Friday, September 22, 2023

ತರಬೇತುದಾರ ನೇಮಕ

ದೆಹಲಿ:

ಭಾರತೀಯ ಕ್ರೀಡಾ ಪ್ರಾಧಿಕಾರ 11 ಮಂದಿ ಒಲಿಂಪಿಕ್ ಸಾಧಕರು ಹಾಗೂ ಮೂರು ಮಂದಿ ಪ್ಯಾರಾ ಸಾಧಕರನ್ನು ತರಬೇತುದಾರ ಹಾಗೂ ಸಹಾಯಕ ತರಬೇತುದಾರರಾಗಿ ನೇಮಕ ಮಾಡಲಾಗಿದೆ.

ದೇಶವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಬೆಳಗಿದ ಕ್ರೀಡಾಪಟುಗಳು, ತಮ್ಮ ವೃತ್ತಿ ಜೀವನದ ಬಳಿಕವೂ ಕ್ರೀಡೆಯಲ್ಲಿ ಮುಂದುವರಿದು ತರಬೇತಿ ನೀಡುವ ಮೂಲಕ ಇನ್ನಷ್ಟು ಸಾಧನೆ ಮಾಡಲಿ ಎಂಬ ಉದ್ದೇಶದಿಂದ ನೇಮಕ ಮಾಡಲಾಗಿದೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ ಮುಖ್ಯ ನಿರ್ದೇಶಕ ನೀಲಂ ಕಪೂರ್ ಮಾಹಿತಿ ನೀಡಿದ್ದಾರೆ. 2016ರ ಪ್ಯಾರಾ ಒಲಿಂಪಿಕ್ಸ್  ಹೈ ಜಂಪ್‌ನಲ್ಲಿ ಚಿನ್ನದ ಪದಕ ವಿಜೇತ ಮಾರಿಯಪ್ಪನ್ ಅವರನ್ನು ಗುಂಪು ‘ಎ’ ತರಬೇತುದಾರರನ್ನಾಾಗಿ ನೇಮಕ ಮಾಡಲಾಗಿದೆ.
ಜತೆಗೆ, ಅಶ್ವಿನಿ ಅಕ್ಕುಂಜಿ, ಜಿನ್ಸಿ ಫಿಲಿಪ್, ಸುರೇಂದರ್ ಸಿಂಗ್, ಇಂದ್ರಪಾಲ್ ಸಿಂಗ್, ಮಜಿ ಸವಾಯನ್, ಜೈಷಾ, ಸವಿತಾ ಪೂನಿಯಾ,  ದೆಬಾ ಶ್ರೀ ಮಜೂಂದಾರ್, ಮುಹಮ್ಮದ್ ಅನಾಸ್, ಗೋಪಿ. ಟಿ, ರಾಮ್ ಸಿಂಗ್ ಯಾಧವ್, ಶರದ್ ಕುಮಾರ್, ಅಂಕುರ್ ಧರ್ಮ ಈ ಎಲ್ಲ ನೂತನ ತರಬೇತುದಾರರು ಮುಂದಿನ ವರ್ಷ ಜನವರಿ 5 ರಂದು ತಮ್ಮ ಕಾರ್ಯಕ್ಕೆೆ ಹಾಜರಾಗಬೇಕೆಂದು ತಿಳಿಸಲಾಗಿದೆ.

Related Articles