Saturday, October 5, 2024

AFGvAUS ಅಫಘಾನಿಸ್ತಾನ ತಂಡಕ್ಕೆ ಸ್ಫೂರ್ತಿ ತುಂಬಿದ ಸಚಿನ್‌

ಮುಂಬಯಿ: ಈ ಬಾರಿಯ ವಿಶ್ವಕಪ್‌ನಲ್ಲಿ ಅದ್ಭುತ ಪ್ರದರ್ಶನ ತೋರಿ ಸೆಮಿಫೈನಲ್‌ ತಲುಪುವ ಸಲುವಾಗಿ ಮಂಗಳವಾರ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ ಸೆಣಸಲಿರುವ ಅಫಘಾನಿಸ್ತಾನ ತಂಡವನ್ನು ಕ್ರಿಕೆಟ್‌ ದಿಗ್ಗಜ ಸಚಿನ್‌ ತೆಂಡೂಲ್ಕರ್‌ ಭೇಟಿ ಮಾಡಿದರು. Afghanistan gets Sachin Tendulkar boost

ವಾಂಖೆಡೆ ಅಂಗಣದಲ್ಲಿ ಅಭ್ಯಾಸ ಮಾಡುತ್ತಿರುವ ತಂಡದ ಆಫ್ಘನ್‌ ತಂಡದ ಆಟಗಾರರಿಗೆ ಸಚಿನ್‌ ಆಗಮನ ಹೊಸ ಉತ್ಸಾಹವನ್ನು ತುಂಬಿದೆ. ವಿಶ್ವಕಪ್‌ ಗೆದ್ದಿರುವ ಭಾರತ ತಂಡದ ಶ್ರೇಷ್ಠ ಆಟಗಾರ ಸಚಿನ್‌ ಆಫ್ಘನ್‌ ತಂಡದ ನಾಯಕ ಮೊಹಮ್ಮದ್‌ ನಬಿ ಅವರಿಗೆ ಸ್ಮರಣಿಕೆಯನ್ನು ನೀಡಿದರು.

ನಂತರ ನೆಟ್‌ನಲ್ಲಿ ಆಭ್ಯಾಸ ನಡೆಸುತ್ತಿರುವ ಆಟಗಾರರೊಂದಿಗೆ ಅನುಭವವನ್ನು ಹಂಚಿಕೊಂಡರು. ತಂಡದ ಪ್ರಧಾನ ಕೋಚ್‌ ಜೊನಾಥನ್‌ ಟ್ರಾಟ್‌ ಹಾಗೂ ಮೆಂಟರ್‌ ಭಾರತದ ಆಜಯ್‌ ಜಡೆಜಾ ಅವರೊಂದಿಗೆ ಕೆಲ ಹೊತ್ತು ಮಾತುಕತೆ ನಡೆಸಿದರು. ವಿಶ್ವಕಪ್‌ ವಿಜೇತ ಮಾಜಿ ತಂಡಗಳಾದ ಶ್ರೀಲಂಕ, ಪಾಕಿಸ್ತಾನ ಹಾಗೂ ಕಳೆದ ಬಾರಿಯ ಚಾಂಪಿಯನ್‌ ಇಂಗ್ಲೆಂಡ್‌ ತಂಡಗಳನ್ನು ಮಣಿಸಿರುವ ಅಫಘಾನಿಸ್ತಾನ ತಂಡ ನಾಳೆಯ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು ಮಣಿಸಿದರೆ ಒಟ್ಟು ನಾಲ್ಕು ಮಾಜಿ ವಿಶ್ವ ಚಾಂಪಿಯನ್ನರನ್ನು ಮಣಿಸಿದಂತಾಗುತ್ತದೆ. ಸೆಮಿಫೈನಲ್‌ ಪ್ರವೇಶಿಸಬೇಕಾದರೆ ಅಫಘಾನಿಸ್ತಾನ ತಂಡ ಜಯದ ಜೊತೆಗೆ ರನ್‌ ಸರಾಸರಿಯನ್ನೂ ಉತ್ತಮಪಡಿಸಿಕೊಳ್ಳಬೇಕಾಗಿದೆ.

Related Articles