Friday, December 13, 2024

ವಾರಿಯರ್ಸ್‌ಗೆ ರೋಚಕ ಜಯ

ಸ್ಪೋರ್ಟ್ಸ್ ಮೇಲ್ ವರದಿ

ಅತ್ಯಂತ ರೋಚಕವಾಗಿ ನಡೆದ ಕೆಪಿಎಲ್ ಪಂದ್ಯದಲ್ಲಿ ಮೈಸೂರು ವಾರಿಯರ್ಸ್ ತಂಡ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ 1 ರನ್ ರೋಚಕ ಜಯ ಗಳಿಸಿದೆ.

ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಬೆಳಗಾವಿ ಪ್ಯಾಂಥರ್ಸ್ ಆತಿಥೇಯ ಮೈಸೂರು ವಾರಿಯರ್ಸ್ ತಂಡ 4 ವಿಕೆಟ್‌ನಷ್ಟಕ್ಕೆ 201 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು.
ಅರ್ಜನ್ ಹೊಯ್ಸಳ (37), ರಾಜು ಭಟ್ಕಳ್ (31),  ಶೋಯೇಬ್ ಮ್ಯಾನೇಜರ್ (56) ಹಾಗೂ ಅಮಿತ್ ವರ್ಮಾ (42 * ) ಅವರ ಆಕರ್ಷಕ ಬ್ಯಾಟಿಂಗ್‌ನೆರವಿನಿಂದ ಮೈಸೂರು ತಂಡ 201 ರನ್ ಗಳಿಸಿತು. ಬೃಹತ್ ಮೊತ್ತವನ್ನು ಬೆಂಬತ್ತಿದ ಬೆಳಗಾವಿ ತಂಡ ದಿಕ್ಷಾಂಶು ನೇಗಿ (60), ನಿಧೀಶ್ ಎಂ. (44 * ), ಅಕ್ಷಯ್ ಬಲ್ಲಾಳ್ (21) ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಜಯದ ಸನೀಹ ತಲುಪಿತ್ತು. ಆದರೆ ವೈಶಾಕ್ ವಿಜಯ ಕುಮಾರ್ (30ಕ್ಕೆ 2) ಹಾಗೂ ಅಮಿತ್ ವರ್ಮಾ (29ಕ್ಕೆ2) ಅವರ ವೇಗ ಹಾಗೂ ಸ್ಪಿನ್ ದಾಳಿಗೆ ತತ್ತರಿಸಿ ಕೇವಲ 1 ರನ್‌ನಿಂದ ಆಘಾತ ಅನುಭವಿಸಿತು. ಮನೆಯಂಗಣದಲ್ಲಿ ಮೈಸೂರು ಮತ್ತೊಂದು ಜಯ ಗಳಿಸಿ ಸಂಭ್ರಮಿಸಿತು.

Related Articles