ಸ್ಪೋರ್ಟ್ಸ್ ಮೇಲ್ ವರದಿ
ಟಾರ್ಪೊಡೊಸ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಇದೇ ತಿಂಗಳ 27ರಂದು ಪೊಲೀಸರಿಗಾಗಿ ಅಂತರ್ ಜಿಲ್ಲಾ ಶಟ್ಲ್ ಬ್ಯಾಡ್ಮಿಂಟನ್ ಟೂರ್ನಿ ಆಯೋಜಿಸಲಾಗಿದೆ.
ಹಳೆಯಂಗಡಿಯ ಲೈಟ್‌ಹೌಸ್ ಸಮೀಪವಿರುವ ಟಾರ್ಪೊಡೋಸ್ ಸ್ಪೋರ್ಟ್ಸ್ ಕ್ಲಬ್‌ನಲ್ಲಿ ಪಂದ್ಯಗಳು ನಡೆಯಲಿವೆ. ಪುರುಷರ ಸಿಂಗಲ್ಸ್ ಹಾಗೂ ಡಬಲ್ಸ್, ವನಿತೆಯರ ಸಿಂಗಲ್ಸ್ ಹಾಗೂ ಡಬಲ್ಸ್ ಪಂದ್ಯಗಳು ನಡೆಯಲಿವೆ. ಪ್ರವೇಶ ಶುಲ್ಕ ಸಿಂಗಲ್ಸ್‌ಗೆ 300 ರೂ. ಹಾಗೂ ಡಬಲ್ಸ್‌ಗೆ 400 ರೂ. ಲೀ ನಿಂಗ್ ಬ್ರಾಂಡ್‌ನ ಫೆದರ್ ಶಟಲ್ ಅನ್ನು ಟೂರ್ನಿಗೆ ಬಳಸಲಾಗುತ್ತದೆ. 30 ಅಂಕಗಳ ಒಂದು ಸೆಟ್ ಗೇಮ್ ಆಗಿರುತ್ತದೆ. ನಾಕೌಟ್ ಮಾದರಿಯಲ್ಲಿ ಟೂರ್ನಿ ನಡೆಯಲಿದೆ. ಟೂರ್ನಿ ದಿನವೇ ನೋಂದಾವಣೆಗೆ ಅವಕಾಶ ಇರುವುದಿಲ್ಲ.
ಹೆಚ್ಚಿನ ವಿವರಗಳಿಗೆ ಗಣೇಶ್ ಕಾಮತ್ 8884409014 ಅಥವಾ ಸಂತೋಷ್ 9483077325 ಅವರನ್ನು ಸಂಪರ್ಕಿಸಬಹುದು.