Wednesday, November 6, 2024

ಕೋಚ್‌ಗೆ ಅಗತ್ಯ, ಕ್ರೀಡಾಪಟುವಿಗೂ SPORTS PSYCHOLOGY

ಸೋಮಶೇಖರ್‌ ಪಡುಕರೆ, ಬೆಂಗಳೂರು

ಉತ್ತಮ ಟೆನಿಸ್‌ ಆಟಗಾರ್ತಿ ಜಪಾನಿನ ನವೋಮಿ ಒಸಾಕ ಫ್ರೆಂಚ್‌ ಓಪನ್‌ ಟೆನಿಸ್‌ ಚಾಂಪಿಯನ್ಷಿಪ್‌ ಹಾಗೂ ವಿಂಬಲ್ಡನ್‌ ಟೆನಿಸ್‌ ಚಾಂಪಿಯನ್ಷಿಪ್‌ ನಿಂದ ಹಿಂದೆ ಸರಿದರು. ವಿಶ್ವದ ಶ್ರೇಷ್ಠ ಜಿಮ್ನಾಸ್ಟ್‌ ಅಮೇರಿಕದ ಸೈಮೊನ್‌ ಬೈಲ್ಸ್‌ ಟೊಕಿಯೋ ಒಲಿಂಪಿಕ್ಸ್‌ ನಲ್ಲಿ ಫೈನಲ್‌ ತಲುಪಿದರೂ ಸ್ಪರ್ಧೆಯಿಂದ ಹಿಂದೆ ಸರಿದರು, ಇದಕ್ಕೆಲ್ಲ ಕಾರಣವೇನಿರಬಹುದು ಎಂದು ಯೋಚಿಸಿದಾಗ ಉತ್ತರ ಮನಸ್ಸು.

ಮಾನಸಿಕ ಒತ್ತಡಗಳು ನಮ್ಮನ್ನು ಇಂಥ ತೀರ್ಮಾನಗಳನ್ನು ಕೈಗೊಳ್ಳುವಂತೆ ಮಾಡುತ್ತವೆ. ಇತ್ತೀಚಿನ ವರ್ಷಗಳಲ್ಲಿ ಕ್ರೀಡೆಯಲ್ಲಿ ಈ ರೀತಿಯ ಸನ್ನಿವೇಶಗಳು ಹೆಚ್ಚಾಗುತ್ತಿವೆ. ನಿರಂತರವಾಗಿ ಗೆಲ್ಲುತ್ತಿದ್ದ ಆಟಗಾರ ಇದ್ದಕ್ಕಿದ್ದಂತೆ ಸೋಲಿನ ಹಾದಿ ಹಿಡಿಯುತ್ತಾನೆ. ಅತ್ಯಂತ ಆತ್ಮವಿಶ್ವಾಸದಲ್ಲಿದ್ದರೂ ಸಚಿನ್‌ ತೆಂಡೂಲ್ಕರ್‌ 99 ರನ್‌ ಗೆ ಔಟಾಗುತ್ತಾರೆ. ಎರಡು ಎಸೆತಗಳಲ್ಲಿ 12 ರನ್‌ ಗಳಿಸಿದ ಆಟಗಾರ ಇದ್ದಕ್ಕಿದತೆ ಎರಡು ಎಸೆತಗಳಲ್ಲಿ 1 ರನ್‌ ಗಳಿಸಲು ವಿಫಲವಾಗುತ್ತಾನೆ. ಇದಕ್ಕೆಲ್ಲ ಕಾರಣ ಒತ್ತಡಕ್ಕೆ ಸಿಲುಕಿದ ಮನಸ್ಸು.

 ಉತ್ತಮ ಪ್ರದರ್ಶನ ತೋರುತ್ತಿದ್ದ ಕ್ರೀಡಾಪಟುವೊಬ್ಬರು ಇದ್ದಕ್ಕಿದ್ದಂತೆ ಕ್ರೀಡೆಯಿಂದಲೇ ಹಿಂದೆ ಸರಿದ. ಕೋಚ್‌ ಕೂಡ ಆ ಬಗ್ಗೆ ಯೋಚಿಸದೆ ಆತನ ಸ್ಥಾನದಲ್ಲಿ ಮತ್ತೊಂದು ಕ್ರೀಡಾಪಟುವಿಗೆ ಅವಕಾಶ ನೀಡಿ ತಂಡವನ್ನು ಕಟ್ಟಿದರು. ಆ ತರಬೇತುದಾರರಿಗೆ ಕ್ರೀಡಾ ಮನಃಶಾಸ್ತ್ರದ ಬಗ್ಗೆ ಅರಿವು ಇರುತ್ತಿದ್ದರೆ ಆ ಕ್ರೀಡಾಪಟುವಿನ ಸಮಸ್ಯೆಗೆ ಸ್ಪಂದಿಸಿರುತ್ತಿದ್ದರು.

ಈಗ ಜತ್ತಿನಾದ್ಯಂತ ಕ್ರೀಡಾ ಮನಃಶಾಸ್ತ್ರ (Sports Psychology)ವನ್ನು ಪ್ರತಿಯಲೊಬ್ಬ ತರಬೇತುದಾರರು ಮತ್ತು ಪ್ರತಿಯೊಂದು ಕ್ರೀಡಾ ಸಂಸ್ಥೆಯೂ ಹೊಂದಿರುತ್ತದೆ. ಭಾರತದಲ್ಲಿ ಸ್ಪೋರ್ಟ್ಸ್‌ ನೆಕ್ಸ್ಟ್‌ (Sportznext) ಕ್ರೀಡಾ ಶೈಕ್ಷಣಿಕ ಸಂಸ್ಥೆಯು ಆರು ತಿಂಗಳ ಕಾಲ  ಕ್ರೀಡಾ ಮನಃಶಾಸ್ತ್ರದಲ್ಲಿ  ಸ್ನಾತಕೋತ್ತರ ಡಿಪ್ಲೊಮಾ ತರಬೇತಿಯನ್ನು ನೀಡಲಿದೆ.

ಯುಸಿಎಂಎ

ಜಗತ್ತಿನ ಅತ್ಯಂತ ಶ್ರೇ಼ಷ್ಠ ಕ್ರೀಡಾ ವಿಶ್ವವಿದ್ಯಾನಿಲಯವಾಗಿದ್ದು ಸಹಸ್ರಾರು ಕ್ರೀಡಾಪಟುಗಳ ಬದುಕನ್ನೇ ಬದಲಾಯಿಸಿ, ಯಶಸ್ಸಿನ ಹಾದಿ ತೋರಿದ ಸ್ಪೇನ್‌ ಯುಸಿಎಎಂ ವಿಶ್ವವಿದ್ಯಾಲಯ (UCAM Universidad Catolica De Murica) ಈಗ ಭಾರತದಲ್ಲೂ ಸ್ಪೋರ್ಟ್ಸ್‌ ನೆಕ್ಸ್ಟ್‌ ಶೈಕ್ಷಣಿಕ ಸಂಸ್ಥೆಯ (www.sportznextedu.net) ಮೂಲಕ ಪದಾರ್ಪಣೆ ಮಾಡಿದೆ. ಬೆಂಗಳೂರಿನ ಕ್ರೆಡೋ ಸೈಕಲಾಜಿಕಲ್‌ ಸರ್ವಿಸ್‌ ಕೂಡ ಈ ಕ್ರೀಡಾ ಶೈಕ್ಷಣಿಕ ಅಭಿಯಾನದ ಭಾಗವಾಗಿದೆ.

ಜಗತ್ತಿನಾದ್ಯಂತ ಬೇಡಿಕೆ:

ಕ್ರೀಡಾ ಮನಃಶಾಸ್ತ್ರಜ್ಞರಿಗೆ ಈಗ ಜಗತ್ತಿನಾದ್ಯಂತ ಬೇಡಿಕೆ ಇದೆ. ತರಬೇತುದಾರರು ಈ ಕೋರ್ಸ್‌ ಮಾಡಿಕೊಂಡಿದ್ದಲ್ಲಿ ಅವರಿಗೆ ಆಯ್ಕೆಯಲ್ಲಿ ಮೊದಲ ಪ್ರಾಶಸ್ತ್ಯ. ಬೇರೆ ಬೇರೆ ತಂಡಗಳಲ್ಲೂ ಕಾರ್ಯನಿರ್ವಹಿಸಬಹುದು, ಅಥವಾ ತಮ್ಮದೇ ಆದ ಸಲಹಾ ಕೇಂದ್ರವನ್ನು ಆರಂಭಿಸಬಹುದು.

ಯಾಕೆ ಸ್ಪೋರ್ಟ್ಸ್‌ ನೆಕ್ಸ್ಟ್ (SportzNext)?‌

ಯುಸಿಎಎಂ (UCAM) ಜತೆ ಒಪ್ಪಂದ ಮಾಡಿಕೊಂಡು, ಭಾರತದ ತಜ್ಞರಿಂದಲೂ ತರಬೇತಿ ನೀಡುವ ಸ್ಪೋರ್ಟ್ಸ್‌ ನೆಕ್ಸ್ಟ್‌ ಕ್ರೀಡಾ ಶೈಕ್ಷಣಿಕ ಸಂಸ್ಥೆಯಲ್ಲಿ ಆರು ತಿಂಗಳ ಡಿಪ್ಲೋಮಾ ಕೋರ್ಸ್‌ ಮಾಡುವುದರಿಂದ ಹಲವಾರು ಪ್ರಯೋಜನಗಳಿಗೆ. ಈ ಕೋರ್ಸ್ಸ್‌ ಜಗತ್ತಿನಾದ್ಯಂತ ಮಾನ್ಯತೆ ಪಡೆದಿದೆ. ಕ್ರೀಡಾ ವಲಯದಲ್ಲಿ ನಂಬಿಕೆಗೆ ಅರ್ಹವಾದ ಸಂಸ್ಥೆಯಾಗಿದೆ. ಉತ್ತಮ ಸಂಸ್ಥೆಗಳಲ್ಲಿ ತರಬೇತಿ. ಸುಲಭವಾಗುವ ರೀತಿಯಲ್ಲಿ ಶುಲ್ಕ ನೀಡಲು ಅವಕಾಶ. ಉದ್ಯೋಗಕ್ಕೆ ನೆರವು.

ಶ್ರೇಷ್ಠ ದರ್ಜೆಯ ತರಬೇತಿ 

ಭಾರತ ಹಾಕಿ ತಂಡದಲ್ಲಿ ಕ್ರೀಡಾ ಮನಃಶಾಸ್ತ್ರಜ್ಞೆಯಾಗಿ ಕಾರ್ಯನಿರ್ವಹಿಸಿರುವ, ಕ್ರೆಡೋ ಸೈಕಲಾಜಿಕಲ್‌ ಸರ್ವಿಸಸ್‌ (Credo Psychological Services) ನ ಸ್ಥಾಪಕಿ ಕರ್ನಾಕಟದ ಪ್ರಿಯಾಂಕ ಪ್ರಭಾಕರ್‌ (Priyanka Prabhakar) ತರಬೇತುದಾರರಲ್ಲಿ ಒಬ್ಬರು. ಮನಃಶಾಸ್ತ್ರಜ್ಞೆ ಮತ್ತು ಕ್ರೆಡೋ ಸೈಕಲಾಜಿಕಲ್‌ ಸರ್ವಿಸಸ್‌ ನ ಸ್ಥಾಪಕರಲ್ಲಿ ಒಬ್ಬರಾದ ಸೌಮ್ಯ ಅವಸ್ಥಿ (Soumya Awasthi)

ಸ್ಪೋರ್ಟ್ಸ್‌ ಫಿಜಿಸಿಯನ್‌, ಅಖಿಲಭಾರತ ಬಾಕ್ಸಿಂಗ್‌ ಅಸೋಸಿಯೇಷನ್‌ ನ ರಿಂಗ್‌ ಸೈಡ್‌ ಡಾಕ್ಟರ್‌ ಮತ್ತು ಭಾರತ ಬಾಕ್ಸಿಂಗ್‌ ತಂಡದಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸಿದ್ದ ಡಾ. ಅಮೊಲ್‌ ಎ. ಪಾಟೀಲ್‌. (Dr. Amol A. Patil) ಜಗತ್ತಿನ ನಂಬಿಕೆಯ ಸಂಸ್ಥೆಯಾಗಿರು ರೋಚೆ ಮಾರ್ಟಿನ್‌ (Roche Martin) ನ ಕ್ರೀಡೆ ಮತ್ತು ಮನಃಶಾಸ್ತ್ರ ವಿಭಾಗದ ಮುಖ್ಯಸ್ಥ ಜಾಯ್‌ ಡೆವಿಸ್‌ (Joe Davis) ಅವರು ತರಬೇತಿ ನೀಡಲಿದ್ದಾರೆ.

CONTACT: +91 8553807037

contact@credo-psych.com

www.credo-psych.com

Related Articles