Friday, February 23, 2024

ರಿಶಿ ರೆಡ್ಡಿಗೆ ಚಾಂಪಿಯನ್ ಪಟ್ಟ

ಪಿಬಿಐ-ಸಿಎಸ್ಇ ಟೆನಿಸ್ ಅಕಾಡೆಮಿ, ಪಡುಕೋಣೆ –ದ್ರಾವಿಡ್ ಸೆಂಟರ್ ಫಾರ್ ಸ್ಪೋರ್ಟ್ಸ್ ಎಕ್ಸಲೆನ್ಸ್  ಆಶ್ರಯದಲ್ಲಿ ನಡೆದ 1 ಲಕ್ಷ ರೂ. ಬಹುಮಾನ ಮೊತ್ತದ ಎಐಟಿಎ ಪುರುಷರ ಚಾಂಪಿಯನ್ಷಿಪ್ ನಲ್ಲಿ ಕರ್ನಾಟಕದ ರಿಶಿ ರೆಡ್ಡಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿದ್ದಾರೆ.

ಫೈನಲ್ ಪಂದ್ಯದಲ್ಲಿ ಗುಜರಾತಿನ ಮಾಧ್ವಿನ್ ಕಾಮತ್ ವಿರುದ್ಧ 6-3, 6-2 ಅಂತರದಲ್ಲಿ ಗೆದ್ದ ರಿಶಿ ಪ್ರಶಸ್ತಿ ತಮ್ಮದಾಗಿಸಿಕೊಂಡರು. “ಕಳೆದ ವಾರದಲ್ಲಿ ಮಾಡಿದ ತಪ್ಪುಗಳನ್ನು ಈ ವಾರ ಸರಿಪಡಿಸಿಕೊಂಡ ಕಾರಣ ಜಯದ ಹಾದಿ ಸುಗಮವಾಯಿತು ಎಂದು ಬೆಂಗಳೂರಿನ ಜೈನ್ ಕಾಲೇಜಿನ ವಿದ್ಯಾರ್ಥಿ ರಿಶಿ ರೆಡ್ಡಿ ಹೇಳಿದ್ದಾರೆ.

ಮೊದಲ ಸೆಟ್ ನ ನಾಲ್ಕನೇ ಗೇಮ್ ಅತ್ಯಂತ ರೋಚಕವಾಗಿ ನಡೆಯಿತು. 22 ವರ್ಷದ ರಿಶಿ ಅಂತಿಮವಾಗಿ ಐದನೇ ಗೇಮ್ ನಲ್ಲಿ ಸೆಟ್ ತಮ್ಮದಾಗಿಸಿಕೊಂಡರು. ಜೈನ್ ಕಾಲೇಜಿನ ವಿದ್ಯಾರ್ಥಿಗಳ ಪ್ರೋತ್ಸಾಹದಲ್ಲಿ ಪಂದ್ಯದಲ್ಲಿ ಪ್ರಭುತ್ವ ಸಾಧಿಸಿದ ರಿಶಿ  6-2 ಅಂತರದಲ್ಲಿ ಎರಡನೇ ಸೆಟ್ ಗೆದ್ದು ಚಾಂಪಿಯನ್ ಪಟ್ಟ ತಮ್ಮದಾಗಿಸಿಕೊಂಡರು.

ಸೋಮವಾರದಿಂದ ರಾಜ್ಯ ಲಾನ್ ಟೆನಿಸ್ ಸಂಸ್ಥೆಯಲ್ಲಿ ತತ್ವಂ ಪ್ರತಿಭಾ ಸರಣಿ ಆರಂಭಗೊಳ್ಳಲಿದೆ.

Related Articles