Contact Information

1st floor, Murali Krishna Mansion, Near Krashi Kendra , Brahmavara - 576213 ,Udupi,Karnataka,India

We Are Available 24/ 7. Call Now.

ಕಷ್ಟಗಳ ಬೆಂಕಿಯಲ್ಲಿ ಅರಳಿದ ಚಿನ್ನದ ಹೂ ಶರ್ಮಿಳಾ ಧನ್ಕಾರ್‌

ಗ್ಲಾಸ್ಗೋ: ಚಿಕ್ಕಂದಿನಿಂದಲೇ ಪೊಲಿಯೋ ಕಾರಣ ನಡೆಯಲು ಕಾಲಿಲಿಲ್ಲ, ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ನೆಮ್ಮದಿ ಸಿಗಲಿಲ್ಲ, ವರದಕ್ಷಿಣೆಯ ಕಿರುಕುಳ, ದೈಹಿಕ ಹಿಂಸೆ, ಹುಟ್ಟಿದ ಮಕ್ಕಳಿಬ್ಬರೂ ಹೆಣ್ಣೆಂದು ಮತ್ತೆ ನಿಂದನೆ ಇವುಗಳಿಂದ ಬೇಸತ್ತು ಮಕ್ಕಳೊಂದಿಗೆ ಮನೆ ತೊರೆದ ಶರ್ಮಿಳಾ ಧನ್ಕಾರ್‌ ಅವರಿಗೆ ಬದುಕು ನೀಡಿದ್ದು ಕ್ರೀಡೆ. ಇವತ್ತು ಗ್ಲಾಸ್ಗೋ ಕಾಮನ್‌ವೆಲ್ತ್‌ ಕ್ರೀಡಾಕೂಟದ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಮೊದಲ ಮಹಿಳೆ ಎಂಬ ಕೀರ್ತಿಗೆ  ಪಾತ್ರರಾದ ಶರ್ಮಿಳಾ ಭಾರತದಲ್ಲಿ ಕಷ್ಟಗಳನ್ನು ಅನುಭವಿಸುತ್ತಿರುವ ಅದೆಷ್ಟೋ ಮಹಿಳೆಯರಿಗೆ ಸ್ಫೂರ್ತಿಯ ಸೆಲೆಯಾಗಿದ್ದಾರೆ. She was ridiculed for her disability, tortured over dowry, and cast out for bearing daughters. But Sharmila defied every hardship, blossomed through the flames of adversity, and emerged as a gold medalist.

ಎರಡು ವರ್ಷದ ವಯಸ್ಸಿನಲ್ಲೇ ಪೋಲಿಯೊಗೆ ತುತ್ತಾಗಿದ್ದ ಹರಿಯಾಣದ ಶರ್ಮಿಳಾ ಧಂಕರ್‌ ಅವರ ಬಾಲ್ಯವೇ ಸವಾಲುಗಳಿಂದ ಕೂಡಿತ್ತು. 19ನೇ ವಯಸ್ಸಿನಲ್ಲಿ ವಿವಾಹವಾದ ಅವರು, ಕೌಟುಂಬಿಕ ಹಿಂಸೆ ಮತ್ತು ದೌರ್ಜನ್ಯದಿಂದ ಕೂಡಿದ ದಾಂಪತ್ಯ ಜೀವನವನ್ನು ಅನುಭವಿಸಿದರು. ಕೊನೆಗೆ 26ನೇ ವಯಸ್ಸಿನಲ್ಲಿ ಇಬ್ಬರು ಪುಟ್ಟ ಹೆಣ್ಣುಮಕ್ಕಳೊಂದಿಗೆ ಆ ಸಂಬಂಧದಿಂದ ಹೊರಬರಬೇಕಾದ ಪರಿಸ್ಥಿತಿ ಎದುರಾಯಿತು.

ಒಂದು ಕ್ಷಣ ಆ ಪರಿಸ್ಥಿತಿಯನ್ನು ಊಹಿಸಿ ನೋಡಿ. ಹಿಂಸಾತ್ಮಕ ಪತಿ, ಕೌಟುಂಬಿಕ ದೌರ್ಜನ್ಯ ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಸಾಕುವ ಹೊಣೆಗಾರಿಕೆ. ಇಂತಹ ಸಂದರ್ಭದಲ್ಲೇ ಬದುಕುಳಿಯುವುದೇ ದೊಡ್ಡ ಸವಾಲು. ಅದರ ಜೊತೆಗೆ ಕ್ರೀಡೆಯಲ್ಲಿ ಸಾಧನೆ ಮಾಡುವ ಕನಸು ಕಾಣುವುದು ಇನ್ನೂ ಕಷ್ಟದ ಕೆಲಸ. ಆದರೆ ಶರ್ಮಿಳಾ ಎಂದಿಗೂ ಕೈಚೆಲ್ಲಲಿಲ್ಲ.

ಶರ್ಮಿಳಾ ಅವರ ಕ್ರೀಡಾ ಬದುಕಿಗಾಗಿ ಆಸ್ತಿಯನ್ನೇ ಮಾರಿದ ಅಜಿತ್‌ ಸಿಂಗ್‌

26ನೇ ವಯಸ್ಸಿನಲ್ಲಿ ಮನೆ ತೊರೆದ ಶರ್ಮಿಳಾ, ಕೆಲವು ವರ್ಷಗಳ ಬಳಿಕ ಅಜಿತ್ ಸಿಂಗ್ ಅವರನ್ನು ವಿವಾಹವಾದರು. ಇಬ್ಬರೂ ಸೇರಿ ಹೊಸ ಬದುಕನ್ನು ಕಟ್ಟಲಾರಂಭಿಸಿದರು. ಬದುಕಿನಲ್ಲಿ ಯಶಸ್ಸು ಕಾಣಲು ಸದ್ಯ ಶರ್ಮಿಳಾ ಅವರಲ್ಲಿರುವ ಕ್ರೀಡಾ ಪ್ರತಿಭೆಯೇ ದಾರಿ ಎಂದು ಅರಿತುಕೊಂಡರು. ಶರ್ಮಿಳಾ ಅವರ ಕ್ರೀಡಾ ಕನಸನ್ನು ನನಸಾಗಿಸಲು ಅಜಿತ್ ತಮ್ಮ ಆಸ್ತಿಯನ್ನೇ ಮಾರಾಟ ಮಾಡಿ ಬೆಂಬಲ ನೀಡಿದರು. ಹಾಗಂತ ಅಜಿತ್‌ ಶ್ರೀಂತನಲ್ಲ. ಆತನೂ ಕೂಲಿ ಕೆಲಸ ಮಾಡುವವ. ಆದರೆ ಹೃದಯದಲ್ಲಿ ಶ್ರೀಮಂತಿಕೆ ಮನೆ ಮಾಡಿತ್ತು. ಇಬ್ಬರು ಮಕ್ಕಳ ತಾಯಿಯನ್ನು ಮದುವೆಯಾದ ಎಂದು ಜನರು ನಿಂದನೆಯ ಮಾತುಗಳನ್ನಾಡಿದರೂ ಲೆಕ್ಕಿಸದೆ ಬದುಕಿದರು. ಅದೇ ಅವರ ಬದುಕಿನ ಮಹತ್ವದ ತಿರುವಾಯಿತು. ಕೆಲವೇ ವರ್ಷಗಳಲ್ಲಿ ಶರ್ಮಿಳಾ ಭಾರತೀಯ ಪ್ಯಾರಾ ಅಥ್ಲೆಟಿಕ್ಸ್ ತಂಡದ ಪ್ರಮುಖ ಸದಸ್ಯೆಯಾದರು. ಅಥ್ಲೆಟಿಕ್ಸ್ ಮುಖ್ಯ ಕೋಚ್ ಕರ್ನಾಟಕದ  ಸತ್ಯನಾರಾಯಣ ಅವರಲ್ಲಿ ಪಳಗಿದ ಶರ್ಮಿಳಾ ಅತ್ಯಂತ ಆತ್ಮವಿಶ್ವಾಸದೊಂದಿಗೆ ಗ್ಲಾಸ್ಗೋಗೆ ತೆರಳಿದ್ದರು.

ಶರ್ಮಿಳಾ ಅವರ ಯಶಸ್ಸಿನ ಬಗ್ಗೆ ಮಾತನಾಡಿದ ಸತ್ಯನಾರಾಯಣ,”ಇದು ಸಿನಿಮಾ ಕತೆಯಲ್ಲಿ ನನ್ನ ಕಣ್ಣೆದುರೇ ಕಂಡ ಸತ್ಯ ಕತೆ, ಶರ್ಮಿಳಾ ಅವರ ಪರಿಶ್ರಮಕ್ಕೆ ನಾನು ಯಾವಾಗಲೂ ಬೆಂಬಲ ನೀಡಿದ್ದೇನೆ. ಅವರ ಅವರ ಯಶಸ್ಸಿನ ಹಾದಿ ಅಷ್ಟು ಸುಲಭವಾಗಿರಲಿಲ್ಲ. ಅವರು ಚಿನ್ನ ಗೆದ್ದಿರುವುದು ಶಾಟ್‌ಪಟ್‌ನಲ್ಲಿ ಆದರೆ ಅವರು ಬದುಕಿನ ಹರ್ಡಲ್ಸ್‌ನಲ್ಲಿ ಚಿನ್ನ ಗೆದ್ದಿದ್ದಾರೆ. ಇದು ಬರೇ ಚಿನ್ನದ ಪದಕವಲ್ಲ, ಇದು ಬದುಕನ್ನೇ ಗೆದ್ದ ಪದಕ.. ಇದು ಸಿನಿಮಾ ಅಲ್ಲ, ನಿಜ ಜೀವನ. ಸಾಮಾನ್ಯರು ಇಂಥ ಕಷ್ಟದ ಕಾಲದಲ್ಲಿ ಬದುಕಿನಿಂದ ವಿಮುಖರಾಗುತ್ತಾರೆ, ಆದರೆ ಶರ್ಮಿಳಾ ಸವಾಲುಗಳೊಂದಿಗೇ ಸಾಗಿ ಸಾಧನೆ ಮಾಡಿದ್ದಾರೆ,” ಎಂದು ಅತ್ಯಂತ ಭಾವುಕರಾಗಿ ನುಡಿದರು.


administrator