Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕರ್ನಾಟಕದ ಶೂಟರ್‌ ತಿಲೋತ್ತಮಾ ವಿಶ್ವಕಪ್‌, ಏಷ್ಯನ್‌ ಗೇಮ್ಸ್‌ಗೆ ಆಯ್ಕೆ

ಬೆಂಗಳೂರು: ಕರ್ನಾಟಕದ ಪ್ರತಿಭಾವಂತ ಶೂಟರ್ ತಿಲೋತ್ತಮಾ ಸೇನ್ ಅವರು 2026ರಲ್ಲಿ ಚೀನಾದ ಹಾಂಗ್‌ಝೌನಲ್ಲಿ ನಡೆಯಲಿರುವ ISSF ವಿಶ್ವಕಪ್‌ನಲ್ಲಿ ಹಾಗೂ ಜಪಾನಿಯಲ್ಲಿ ನಡೆಯಲಿರುವ ಏಷ್ಯನ್‌ ಗೇಮ್ಸ್‌ನಲ್ಲಿ ಭಾರತವನ್ನು ಭಾರತವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ. Tilottama Sen shooter from Karnataka, has been selected to represent India at the ISSF World Cup 2026 in Hangzhou, China and Asian Games in Japan.

ಅವರು ಮಹಿಳೆಯರ 10 ಮೀ. ಏರ್ ರೈಫಲ್ ಹಾಗೂ ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್ಸ್ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ.

ಇದರ ಜೊತೆಯಲ್ಲಿ, ತಿಲೋತ್ತಮಾ ಸೇನ್ ಅವರು ಮತ್ತೊಂದು ಅಪೂರ್ವ ಸಾಧನೆಗೂ ಪಾತ್ರರಾಗಿದ್ದಾರೆ. 2026ರಲ್ಲಿ ಜಪಾನ್‌ನ ಐಚಿ–ನಗೋಯಾದಲ್ಲಿ ನಡೆಯಲಿರುವ 20ನೇ ಏಷ್ಯನ್ ಕ್ರೀಡಾಕೂಟಕ್ಕೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವ ಕರ್ನಾಟಕದ ಏಕೈಕ ಶೂಟರ್ ಎಂಬ ಹೆಗ್ಗಳಿಕೆ ಅವರದಾಗಿದೆ.

ಏಷ್ಯನ್ ಕ್ರೀಡಾಕೂಟದಲ್ಲಿ ಅವರು ಮಹಿಳೆಯರ 50 ಮೀ. ರೈಫಲ್ 3 ಪೊಸಿಷನ್ಸ್ ವಿಭಾಗದಲ್ಲಿ ಸ್ಪರ್ಧಿಸಲಿದ್ದಾರೆ.

ಈ ಎರಡೂ ಪ್ರತಿಷ್ಠಿತ ಅಂತರರಾಷ್ಟ್ರೀಯ ಕ್ರೀಡಾಕೂಟಗಳಿಗೆ ಅವರ ಆಯ್ಕೆಯು ಅವರ ಅಚಲ ಸಮರ್ಪಣೆ, ನಿರಂತರ ಪರಿಶ್ರಮ ಮತ್ತು ಅತ್ಯುತ್ತಮ ಪ್ರದರ್ಶನದ ಫಲವಾಗಿದೆ. ತಿಲೋತ್ತಮಾ ಸೇನ್ ಅವರ ಈ ಸಾಧನೆ ಕರ್ನಾಟಕಕ್ಕೆ ಹೆಮ್ಮೆಯ ಕ್ಷಣವಾಗಿದ್ದು, ದೇಶದ ಯುವ ಶೂಟರ್‌ಗಳಿಗೆ ಪ್ರೇaರಣೆಯಾಗಿದೆ. ಕರ್ನಾಟಕ ಸರಕಾರದ ಟಾರ್ಗೆಟ್‌ ಒಲಿಂಪಿಕ್ಸ್‌ ಯೋಜನೆಗೆ ಆಯ್ಕೆಯಾಗಿರುವ ತಿಲೋತ್ಮಮಾ ಸೇನ್‌ ಅವತ ಸಾಧನೆಗೆ ಕರ್ನಾಟಕ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯು ಅಭಿನಂದನೆ ಸಲ್ಲಿಸಿದೆ.


administrator