಲಿಗೆ ಈ ವಿಶ್ವ‌ಕಪ್‌ನಲ್ಲಿ ಇಂಗ್ಲೆಂಡ್ ಆಟ ಹೆಚ್ವು ಕಡಿಮೆ ಮುಗಿದಂತೆ. ಇನ್ಯಾವ ಲೆಕ್ಕಚಾರವು ಇಂಗ್ಲೆಂಡನ್ನ ಕಾಪಾಡುವುದು ಕಷ್ಟ ‌ಕಷ್ಟ.!

Related Articles