ದಕ್ಷಿಣ ವಲಯ ಈಜು: ಕರ್ನಾಟಕ ಚಾಂಪಿಯನ್

0
176
ಸ್ಪೋರ್ಟ್ಸ್ ಮೇಲ್ ವರದಿ

ವಿಜಯವಾಡದಲ್ಲಿ ನಡೆದ 31ನೇ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ 1298 ಅಂಕಗಳನ್ನು ಗಳಿಸಿದ ಕರ್ನಾಟಕ ತಂಡ ಸಮಗ್ರ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.

736 ಅಂಕ ಗಳಿಸಿದ ತಮಿಳುನಾಡು ರನ್ನರ್ ಅಪ್ ಗೌರವಕ್ಕೆ ಪಾತ್ರವಾಗಿದೆ.
ವಾಟರ್ ಪೋಲೋ ಚಾಂಪಿಯನ್‌ಷಿಪ್‌ನ ಪುರುಷರ ವಿಭಾಗದಲ್ಲಿ ಕೇರಳ ತಂಡ ಹಾಗೂ ವನಿತೆಯರ ವಿಭಾಗದಲ್ಲೂ ಕೇರಳ ತಂಡ ಚಾಂಪಿಯನ್ ಪಟ್ಟ ಗೆದ್ದುಕೊಂಡಿತು. ಎರಡೂ ವಿಭಾಗದಲ್ಲೂ ಕರ್ನಾಟಕ ರನ್ನರ್ ಅಪ್ ಎನಿಸಿತು.
ಪುರುಷರ ವಿಭಾಗದಲ್ಲಿ ಕರ್ನಾಟಕದ ಸಂಜಯ್ ಸಿ. 33 ಅಂಕಗಳನ್ನು ಗಳಿಸಿ ಚಾಂಪಿಯನ್‌ಪಟ್ಟ ಗೆದ್ದುಕೊಂಡಿದ್ದಾರೆ. ಕರ್ನಾಟಕದವರೇ ಆದ ಕಲ್ಪ್ ಎಸ್. ಭೋರಾ 33 ಅಂಕಗಳನ್ನು ಗಳಿಸಿ ಎರಡನೇ ಸ್ಥಾನವಾದರು.  25 ಅಂಕ ಗಳಿಸಿದ ಕರ್ನಾಟಕದ ವಿದಿತ್ ಮೂರನೇ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದಲ್ಲಿ ಕರ್ನಾಟಕದ ಸಾಚಿ ಜಿ 33 ಅಂಕ ಗಳಿಸಿ ಅಗ್ರ ಸ್ಥಾನ ಗಲಿಸಿದರು.