ಜಯಂತಿಯನ್ ಕಪ್: ಬಾಸ್ಕೆಟ್‌ಬಾಲ್‌ನಲ್ಲಿ ಕ್ರಿಸ್ತ ಜಯಂತಿಗೆ ಚಿನ್ನ
ಬೆಂಗಳೂರು: ಮೂರು ದಿನಗಳ ರಾಷ್ಟ್ರೀಯ ಮಟ್ಟದ ಅಂತರಕಾಲೇಜು ಕ್ರೀಡಾಕೂಟ ‘ಜಯಂತಿಯನ್ ಕಪ್ 2026’ ಅಂತಿಮ ದಿನದಂದು ಆತಿಥೇಯ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯ ಪುರುಷರ ಹಾಗೂ ಮಹಿಳೆಯರ ಬಾಸ್ಕೆಟ್‌ಬಾಲ್ ವಿಭಾಗಗಳಲ್ಲಿ ಪ್ರಶಸ್ತಿ ಗೆದ್ದು ಗಮನಾರ್ಹ ಸಾಧನೆ ಮಾಡಿತು.
Kristu Jayanti University defeated Christ in both the men’s and women’s basketball finals to sweep the marquee events on the concluding day of the Jayantian Cup 2026.
ಸೆಪ್ಟೆಂಬರ್ 11ರಂದು ನಡೆದ ಪುರುಷರ ಹಾಗೂ ಮಹಿಳೆಯರ ಬಾಸ್ಕೆಟ್‌ಬಾಲ್ ಫೈನಲ್‌ಗಳಲ್ಲಿ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯ ತಂಡಗಳು ಕ್ರೈಸ್ಟ್ ವಿಶ್ವವಿದ್ಯಾಲಯ ತಂಡಗಳನ್ನು ಮಣಿಸಿ ಎರಡೂ ವಿಭಾಗಗಳ ಚಾಂಪಿಯನ್‌ಶಿಪ್‌ಗಳನ್ನು ತಮ್ಮದಾಗಿಸಿಕೊಂಡವು.
ನಾಕೌಟ್ ಪಂದ್ಯಗಳು ಹಾಗೂ ಪ್ರಶಸ್ತಿ ನಿರ್ಧರಿಸುವ ರೋಚಕ ಕಾದಾಟಗಳಿಂದ ಕೂಡಿದ್ದ ಅಂತಿಮ ದಿನದೊಂದಿಗೆ ಜಯಂತಿಯನ್ ಕಪ್ 2026ಗೆ ತೆರೆ ಬಿದ್ದಿತು.
ಆತಿಥೇಯ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವು ದಿನದ ಹಲವು ಪ್ರಮುಖ ಫೈನಲ್‌ಗಳಲ್ಲಿ ತನ್ನ ಪ್ರಾಬಲ್ಯ ಮೆರೆದಿತು. ಮಹಿಳೆಯರ ಫುಟ್‌ಬಾಲ್ ಹಾಗೂ ಕಬಡ್ಡಿ ಫೈನಲ್‌ಗಳಿಗೆ ಪ್ರವೇಶಿಸಿದ ತಂಡ, ಪುರುಷರ ಮತ್ತು ಮಹಿಳೆಯರ ಬಾಸ್ಕೆಟ್‌ಬಾಲ್‌ನಲ್ಲೂ ಫೈನಲ್ ತಲುಪಿತು.
ಮಹಿಳೆಯರ ಫುಟ್‌ಬಾಲ್ ಫೈನಲ್‌ನಲ್ಲಿ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವನ್ನು 2-1 ಗೋಲುಗಳಿಂದ ಮಣಿಸಿದ ರೇವಾ ವಿಶ್ವವಿದ್ಯಾಲಯ ಪ್ರಶಸ್ತಿ ಗೆದ್ದಿತು. ಮಹಿಳೆಯರ ಕಬಡ್ಡಿ ಫೈನಲ್‌ನಲ್ಲಿ ಅಲಾಗಪ್ಪ ವಿಶ್ವವಿದ್ಯಾಲಯ 31-14 ಅಂತರದಲ್ಲಿ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವನ್ನು ಸೋಲಿಸಿ ಚಾಂಪಿಯನ್ ಆಯಿತು.
ಪುರುಷರ ಕಬಡ್ಡಿ ಸೆಮಿಫೈನಲ್‌ನಲ್ಲಿ ರೇವಾ ವಿಶ್ವವಿದ್ಯಾಲಯ ಅಲಾಗಪ್ಪವನ್ನು ಮಣಿಸಿ ಫೈನಲ್ ಪ್ರವೇಶಿಸಿತು. ಅಂತಿಮ ಹಣಾಹಣಿಯಲ್ಲಿ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವನ್ನು 20-14 ಅಂಕಗಳಿಂದ ಸೋಲಿಸಿದ ರೇವಾ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು.
ಮೂರನೇ ದಿನದ ಫಲಿತಾಂಶಗಳು
ಬಾಸ್ಕೆಟ್‌ಬಾಲ್ – ಪುರುಷರು
ಸೆಮಿಫೈನಲ್‌ನಲ್ಲಿ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯ ಮಾರ್ ಬಸೇಲಿಯಸ್ ತಂಡವನ್ನು 74-63 ಅಂಕಗಳಿಂದ ಸೋಲಿಸಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಕ್ರೈಸ್ಟ್ ವಿಶ್ವವಿದ್ಯಾಲಯ ಜೈನ್ ಎಸ್‌ಎಸ್‌ಇಆರ್ ತಂಡವನ್ನು 54-43 ಅಂಕಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು.
ಫೈನಲ್‌ನಲ್ಲಿ ಆತಿಥೇಯ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವು ಕ್ರೈಸ್ಟ್ ಸಿಸಿ ವಿರುದ್ಧ 34-32 ಅಂಕಗಳ ರೋಚಕ ಗೆಲುವು ಸಾಧಿಸಿ ಪುರುಷರ ಬಾಸ್ಕೆಟ್‌ಬಾಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.
ಬಾಸ್ಕೆಟ್‌ಬಾಲ್ – ಮಹಿಳೆಯರು
ಸೆಮಿಫೈನಲ್‌ನಲ್ಲಿ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯ ಕ್ರೈಸ್ಟ್ ಕೆಸಿ ತಂಡವನ್ನು 55-37 ಅಂಕಗಳಿಂದ ಸೋಲಿಸಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ಕ್ರೈಸ್ಟ್ ಸಿಸಿ ಜೈನ್ ತಂಡವನ್ನು 44-21 ಅಂಕಗಳಿಂದ ಮಣಿಸಿತು.
ಫೈನಲ್‌ನಲ್ಲಿ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವು ಕ್ರೈಸ್ಟ್ ಸಿಸಿ ತಂಡವನ್ನು 48-32 ಅಂಕಗಳಿಂದ ಸೋಲಿಸಿ ಮಹಿಳೆಯರ ಬಾಸ್ಕೆಟ್‌ಬಾಲ್ ಪ್ರಶಸ್ತಿಯನ್ನು ಎತ್ತಿಹಿಡಿಯಿತು.
ಫುಟ್‌ಬಾಲ್ – ಪುರುಷರು
ಮೊದಲ ಸೆಮಿಫೈನಲ್‌ನಲ್ಲಿ ಜೈನ್ ತಂಡವು ಕ್ರೈಸ್ಟ್ ಬೆಂಗಳೂರು ತಂಡವನ್ನು 1-0 ಗೋಲಿನಿಂದ ಸೋಲಿಸಿತು.
ಎರಡನೇ ಸೆಮಿಫೈನಲ್‌ನಲ್ಲಿ ಜೈನ್ ಎಫ್‌ಇಟಿ ಹಾಗೂ ನ್ಯೂ ಹೊರೈಜನ್ ತಂಡಗಳು 2-2 ಗೋಲುಗಳಿಂದ ಸಮಬಲ ಸಾಧಿಸಿದವು. ಬಳಿಕ ಪೆನಾಲ್ಟಿ ಶೂಟೌಟ್‌ನಲ್ಲಿ ಜೈನ್ ಎಫ್‌ಇಟಿ 12-11 ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿತು.
ಫುಟ್‌ಬಾಲ್ – ಮಹಿಳೆಯರು
ಮೊದಲ ಸೆಮಿಫೈನಲ್‌ನಲ್ಲಿ ರೇವಾ ವಿಶ್ವವಿದ್ಯಾಲಯ ಅಲಾಗಪ್ಪವನ್ನು 3-0 ಗೋಲುಗಳಿಂದ ಸೋಲಿಸಿತು. ಎರಡನೇ ಸೆಮಿಫೈನಲ್‌ನಲ್ಲಿ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯ ಎಸ್‌ಜೆಯು ತಂಡವನ್ನು 3-2 ಗೋಲುಗಳಿಂದ ಮಣಿಸಿ ಫೈನಲ್ ಪ್ರವೇಶಿಸಿತು.
ಫೈನಲ್‌ನಲ್ಲಿ ರೇವಾ ವಿಶ್ವವಿದ್ಯಾಲಯವು ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವನ್ನು 2-1 ಗೋಲುಗಳಿಂದ ಸೋಲಿಸಿ ಮಹಿಳೆಯರ ಫುಟ್‌ಬಾಲ್ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಕಬಡ್ಡಿ – ಪುರುಷರು
ಕ್ವಾರ್ಟರ್‌ಫೈನಲ್‌ನಲ್ಲಿ ಎಸ್‌ಜೆಯು ಇಂಡಿಯನ್ ಅಕಾಡೆಮಿ ತಂಡವನ್ನು 31-23 ಅಂಕಗಳಿಂದ ಸೋಲಿಸಿತು. ರೇವಾ ವಿಶ್ವವಿದ್ಯಾಲಯವು ನ್ಯೂ ಹೊರೈಜನ್ ತಂಡವನ್ನು 33-25 ಅಂಕಗಳಿಂದ ಮಣಿಸಿದರೆ, ಅಲಾಗಪ್ಪ ವಿಶ್ವವಿದ್ಯಾಲಯವು ದಯಾನಂದ ಸಾಗರ್ ತಂಡವನ್ನು 35-8 ಅಂತರದಿಂದ ಸೋಲಿಸಿತು.
ಸೆಮಿಫೈನಲ್‌ನಲ್ಲಿ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವು ಎಸ್‌ಜೆಯು ತಂಡವನ್ನು 27-23 ಅಂಕಗಳಿಂದ ಸೋಲಿಸಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ರೇವಾ ವಿಶ್ವವಿದ್ಯಾಲಯ ಅಲಾಗಪ್ಪವನ್ನು 30-19 ಅಂಕಗಳಿಂದ ಮಣಿಸಿತು.
ಫೈನಲ್‌ನಲ್ಲಿ ರೇವಾ ವಿಶ್ವವಿದ್ಯಾಲಯವು ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವನ್ನು 20-14 ಅಂಕಗಳಿಂದ ಸೋಲಿಸಿ ಪುರುಷರ ಕಬಡ್ಡಿ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು. ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯ ರನ್ನರ್‌ಅಪ್ ಸ್ಥಾನಕ್ಕೆ ತೃಪ್ತಿಪಟ್ಟಿತು.
ಕಬಡ್ಡಿ – ಮಹಿಳೆಯರು
ಸೆಮಿಫೈನಲ್‌ನಲ್ಲಿ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವು ಆರ್‌ಎನ್‌ಎಸ್ ತಂಡವನ್ನು 22-11 ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತು.
ಅಂತಿಮ ಹಣಾಹಣಿಯಲ್ಲಿ ಅಲಾಗಪ್ಪ ವಿಶ್ವವಿದ್ಯಾಲಯ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವನ್ನು 31-14 ಅಂಕಗಳಿಂದ ಸೋಲಿಸಿ ಮಹಿಳೆಯರ ಕಬಡ್ಡಿ ಚಾಂಪಿಯನ್‌ಶಿಪ್ ಗೆದ್ದುಕೊಂಡಿತು.
ವಾಲಿಬಾಲ್ – ಪುರುಷರು
ಅಲಾಗಪ್ಪ ವಿಶ್ವವಿದ್ಯಾಲಯವು ಆರ್‌ವಿ ವಿಶ್ವವಿದ್ಯಾಲಯವನ್ನು 25-13, 25-7 ಅಂಕಗಳಿಂದ ಸೋಲಿಸಿತು.
ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವು ಆರ್ಮಿ ಇನ್‌ಸ್ಟಿಟ್ಯೂಟ್ ತಂಡವನ್ನು 25-21, 25-22 ಅಂಕಗಳಿಂದ ಮಣಿಸಿತು.
ಎಸ್‌ಎಫ್‌ಜಿಸಿ ತಂಡವು ಕ್ರೈಸ್ಟ್ ಯಶವಂತಪುರವನ್ನು 25-15, 25-9 ಅಂಕಗಳಿಂದ ಸೋಲಿಸಿತು. ಎನ್‌ಎಂಐಟಿ ತಂಡವು ಅಲಾಗಪ್ಪವನ್ನು 25-19, 25-19 ಅಂಕಗಳಿಂದ ಮಣಿಸಿತು.
ನಂತರ ನಡೆದ ಪಂದ್ಯದಲ್ಲಿ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವು ಎಸ್‌ಎಫ್‌ಜಿಸಿ ತಂಡವನ್ನು 25-15, 25-18 ಅಂಕಗಳಿಂದ ಸೋಲಿಸಿತು.
ಕಬಡ್ಡಿ – ಪುರುಷರು
ಕ್ವಾರ್ಟರ್‌ಫೈನಲ್‌ನಲ್ಲಿ ಎಸ್‌ಜೆಯು ಇಂಡಿಯನ್ ಅಕಾಡೆಮಿಯನ್ನು 31-23 ಅಂಕಗಳಿಂದ ಸೋಲಿಸಿತು. ರೇವಾ ವಿಶ್ವವಿದ್ಯಾಲಯವು ನ್ಯೂ ಹೊರೈಜನ್ ತಂಡವನ್ನು 33-25 ಅಂಕಗಳಿಂದ ಹಾಗೂ ಅಲಾಗಪ್ಪ ವಿಶ್ವವಿದ್ಯಾಲಯವು ದಯಾನಂದ ಸಾಗರ್ ತಂಡವನ್ನು 35-8 ಅಂಕಗಳಿಂದ ಮಣಿಸಿತು.
ಸೆಮಿಫೈನಲ್‌ನಲ್ಲಿ ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವು ಎಸ್‌ಜೆಯು ತಂಡವನ್ನು 27-23 ಅಂಕಗಳಿಂದ ಸೋಲಿಸಿತು. ಮತ್ತೊಂದು ಸೆಮಿಫೈನಲ್‌ನಲ್ಲಿ ರೇವಾ ವಿಶ್ವವಿದ್ಯಾಲಯವು ಅಲಾಗಪ್ಪವನ್ನು 30-19 ಅಂಕಗಳಿಂದ ಮಣಿಸಿತು.
ಫೈನಲ್‌ನಲ್ಲಿ ರೇವಾ ವಿಶ್ವವಿದ್ಯಾಲಯವು ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯವನ್ನು 20-14 ಅಂಕಗಳಿಂದ ಸೋಲಿಸಿ ಚಾಂಪಿಯನ್ ಆಯಿತು. ಕ್ರಿಸ್ತ ಜಯಂತಿ ವಿಶ್ವವಿದ್ಯಾಲಯ ರನ್ನರ್‌ಅಪ್ ಸ್ಥಾನ ಗಳಿಸಿತು.

