Saturday, July 27, 2024

ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಗೆ 140 ಕೋಟಿ ರೂ. ನಷ್ಟ

ಮೆಲ್ಬೋರ್ನ್‌: ಕ್ರಿಕೆಟ್‌ ಜಗತ್ತನ್ನು ತನ್ನ ಆಟದ ಮೂಲಕ ಆಳುತ್ತಿದ್ದ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿಗೆ 2022-23ರ ಆರ್ಥಿಕ ವರ್ಷದಲ್ಲಿ 140 ಕೋಟಿ ರೂ. ನಷ್ಟವಾಗಿದೆ. Cricket Australia (CA) reported loss 140 Cr Loss

2022ರ ಟಿ20 ವಿಶ್ವಕಪ್‌ ಆತಿಥ್ಯ ವಹಿಸಿಯೂ, 357 ಕೋಟಿ ರೂ. ಲಾಭ ಪಡೆದರೂ ಕ್ರಿಕೆಟ್‌ ಆಸ್ಟ್ರೇಲಿಯಾ ನಷ್ಟದಲ್ಲಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ. ಮಾಧ್ಯಮದ ಹಕ್ಕು ಮತ್ತು ಆಷಸ್‌ ಹೊರತಾದ ಟೂರ್ನಿಗಳಲ್ಲಿ ಇಳಿದ ಆದಾಯ ಇದು ನಷ್ಟಕ್ಕೆ ಪ್ರಮುಖ ಕಾರಣವಾಗಿದೆ.

ಆಟಗಾರರ ಸಂಭಾವನೆಯಲ್ಲಿ ಶೇ 5ರಷ್ಟು ಏರಿಕೆ, ಕೋರೋನೋತ್ತರ ತಂಡದ ಪ್ರವಾಸದ ವೆಚ್ಚ ಮತ್ತು ಪ್ರಾಥಮಿಕ ಹಂತದಲ್ಲಿ ಕ್ರಿಕೆಟ್‌ ಅಭಿವೃದ್ಧಿಗೆ ಹೆಚ್ಚು ವೆಚ್ಚವಾಗಿರುವುದು ಈ ನಷ್ಟಕ್ಕೆ ಪ್ರಮುಖ ಕಾರಣವಾಗಿದೆ. 2024-2031 ಅವಧಿಗೆ ಮಾಧ್ಯಮ ಹಕ್ಕಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್‌ ಮಂಡಳಿ ಸುಮಾರು 9,593 ಕೋಟಿ ರೂ.ಗಳಿಗೆ ಎರಡು ಕಂಪೆನಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ.

ಆಸ್ಟ್ರೇಲಿಯಾ ಕ್ರಿಕೆಟ್‌ ಆಟಗಾರರ ಸಂಸ್ಥೆಯ ಜೊತೆ ಮಹಿಳಾ ಆಟಗಾರ್ತಿಯರಿಗಾಗಿ 1107 ಕೋಟಿ ರೂ. ಗಳಿಗೆ ಜೀವನಪರ್ಯಂತದ ಒಪ್ಪಂದಕ್ಕೆ ಸಹಿ ಮಾಡಿದೆ. ಬಿಗ್‌ಬ್ಯಾಷ್‌ ಲೀಗ್‌ಗೆ ಅಪಾರ ಪ್ರಮಾಣದಲ್ಲಿ ವೆಚ್ಚ ಮಾಡುತ್ತಿರುವುದು ಕೂಡ ಕ್ರಿಕೆಟ್‌ ಆಸ್ಟ್ರೇಲಿಯಾದ ನಷ್ಟದ ಪ್ರಮಾಣದಲ್ಲಿ ಏರಿಕೆಯಾಗಲು ಮತ್ತೊಂದು ಕಾರಣ.

Related Articles