Saturday, July 27, 2024

ವೆಲ್ಸ್ ಗ್ಲಾಡಿಯೇಟರ್ಸ್ ತಂಡಕ್ಕೆ ಸೈಫಾ ವಾಲಿಬಾಲ್ ಲೀಗ್ ಪ್ರಶಸ್ತಿ

ಸ್ಪೋರ್ಟ್ಸ್ ಮೇಲ್ ವರದಿ

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ)ಯಲ್ಲಿ ನೆಲೆಸಿರುವ ಕನ್ನಡಿಗರಿಗಾಗಿ ಸೈಫಾ  ಫ್ರೆಂಡ್ಸ್ ಆಯೋಜಿಸಿರುವ ಸೈಫಾ  ವಾಲಿಬಾಲ್ ಲೀಗ್ ಚಾಂಪಿಯನ್ ಪಟ್ಟವನ್ನು ಅದ್ವಿಕಾ ಎ. ರಾವ್ ಮಾಲೀಕತ್ವದ ವೆಲ್ಸ್ ಗ್ಲಾಡಿಯೇಟರ್ಸ್ ತಂಡ ಗೆದ್ದುಕೊಂಡಿದೆ.

ಪ್ರತಿಯೊಂದು ಪಂದ್ಯದಲ್ಲೂ ಜಯ ಗಳಿಸಿ ಫೈನಲ್ ತಲುಪಿದ್ದ ವೆಲ್ಸ್ ಗ್ಲಾಡಿಯೇಟರ್ಸ್ ತಂಡ ಹೀಟ್‌ಶೀಲ್ಡ್ ಶಿಮಂತೂರು ತಂಡವನ್ನು 2-0 ಸೆಟ್ ಅಂತರದಲ್ಲಿ ಮಣಿಸಿ ಪ್ರಶಸ್ತಿ ಗೆದ್ದುಕೊಂಡಿತು. ವೆಲ್ಸ್ ಗ್ಲಾಡಿಯೇಟರ್ಸ್ ತಂಡದ ಮ್ಯಾನೇಜರ್ ಆಗಿ ಅಭೀಶ್ ಹಾಗೂ ನಿತ್ಯಾನಂದ ಸುವರ್ಣ ಕಾರ್ಯ ನಿರ್ವಹಿಸಿರುತ್ತಾರೆ. ಹೀಟ್ ಶೀಲ್ಡ್ ಶಿಮಂತೂರ್ ತಂಡದ ಮಾಲೀಕರು ಪ್ರೇಮನಾಥ್ ಶೆಟ್ಟಿ ಹಾಗೂ ಮ್ಯಾನೇಜರ್ ಸಾಜನ್.
ಚಾಂಪಿಯನ್‌ಷಿಪ್‌ನಲ್ಲಿ ಬೆಸ್ಟ್ ಸೆಟ್ಟರ್ ಆಗಿ ವೆಲ್ಸ್ ಗ್ಲಾಡಿಯೇಟರ್ಸ್‌ನ ಬಿಬಿನ್ ಮೂಡಿ ಬಂದರು. ಹೀಟ್ ಶೀಲ್ಡ್  ಶಿಮಂತೂರ್ ತಂಡದ ಸುಜಿತ್ ಉತ್ತಮ ಸ್ಮ್ಯಾಶರ್ ಗೌರವಕ್ಕೆ ಪಾತ್ರರಾದರು. ವೆಲ್ಸ್ ಗ್ಲಾಡಿಯೇಟರ್ಸ್‌ನ ಆಕಾಶ್ ಉತ್ತಮ ಆಲ್ರೌಂಡರ್ ಗೌರವಕ್ಕೆ ಪಾತ್ರರಾದರು. ಎಂಟು ತಂಡಗಳು ಪಾಲ್ಗೊಂಡಿದ್ದ  ಈ ಚಾಂಪಿಯನ್‌ಷಿಪ್ ಅಜ್ಮಾನ್‌ನ ಅಜ್ಮಾನ್ ಯೂತ್ ಕ್ಲಬ್ ಅಂಗಣದಲ್ಲಿ ನಡೆಯಿತು. ವೆಲ್ಸ್ ಗ್ಲಾಡಿಯೇಟರ್ಸ್ ತಂಡ ಇಡೀ ಲೀಗ್‌ನಲ್ಲಿ ಒಂದೂ ಸೆಟ್ ಕಳೆದುಕೊಳ್ಳದೆ ಪ್ರಶಸ್ತಿ ಗೆದ್ದಿರುವುದು ವಿಶೇಷ.
ವೇಲ್ಸ್ ಗ್ಲಾಡಿಯೇಟರ್ಸ್, ಟೆಕ್ಸ್‌ಸೋಡಸ್ ಕಣ್ಣೂರು, ಕಾನ್ಸೆಪ್ಟ್ ಕ್ರಿಯೇಶನ್ಸ್, ಹೀಟ್ ಶೀಲ್ಡ್ ಶಿಮಂತೂರ್, ಜಾಸ್ಬಾ ಸ್ಪೋರ್ಟ್ಸ್ ಕ್ಲಬ್, ಗಂಗೊಳ್ಳಿ ಸ್ಟ್ರೈಕರ್ಸ್, ರಾಯಲ್ ಸ್ಮ್ಯಾಶರ್ಸ್ ಹಾಗೂ ಅಲ್‌ಮದೀಹಾ ಟೆಕ್ ಟೂರ್ನಿಯಲ್ಲಿ ಪಾಲ್ರಗೊಂಡ ತಂಡಗಳು.
ಲೀಗ್ ಹಂತದಲ್ಲಿ ಒಟ್ಟು 12 ಪಂದ್ಯಗಳು ನಡೆದವು. ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹೀಟ್ ಶೀಲ್ಡ್ ಶಿಮಂತೂರ್ ತಂಡ ಜಾಸ್ಬಾ ಸ್ಪೋರ್ಟ್ಸ್ ಕ್ಲಬ್ ವಿರುದ್ಧ 2-1 ಸೆಟ್‌ಗಳ ಅಂತರದಲ್ಲಿ ಗೆದ್ದು ಫೈನಲ್ ಪ್ರವೇಶಿಸಿದರೆ, ವೆಲ್ಸ್ ಗ್ಲಾಡಿಯೇಟರ್ಸ್ 2-0 ಅಂತರದಲ್ಲಿ ಅಲ್ ಮದೀಹ ಟೆಕ್ ತಂಡವನ್ನು ಸೋಲಿಸಿ ಫೈನಲ್‌ಗೆ ಲಗ್ಗೆ ಇಟ್ಟಿತು.
ಚಾಂಪಿಯನ್ ವೆಲ್ಸ್ ಗ್ಲಾಡಿಯೇಟರ್ಸ್ ತಂಡದ ಆಟಗಾರರು : ಬಿಬಿನ್ ಫಿಲಿಪ್ ಸಿ, ಅಭಿಲಾಶ್, ಆಕಾಶ್, ಜಾನ್ಸನ್, ರಾಹುಲ್, ಮುಜಾಹಿದೀನ್, ಶಂಸು ಹಾಗೂ ಅಜೀಜ್.

Related Articles