Sunday, May 26, 2024

ಮೆಸ್ಸಿಗಿಂತ ಮಾರಡೋನಾ ಶ್ರೇಷ್ಠ: ಪಿಲೆ

ರಿಯೋ ಡಿ ಜನೈರೋ:

ಸ್ಟಾರ್ ಆಟಗಾರ ಲಿಯೊನೆಲ್ ಮೆಸ್ಸಿಗಿಂತ ಅರ್ಜೆಂಟೀನಾ ಪುಟ್ಬಾಲ್ ದಂತಕತೆ ಮಾರಡೋನಾ ಅತ್ಯುತ್ತಮರು ಎಂದು ಬ್ರೆೆಜಿಲ್ ತಂಡದ ಮಾಜಿ ನಾಯಕ ಪಿಲೆ ಅಭಿಪ್ರಾಯ ವ್ಯಕ್ತಪಡಿಸಿದರು.

ಮೆಸ್ಸಿ ಐದು ಬಾರಿ ಬ್ಯಾಲೊನ್ ಡಿ ಓರ್ ಹಾಗೂ ಹಲವು ಬಾರಿ ವಿಶ್ವ  ಶ್ರೆೆಷ್ಠ  ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾಾರೆ. ಆದರೆ, ಮಾರೋಡಾನ ಅವರ ಹೋಲಿಕೆಗೆ ಅವರು ಪಾತ್ರರಾಗುವುದಿಲ್ಲ ಎಂದು ಸುದ್ದಿಪತ್ರಿಕೆಯೊಂದರ ಸಂದರ್ಶನದಲ್ಲಿ ತಿಳಿಸಿದರು. ಮಾರಡೋನಾ ಜತೆಗೆ, ಬೆಕೆನ್‌ಬೌರ್ ಹಾಗೂ ಕ್ರೈಫ್ ಕೂಡ ವಿಶ್ವ ಶ್ರೇಷ್ಠ ಆಟಗಾರರು ಎಂದು ಬಣ್ಣಿಸಿದ ಅವರು, ಮಾರಡೋನಾ ಅವರನ್ನು ಹೆಚ್ಚಾಗಿ ಮುಖಾಮುಖಿ ಬೇಟಿಯಾಗಿಲ್ಲ. ಆದರೆ, ನಮ್ಮಿಬ್ಬರ ಬಾಂಧವ್ಯ ಉತ್ತಮವಾಗಿದೆ ಎಂದರು.

Related Articles