Monday, April 15, 2024

ತಮಿಳುನಾಡಿನಲ್ಲಿ ಕನ್ನಡಿಗರ ಸಂಭ್ರಮ

ಸ್ಪೋರ್ಟ್ಸ್ ಮೇಲ್ ವರದಿ

ತಮಿಳುನಾಡು ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ 3-1 ಸೆಟ್‌ಗಳ ಅಂತರದಲ್ಲಿ ಜಯ ಗಳಿಸಿದ ಕರ್ನಾಟಕ ತಂಡ ರಾಷ್ಟ್ರೀಯ ವಾಲಿಬಾಲ್‌ನಲ್ಲಿ ಹೊಸ ಇತಿಹಾಸ ಬರೆಯಿತು. ಭಾರತದ ವಾಲಿಬಾಲ್ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು.

ಫೈನಲ್ ಪಂದ್ಯದಲ್ಲಿ ರಾಜ್ಯ ತಂಡ 21-25, 36-34,25-18,25-14 ಅಂತರದಲ್ಲಿ ಗೆದ್ದು ಸಂಭ್ರಮಿಸಿತು. ತಮಿಳುನಾಡ ತಂಡಕ್ಕೆ ಮನೆಯಂಗಣದ ಪ್ರೇಕ್ಷಕರ ಬೆಂಬಲವಿದ್ದರೂ  ಕರ್ನಾಟಕ ಆಟದಲ್ಲಿ ನೈಜ ಸಾಮರ್ಥ್ಯ ತೋರಿ ಪ್ರಶಸ್ತಿ ಗೆದ್ದುಕೊಂಡಿತು.
ಮೊದಲ ಸೆಟ್‌ನಲ್ಲಿ ಸೋಲಿನ ಆಘಾತ ಕಂಡರೂ ತಂಡದ ಆಟಗಾರರು ಕೋಚ್ ಲಕ್ಷ್ಮೀನಾರಾಯಣ ಅವರ ಸ್ಫೂರ್ತಿಯ ಮಾತು ಹಾಗೂ ತಂತ್ರದಿಂದ ಪ್ರೇರಣೆಗೊಂಡು ಎರಡನೇ ಸೆಟ್‌ನಲ್ಲಿ 36-34 ಅಂತರದಲ್ಲಿ ಗೆದ್ದಿರುವುದು ಮುಂದಿನ ಎರಡು ಸೆಟ್‌ಗಳ ಜಯಕ್ಕೆ ಅದು ವೇದಿಕೆಯಾಯಿತು. ಕರ್ನಾಟಕ ವಾಲಿಬಾಲ್‌ನ ಸದಸ್ಯದ ಪರಿಸ್ಥಿತಿಗೆ ಈ ಚಾಂಪಿಯನ್‌ಷಿಪ್‌ನಲ್ಲಿ ಗೆಲ್ಲುವುದು ಅಗತ್ಯವಿದ್ದಿತ್ತು. ಆಟಗಾರರು ಸದ್ಯದ ಪರಿಸ್ಥಿತಿಯನ್ನು ಅರಿತು ಆಡಿರುವುದು ನಿಜವಾಗಿಯೂ ಸ್ತುತ್ಯರ್ಹ. 67 ವರ್ಷಗಳ ಇತಿಹಾಸದಲ್ಲಿ ಕರ್ನಾಟಕ ಇದೇ ಮೊದಲ ಬಾರಿಗೆ ಪ್ರಶಸ್ತಿ ಗೆದ್ದಿತು.
ಇವರು ಇತಿಹಾಸ ಬರೆದ ಆಟಗಾರರು
ಕಾರ್ತಿಕ್ ಎ (ನಾಯಕ), ಅಶ್ವಲ್ ರೈ, ಭರತ್, ರವಿಕುಮಾರ್ ಟಿ.ಡಿ., ನಕುಲ್ದೇವ್, ರೈಸನ್ ಬೆನೆಟ್ ರೆಬೆಲ್ಲೊ, ಸುಜಿತ್ ಕುಮಾರ್, ಕಾರ್ತಿಕ್ ಎಸ್.ಎ., ಗಣೇಶ್ ಗೌಡ, ವಿನಾಯಕ ರೋಖಡೆ, ದರ್ಶನ್ ಎಸ್. ಗೌಡ, ಪ್ರತೀಕ್ ಶೆಟ್ಟಿ. 
ಪ್ರಧಾನ ಕೋಚ್- ಲಕ್ಷ್ಮೀನಾರಾಯಣ ಕೆ.ಆರ್.

Related Articles