ಕ್ರಿಕೆಟ್ ಅಂಗಣ ತೊರೆದು ಕತಾರ್ ಏರ್‌ವೇಸ್‌ನ ಪೈಲಟ್ ಆದ ಫ್ರೆಂಡ್
ಹರಾರೆ: ಕ್ರಿಕೆಟ್‌ನಲ್ಲಿ ಯಶಸ್ಸು ಕಾಣುವುದಕ್ಕಾಗಿ ಅನೇಕರು ಓದನ್ನು ನಿಲ್ಲಿಸುತ್ತಾರೆ. ಆದರೆ ಜಿಂಬಾಬ್ವೆಯ ಆಟಗಾರ ಟ್ರಾವಿಸ್ ಫ್ರೆಂಡ್ ಕ್ರಿಕೆಟ್ ಬದುಕಿನ ನಡುವೆಯೇ ಓದನ್ನು ಪೂರ್ಣಗೊಳಿಸಿ ನಂತರ ಕ್ರಿಕೆಟ್‌ಗೆ ವಿದಾಯ ಹೇಳಿ ಈಗ ಜತ್ತಿನ ಶ್ರೇಷ್ಠ ವಿಮಾನ ಯಾನ ಕಂಪೆನಿಗಳಲ್ಲಿ ಒಂದಾಗಿರುವ ಕತಾರ್ ಏರ್‌ವೇಸ್‌ನಲ್ಲಿ ಪೈಲಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. Zimbabwe Cricketer Travis Friend left the cricket and became a Commercial Pilot in Qatar Airways
ಜಿಂಬಾಬ್ವೆ ಪರ 2000 ದಿಂದ 2004 ವರೆಗೆ ಅಂತಾರಾಷ್ಟೀಯ ಕ್ರಿಕೆಟ್ ಆಡಿರುವ ಟ್ರಾವಿಸ್ ಫ್ರೆಂಡ್, 13 ಟೆಸ್ಟ್ ಹಾಗೂ 51 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಿದ್ದಾರೆ, ಜಿಂಬಾಬ್ವೆ ಕ್ರಿಕೆಟ್ ಮಂಡಳಿಯ ವಿರುದ್ಧ ಗುತ್ತಿಗೆಯ ವಿಚಾರದಲ್ಲಿ 15 ಆಟಗಾರರ ಗುಂಪು ಕಟ್ಟಿಕೊಂಡು ಹೋರಾಟ ನಡೆಸಿದವರಲ್ಲಿ ಫ್ರೆಂಡ್ ಪ್ರಮುಖರು. 2005ರಲ್ಲಿ ಈ ಹೋರಾಟನ ಡೆದಿತ್ತು. ಫ್ರೆಂಡ್ಸ್ ಆ ಬಳಿಕ ಮತ್ತೆ ಕ್ರಿಕೆಟ್‌ಗೆ ಮರಳಲಿಲ್ಲ. ಇಂಗ್ಲೆಂಡ್‌ನಲ್ಲಿ ಕಮರ್ಷಿಯಲ್ ಪೈಲಟ್ ಲೈಸನ್ಸ್ ಪಡೆದು ವಿಮಾನ ಚಾಲನೆಗೆ ಅಗತ್ಯವಿರುವ ಎಲ್ಲ ಅರ್ಹತೆಗಳನ್ನು ಗಳಿಸುತ್ತಾರೆ. ಅಗತ್ಯವಿರುವ ಪರೀಕ್ಷೆಗಳಲ್ಲಿ ಉತ್ತಮ ದರ್ಜೆಯಲ್ಲಿ ಪಾಸಾಗುತ್ತಾರೆ.
ಮೊದಲು ಸ್ಪಿನ್ ಬೌಲರ್ ಆಗಿದ್ದ ಫ್ರೆಂಡ್ ನಂತರ ವೇಗದ ಬೌಲರ್ ಆಗಿ ಯಶಸ್ಸು ಕಾಣುತ್ತಾರೆ. ಟೆಸ್ಟ್‌ನಲ್ಲಿ 25 ಹಾಗೂ ಏಕದಿನ ಕ್ರಿಕೆಟ್‌ನಲ್ಲಿ 35 ವಿಕೆಟ್ ಗಳಿಸಿರುತ್ತಾರೆ. ಭಾರತದ ವಿರುದ್ಧ 2001ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಕಾಲಿಟ್ಟ ಫ್ರೆಂಡ್ಸ್ ಅನ್ಯಾಯದ ವಿರುದ್ಧ ಸಿಡಿದೇಳುವವರು. 2008 ರಿಂದ ಪೈಲಟ್ ಆಗಿ ದುಡಿಯಲಾರಂಭಿಸಿದ ಫ್ರೆಂಡ್ ಕೆಲ ಸಮಯ ಫ್ಲೈಬೀ ಏರ್‌ವೇಸ್‌ನಲ್ಲಿ ಪೈಲಟ್ ಆಗಿ ಈಗ ಕತಾರ್ ಏರ್‌ವೇಸ್‌ನ ಅನುಭವಿ ಪೈಲಟ್ ಆಗಿರುತ್ತಾರೆ.