Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಬಜೆಟ್‌ನಲ್ಲಿ ಕ್ರೀಡೆ: ಲೆಕ್ಕಕ್ಕೆ 3794.30 ಕೋಟಿ, ಇದರಲ್ಲಿ ಆಟಕ್ಕೆ ಎಷ್ಟೋ?

ಹೊಸದಿಲ್ಲಿ: ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಅವರು ಮಂಡಿಸಿದ 2025-26ರ ಕೇಂದ್ರ ಬಜೆಟ್‌ನಲ್ಲಿ ಕ್ರೀಡೆಗೆ 3794.30 ಕೋಟಿ ರೂ,ಗಳನ್ನು ಮೀಸಲಿಡಲಾಗಿದೆ. The Ministry of Youth Affairs and Sports has been assigned ₹3794.30 crore for FY 2025-26.

3794.30 ಕೋಟಿ ರೂ,ಗಳಲ್ಲಿ ಕೇಂದ್ರ ಯೋಜನೆಗಳಿಗೆ 2191.01 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ. ರಾಷ್ಟ್ರೀಯ ಯುವ ಸಶಕ್ತೀಕರಣ ಕಾರ್ಯಕ್ರಮ, ಕ್ರೀಡಾ ಸಾಧಕರಿಗೆ ಬಹುಮಾನ, ಕ್ರೀಡಾಪಟುಗಳಿಗೆ ಪಂಡಿತ್‌ ದೀನ್‌ದಯಾಳ್‌ ಉಪಾಧ್ಯಾಯ ರಾಷ್ಟ್ರೀಯ ಕಲ್ಯಾಣ ನಿಧಿ, ರಾಷ್ಟ್ರೀಯ ಕ್ರೀಡಾ ಅಭಿವೃದ್ಧಿ ನಿಧಿ, ಕ್ರೀಡಾ ಫೆಡರೇಷನ್‌ಗಳಿಗೆ ಆರ್ಥಿಕ ನೆರವು, ಕ್ರೀಡೆಯಲ್ಲಿ ಮಾನವಸಂಪನ್ಮೂಲ ಅಭಿವೃದ್ಧಿಗಾಗಿ ನಿಧಿ, ರಾಷ್ಟ್ರೀಯ ಕ್ರೀಡಾ ವಿಜ್ಞಾನ ಹಾಗೂ ಸಂಶೋಧನಾ ಕೇಂದ್ರಕ್ಕೆ ನೆರವು, ಖೇಲೋ ಇಂಡಿಯಾ, ಜಮ್ಮು ಮತ್ತು ಕಾಶ್ಮೀರದ ಕ್ರೀಡಾ ಅಭಿವೃದ್ಧಿಗೆ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟಕ್ಕೆ ಸೇರಿದ ಯೋಜನೆಗಳಿರುತ್ತವೆ.

1000 ಕೋಟಿ ರೂ.ಗಳನ್ನು ಖೇಲೋ ಇಂಡಿಯಾಕ್ಕೆ ಹಾಗೂ 1558 ಕೋಟಿ ರೂ.ಗಳನ್ನು ಸ್ವಾಯತ್ತ ಕ್ರೀಡಾ ಸಂಸ್ಥೆಗಳಿಗೆ ಕೇಂದ್ರ ಸರಕಾರ ವಿನಿಯೋಗಿಸಲಿದೆ.  ಕಳೆದ ಬಜೆಟ್‌ಗಿಂತ ಈ ಬಾರಿ 351.98 ಕೋಟಿ ರೂ.ಗಳನ್ನು ಕ್ರೀಡಾ ಇಲಾಖೆಗೆ ಹೆಚ್ಚುವರಿಯಾಗಿ ನೀಡಲಾಗಿದೆ.


administrator