Friday, October 4, 2024

ರಾಜ್ಯೋತ್ಸವಕ್ಕೆ ಚಿನ್ನದ ಉಡುಗೊರೆ ನೀಡಿದ ಮೈಸೂರಿನ ಪ್ರಜ್ವಲ್‌

ಬೆಂಗಳೂರು: ಗೋವಾದಲ್ಲಿ ನಡೆಯುತ್ತಿರುವ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಟೆನಿಸ್‌ ತಂಡವು ಚಿನ್ನದ ಪದಕ ಗೆಲ್ಲುವ ಮೂಲಕ ರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಿಸಿತು. Karnataka State men’s tennis team celebrated the Rajyotsava Day in grand style by winning the Gold Medal.

ಗೋವಾದ ಫಟೋರ್ಡಾ ಅಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ ಕರ್ನಾಟಕ ತಂಡ ತಮಿಳುನಾಡು ವಿರುದ್ಧ 2-1 ಅಂತರದಲ್ಲಿ ಜಯ ಗಳಿಸಿತು.

ಆರಂಭಿಕ ಸಿಂಗಲ್ಸ್‌ ಪಂದ್ಯದಲ್ಲಿ ಕರ್ನಾಟಕದ ಸೂರಜ್‌ ಪ್ರಬೋಧ್‌ ತಮಿಳುನಾಡಿನ ಮನೀಶ್‌ ಕುಮಾರ್‌ ವಿರುದ್ಧ ಸೋಲನುಭವಿಸಿದ ನಂತರ ಪ್ರಜ್ವಲ್‌ ದೇವ್‌ ಕರ್ನಾಟಕದ ಜಯದ ರೂವಾರಿ ಎನಿಸಿದರು. ಮೈಸೂರಿನ ಸೂರಜ್‌ 3-6, 2-6 ಅಂತರದಲ್ಲಿ ಸೋಲನುಭವಿಸಿದರು. ಮೈಸೂರಿನವರೇ ಆದ ಪ್ರಜ್ವಲ್‌ ಏಷ್ಯನ್‌ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ರಾಮ್‌ಕುಮಾರ್‌ ರಮಾನಾಥನ್‌ ಅವರನ್ನು 6-1, 6-3 ಅಂತರದಲ್ಲಿ ಜಯ ಗಳಿಸಿದರು.

ನಿರ್ಣಾಯಕ ಡಬಲ್ಸ್‌ ಪಂದ್ಯಲದಲಿ ಪ್ರಜ್ವಲ್‌ ದೇವ್‌ ಮತ್ತು ಆದಿಲ್‌ ಕಲ್ಯಾಣ್‌ಪುರ್‌ ಜೋಡಿ ಜೀವ್‌ ಎನ್‌ ಹಾಗೂ ಓಜೆಸ್‌ ಜಯಪ್ರಕಾಶ್‌ ಜೋಡಿಯನ್ನು ಅತ್ಯಂತ ರೋಚಕ ಪಂದ್ಯದಲ್ಲಿ 7-6 (9-7), 6-3 ಅಂತರದಲ್ಲಿ ಮಣಿಸಿ ಚಿನ್ನಕ್ಕೆ ಮುತ್ತಿಟ್ಟರು.

ಜಯದ ನಂತರ ಮಾತನಾಡಿದ ಕ್ಯಾಪ್ಟನ್‌ ಗೋಪಿನಾಥ್‌ “ಈ ಜಯ ಕಠಿಣ ಪರಿಶ್ರಮದ ಫಲವಾಗಿದೆ. ಕರ್ನಾಟವನ್ನು 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಪ್ರತಿನಿಧಿಸಿ ಚಿನ್ನ ಗೆದ್ದಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ಪ್ರಜ್ವಲ್‌ ನಮ್ಮ ಪಾಲಿನ ಚಿನ್ನ,” ಎಂದರು.

Related Articles