ಇತಿಹಾಸ ಬರೆದ ಫೋಗತ್

0
255

ಏಜೆನ್ಸೀಸ್ ಜಕಾರ್ತ

ಜಪಾನಿನ ಯುಕಿ ಐರೇ ವಿರುದ್ಧ ನಡೆದ 50 ಕೆಜಿ ಫ್ರೀ ಸ್ಟೈಲ್ ಕುಸ್ತಿ ಫೈನಲ್ ಹೋರಾಟದಲ್ಲಿ ಚಿನ್ನ ಗೆದ್ದ ಭಾರತದ ವಿನೇಶ್ ಫೋಗತ್ ಏಷ್ಯನ್ ಗೇಮ್ಸ್ ನಲ್ಲಿ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಫೈನಲ್ ಹೋರಾಟದಲ್ಲಿ 6-2 ಅಂರದಲ್ಲಿ ಗೆದ್ದ ವಿನೇಶ್ ಏಷ್ಯನ್ ಗೇಮ್ಸ್ ಕುಸ್ತಿಯಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಸೇಡಿನ ಪಟ್ಟು

ರಿಯೋ ಒಲಿಂಪಿಕ್ಸ್ ನಲ್ಲಿ ಗಾಯಗೊಂಡು ವಿನೇಶ್ ಕಣ್ಣೀರಿಡುತ್ತ ಹೊರ ನಡೆದದ್ದು ಎಲ್ಲರಿಗೂ ನೆನಪಿದೆ. ಸೆಮಿಫೈನಲ್ ಹೋರಾಟದಲ್ಲಿ ವಿನೇಶ್ ಚೀನಾದ ಅದೇ ಯಾನನ್ ಸನ್ ಗೆ ಸೋಲುಣಿಸಿ ಸೇಡು ತೀರಿಸಿಕೊಂಡರು.
ಭಾರತಕ್ಕೆ ಇದು ಜಕಾರ್ತದಲ್ಲಿ ಎರಡನೇ ಚಿನ್ನ.