Tuesday, March 19, 2024

ಚಳಿಗಾಲದ ಯೂಥ್ ಒಲಿಂಪಿಕ್ಸ್ ಪದಕ ವಿನ್ಯಾಸ ಅನಾವರಣ

ಜಿನೆವಾ:  2020ರ ಚಳಿಗಾಲದ ಯೂಥ್ ಒಲಿಂಪಿಕ್‌ ಕ್ರೀಡಾಕೂಟದ ಪದಕ ವಿನ್ಯಾಸವನ್ನು ಸ್ವಿಜರ್ಲೆಂಡ್‌ನ ಲಾಸನ್ನೆಯಲ್ಲಿ ಅಂತಾರಾಷ್ಟ್ರೀಯ ಒಲಿಂಪಿಕ್‌ ಸಮಿತಿ ಅನಾವರಣಗೊಳಿಸಿತು.

“ನ್ಯೂಜಿಲೆಂಡ್‌ನ 20 ವರ್ಷ ವಯಸ್ಸಿನ ಝಕಿಯ ಪೇಜ್ ಸಲ್ಲಿಸಿದ “ಡೈವರ್ಸಿಟಿ ಸೌಂದರ್ಯ” ಎಂಬ ಹೆಸರಿನ ವಿನ್ಯಾಸವನ್ನು ಅಂತಿಮವಾಗಿ ಸ್ವೀಕರಿಸಲಾಗಿದೆ. 60 ದೇಶಗಳು ಮತ್ತು ಪ್ರದೇಶಗಳಿಂದ ಸುಮಾರು 300 ನಮೂದುಗಳು ಸಲ್ಲಿಕೆಯಾಗಿದ್ದವು. ಅಂತಿಮವಾಗಿ ನ್ಯೂಜಿಲೆಂಡ್‌ ಯುವಕನ ವಿನ್ಯಾಸ ಆಯ್ಕೆ ಮಾಡಲಾಗಿದೆ” ಎಂದು ಐಒಸಿ ಮಂಗಳವಾರ ತಿಳಿಸಿದೆ.
ಯಂಗ್ ಚೇಂಜ್-ಮೇಕರ್ಸ್, ಯುವ ವರದಿಗಾರರು, ಐಓಸಿ ಸದಸ್ಯ ಡ್ಯಾಂಕಾ ಬಾರ್ಟೆಕೊವಾ, ಲಾಸನ್ನೆ 2020 ಅಧ್ಯಕ್ಷ ವರ್ಜೀನಿ ಫೈವೇರೆ ಮತ್ತು ಇರಾಕ್ಯಾಮ್ (ಲಾಸನ್ನೆ ಕಲಾ ಶಾಲೆ) ಡೀನ್ ವಿವಿಯೆನ್ ಮೊರೆ ಅವರನ್ನೊಳಗೊಂಡ ನ್ಯಾಯಾಧೀಶರ ಸಮಿತಿಯಿಂದ ಇದನ್ನು ಆಯ್ಕೆ ಮಾಡಲಾಯಿತು.

ಯುವ ವಿನ್ಯಾಸಕಾರ ಝಕಿಯ ಅವರು 2020ರ ಚಳಿಗಾಲದ ಒಲಿಂಪಿಕ್‌ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಲಿದ್ದಾರೆ. ಜತೆಗೆ, ಒಲಿಂಪಿಕ್ ಕ್ರೀಡಾಕೂಟದಲ್ಲಿ ವಿಜೇತರಿಗೆ ತಾನು ವಿನ್ಯಾಸ ಮಾಡಿದ ಪದಕವನ್ನು ನೀಡಲಿದ್ದಾರೆ.
ಈ ವೇಳೆ ಎರಡು ರನ್ನರ್-ಅಪ್ ವಿನ್ಯಾಸಗಳನ್ನು ಸಹ ಆಯ್ಕೆ ಮಾಡಲಾಗಿದೆ. ಎರಡನೇ ಸ್ಥಾನದಲ್ಲಿ  ವಿನ್ಯಾಸ “ದಿ ಸ್ಟಾರ್ ಆಫ್ ದಿ ಆಲ್ಪ್ಸ್ ಈಸ್ ಯು” ವಿನ್ಯಾಸ ಮಾಡಿದ 28 ನೇ ವರ್ಷ ವಯಸ್ಸಿನ ಫ್ರಾನ್ಸ್‌ನ ಜೊಹಾನ್ ಪೊಝಾಟ್ ಅವರಿಗೆ ಎರಡನೇ ಸ್ಥಾನ ಹಾಗೂ “ವಿಂಗ್ಸ್ ಆಫ್ ಎ ಚಾಂಪಿಯನ್” ಎಂಬ ವಿನ್ಯಾಸ ಮಾಡಿದ ಫಿಲಿಪೈನ್ಸ್‌ನ ಮಿಶೈಲ್ ಜಾಕೋಬ್ ಪ್ಯುಬ್ಲಾಸ್ ಎಂಬಾತನನ್ನು ಮೂರನೇ ಸ್ಥಾನಕ್ಕೆ ಆಯ್ಕೆ ಮಾಡಲಾಗಿದೆ.

Related Articles