sportsmail
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಆತಿಥ್ಯದಲ್ಲಿ ಡಿಸೆಂಬರ್ 2 ರಿಂದ 11ರವರೆಗೆ ಬೆಂಗಳೂರಿನ ಶಾಂತಿ ನಗರದಲ್ಲಿರುವ ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಹಾಕಿ ಅಂಗಣದಲ್ಲಿ 70ನೇ ರಾಷ್ಟ್ರೀಯ ಪೊಲೀಸ್ ಹಾಕಿ ಚಾಂಪಿಯನ್ಷಿಪ್ ನಡೆಯಲಿದೆ.
ಉದ್ಘಾಟನಾ ಸಮಾರಂಭವನ್ನು ರಾಜ್ಯ ಗೃಹ ಸವಿವ ಅರಗ ಜ್ಞಾನೇಂದ್ರ ನೆರವೇರಿಸುವರು, ಸಮಾರೋಪ ಸಮಾರಂಭವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ನಡೆದಸಿಕೊಡುವರು,
19 ರಾಜ್ಯಗಳ ಪೊಲೀಸ್ ತಂಡಗಳು, 5 ಕೇಂದ್ರೀಯ ಸಶಸ್ತ್ರ ಪೊಲೀಸ್ ಪಡೆಯ ತಂಡಗಳು ಸ್ಪರ್ಧಿಸಲಿವೆ. ಇದೇ ಮೊದಲ ಬಾರಿಗೆ ಆರು ಮಹೀಳಾ ತಂಡಗಳೂ ಪಾಲ್ಗೊಳ್ಳುತ್ತಿವೆ. ಛತ್ತೀಸ್‌ಗಢ, ಮಹಾರಷ್ಟ್ರ, ಒರಿಸ್ಸಾ, ತಮಿಳುನಾಡು, ಸಿಆರ್‌ಪಿಎಫ್ ಮತ್ತು ಎಸ್‌ಎಸ್‌ಬಿ ಮಹಿಳಾ ತಂಡಗಳು ಪಾಲ್ಗೊಳ್ಳಲಿವೆ. ಒಟ್ಟು 30 ತಂಡಗಳ ಆಟಗಾರರು, ಮ್ಯಾನೇಜರ್ ಸೇರಿ ಸುಮಾರು 661 ಮಂದಿ ಈ ಚಾಂಪಿಯನ್ಷಿಪ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
ಅಖಿಲ ಭಾರತ ಪೊಲೀಸ್ ಕ್ರೀಡಾ ನಿಯಂತ್ರಣ ಮಂಡಳಿ, ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ, ರಾಜ್ಯ ಯುವನಜಸೇನಾ ಕ್ರೀಡಾ ಇಲಾಖೆ ಬೆಂಬಲದೊಂದಿಗೆ ಈ ರಾಷ್ಟ್ರೀಯ ಚಾಂಪಿಯನ್ಷಿಪ್ ನಡೆಯಲಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ನಾಲ್ಕನೇ ಬಾರಿಗೆ ರಾಷ್ಟ್ರೀಯ ಪೊಲೀಸ್ ಹಾಕಿ ಚಾಂಪಿಯನ್ಷಿಪ್‌ನ ಆತಿಥ್ಯ ವಹಿಸುತ್ತಿದೆ.1998, 2006 ಮತ್ತು 2013 ರಲ್ಲಿ ಆತಿಥ್ಯ ವಹಿಸಿತ್ತು. 2004ರಲ್ಲಿ ಗುಜರಾತ್‌ನಲ್ಲಿ ನಡೆದ ಚಾಂಪಿಯನ್ಷಿಪ್ ಹಾಗೂ 2013ರಲ್ಲಿ ಕರ್ನಾಟಕದಲ್ಲಿ ನಡೆದ ಚಾಂಪಿಯನ್ಷಿಪ್‌ನಲ್ಲಿ ರಾಜ್ಯ ತಂಡ ಕಂಚಿನ ಪದಕ ಗೆದ್ದಿತ್ತು.
ಬುಧವಾರ ಕರ್ನಾಟಕ ರಾಜ್ಯದ ಡಿಜಿ ಮತ್ತು ಐಜಿಪಿ ಪ್ರವೀಣಸ್ ಸೂದ್ ಅವರು ಚಾಂಪಿಯನ್ಷಿಪ್‌ನ ಲಾಂಛನ ಬಿಡುಗಡೆ ಮಾಡಿದರು. ಅಡಿಷನಲ್ ಡೈರೆಕ್ಟರ್ ಜನರಲ್ ಆಫ್ ಪೊಲೀಸ್ ಅಲೋಕ್ ಕುಮಾರ್ ಉಪಸ್ಥಿತರಿದ್ದರು.