Thursday, October 10, 2024

ಒಲಿಂಪಿಕ್ಸ್‌ ನಡೆಯುವುದೇ ಐಕ್ಯತೆಗೆ, ಧರ್ಮ ಪ್ರಚಾರಕ್ಕಲ್ಲ!

ಪ್ಯಾರಿಸ್‌: ಪ್ಯಾರಿಸ್‌ನಲ್ಲಿ ನಡೆಯುತ್ತಿರುವ ಪ್ಯಾರಾಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಇರಾನಿನ ಜಾವೆಲಿನ್‌ ಎಸೆತಗಾರ ಸಾದೇಗ್‌ ಸಯ್ಹಾ ಬೇಟ್‌ Sadegh Beit Sayah ವಿಶ್ವ ದಾಖಲೆಯೊಂದಿಗೆ ಚಿನ್ನ ಗೆದ್ದರೂ ಕೆಲ ಹೊತ್ತಿನಲ್ಲೇ ಅವರನ್ನು ಅನರ್ಹಗೊಳಿಸಿ ಚಿನ್ನವನ್ನು ಭಾರತದ ಸ್ಪರ್ಧಿ ನವದೀಪ್‌ಗೆ ನೀಡಲಾಯಿತು. ಸಾದೇಗ್‌ ತೋರಿಸಿದ್ದು ಯಾವ ಸಂಘಟನೆಯ ಧ್ವಜ ಎಂಬುದು ಈಗ ಚರ್ಚೆಯ ವಿಷಯವಾಗಿದೆ. ಕ್ರೀಡಾಂಗಣದಲ್ಲಿ ನಿಮ್ಮ ಕ್ರೀಡಾ ಸಾಮರ್ಥ್ಯ ಮತ್ತು ಸ್ಫೂರ್ತಿಯನ್ನು ತೋರಿಸಿ ಹೊರತು ಧರ್ಮ ಪ್ರಚಾರವನ್ನಲ್ಲ. Show your sportsman spirit and Don’t show your religious activities in Olympics participation.

ಒಲಿಂಪಿಕ್ಸ್‌ನಲ್ಲಿ ಪದಕ ಗೆಲ್ಲಿ ಅಥವಾ ಗೆಲ್ಲದಿರಿ ಆದರೆ ಒಲಿಂಪಿಕ್ಸ್‌ ನಿಯಮಗಳನ್ನು ಪಾಲಿಸುವುದು ಕಡ್ಡಾಯ. ಅದು 100 ಗ್ರಾಂ ಆಗಿರಬಹುದು 100ಕೆಜಿಯೇ ಆಗಿರಬಹುದು. ಅದು ದೇಶದ ಹೆಣ್ಣು ಮಕ್ಕಳ ಪರವಾಗಿರುವ ಧ್ವನಿಯೇ ಆಗಿರಬಹುದು, ಆದರೆ ಪ್ರತಿಯೊಂದಕ್ಕೂ ಸೂಕ್ತ ಸ್ಥಳ ಇದೆ. ಆದರೆ ಇದ್ಯಾವುದಕ್ಕೂ ಒಲಿಂಪಿಕ್ಸ್‌ ಅಂಗಣದಲ್ಲಿ ಸ್ಪರ್ಧಿಸುವ ಸ್ಪರ್ಧಿಗೆ ಅವಕಾಶವಿಲ್ಲ.

ಯಾವುದರ ಸಂದೇಶ?

ಇರಾನಿನ ಸ್ಪರ್ಧಿ ಸಾದೇಗ್‌ ಅವರ ಉದ್ದೇಶ ಏನೆಂಬುದು ಯಾರಿಗೂ ಗೊತ್ತಿಲ್ಲ. ಪದಕ ಗೆದ್ದ ನಂತರ ಇರಾನಿನ ಧ್ವಜವನ್ನು ಪ್ರದರ್ಶಿಸುವ ಬದಲು ಇನ್ನಾವುದೋ ಧ್ವಜವನ್ನು ಪ್ರದರ್ಶಿಸಿ ಚಿನ್ನ ಕಳೆದುಕೊಳ್ಳಬೇಕಾಯಿತು.

ಧ್ವಜ ಏನನ್ನು ಗುರುತಿಸುತ್ತದೆ?: ಸಾದೇಗ್‌ ತೋರಿಸಿದ ಧ್ವಜ ಕಪ್ಪು ಬಣ್ಣದಾಗಿದ್ದು, ಅದರಲ್ಲಿ ಅರೆಬಿಕ್‌ ಅಕ್ಷರವಿದೆ. ಸೋಷಿಯಲ್‌ ಮೀಡಿಯಾದಲ್ಲಿ ಯಾವುದೋ ಉಗ್ರ ಸಂಘಟನೆಯ ಬೆಂಬಲಿಸುವ ಧ್ವಜ ಆಗಿರಬಹುದೇ ಎಂದು ಚರ್ಚಿಸಲಾಗುತ್ತಿದೆ. ಇನ್ನು ಕೆಲವರು ಆತ ಧ್ವಜ ತೋರಿಸಿದ್ದಕ್ಕೆ ಚಿನ್ನ ಕಳೆದುಕೊಂಡಿಲ್ಲ ಬದಲಾಗಿ ಎದುರಾಳಿ ಸ್ಪರ್ಧಿಗೆ “ಕತ್ತು ಕತ್ತರಿಸುವ” ಸಂಜ್ಞೆ ಮಾಡಿದ್ದ ಈ ಕಾರಣದಿಂದಾಗಿ ನಿಷೇಧಕ್ಕೊಳಗಾದ ಎಂಬ ಪ್ರತಿಕ್ರಿಯೆಗಳು ಕಂಡು ಬಂದಿವೆ.

“ಇದೊಂದು ಧಾರ್ಮಿಕ ಧ್ವಜ ಎಂಬುದು ಸತ್ಯ, ಒಲಿಂಪಿಕ್ಸ್‌ ನಿಯಮವನ್ನು ಪಾಲಿಸುವುದು ಕಡ್ಡಾಯ. ನಿರಾಶ್ರಿತರ ಒಲಿಂಪಿಕ್ಸ್‌ ತಂಡವನ್ನು ಪ್ರತಿನಿಧಿಸುತ್ತಿದ್ದ ಮನೀಜಾ ತಲಾಶ್‌ “Free Afghan Women” ಎಂಬ ಫಲಕ ಪ್ರದರ್ಶಿಸಿ ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಲಾಯಿತು. ಧ್ವಜದಲ್ಲಿ ಬರೆದದ್ದು ಇಷ್ಟೆ. Ya Hussien (Oh Hussien) ಎನ್ನಲಾಗುತ್ತಿದೆ. ಶಿಯಾ ಇಸ್ಲಾಮ್‌ನಲ್ಲಿ ಪ್ರಮುಖ ನಂಬಿಕೆಯ ಧಾರ್ಮಿಕ ನಾಯಕ. ಶಿಯಾ ಮುಸ್ಲಿಮರು ಉಪವಾಸದ ಸಂದರ್ಭದಲ್ಲಿ ಈ ಧ್ವಜವನ್ನು ಆರೋಹಣ ಮಾಡುತ್ತಾರೆ ಎಂದೆನ್ನಲಾಗಿದೆ.

Related Articles